ಕಲಬುರಗಿಯಲ್ಲಿ ಪೆಟ್ರೋಲ್ ಬಂಕ್ ಕ್ಲೋಸ್ – ಜಿಲ್ಲಾಧಿಕಾರಿ

ಕಲಬುರಗಿ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಮುಂದಿನ ಆದೇಶದವರೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಪೆಟ್ರೋಲ್ ಬಂಕ್‍ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ. ಎಷ್ಟೇ ಹೇಳಿದರು ಕೇಳದೆ ರಸ್ತೆಗೆ ಇಳಿಯುತ್ತಿರುವ ಜನಕ್ಕೆ ಜಿಲ್ಲಾಧಿಕಾರಿ ಈ ಕ್ರಮಕ್ಕೆ ಮುಂದಾಗಿದ್ದಾರೆ

ಈ ಆದೇಶವು ಸರ್ಕಾರಿ ವಾಹನಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ವಾಹನ, ಎಲ್ಲಾ ತರಹದ ಅಂಬುಲೆನ್ಸ್ ಗಳು, ಔಷಧ ವ್ಯಾಪಾರಿಗಳು, ಪತ್ರಕರ್ತರು, ಕೆಲವು ಅವಶ್ಯಕ ಸೇವಾ ವ್ಯಾಪ್ತಿ ಪಡುವ ಇಲಾಖೆಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಇಂಧನ ಭರಿಸುವ ಸಮಯದಲ್ಲಿ ಕಡ್ಡಾಯವಾಗಿ ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ ಇಂಧನ ಭರಿಸಬೇಕೆಂದು ಪೆಟ್ರೋಲ್ ಬಂಕ್ ಮಾಲೀಕರಿಗೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!