ಕಾಶ್ಮೀರದ ಬಳಿಕ ಪಾಕಿಸ್ತಾನವೇ ಭಾರತದ ಟಾರ್ಗೆಟ್: ಆತಂಕ ವ್ಯಕ್ತಪಡಿಸಿದ ಇಮ್ರಾನ್ ಖಾನ್
ಜಮ್ಮು-ಕಾಶ್ಮೀರಕ್ಕೆ ನೀಡಿಲಾಗಿದ್ದ ವಿಶೇಷ ಸ್ಥಾನವನ್ನು ರದ್ದು ಮಾಡಿದ್ದನ್ನು ಪ್ರಶ್ನಿಸಿ ಪಾಕ್ ಪ್ರಶ್ನಿಸಿ ಭಾರತ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿತ್ತು. ಬಳಿಕ ಚೀನಾ ಬೆಂಬಲವನ್ನು ಪಡೆದು ಭಾರತದ ಮೇಲೆ ಒತ್ತಡಲು ಯತ್ನಿಸಿದ್ದ ಇಮ್ರಾನ್ ಖಾನ್ ಅವರು ಈಗ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್ ಅವರು, ನಾಜಿ ಸಿದ್ಧಾಂತದಿಂದ ಪ್ರೇರಿತವಾದ ಆರ್ಎಸ್ಎಸ್ನಿಂದ ಕರ್ಫ್ಯೂ, ದಮನ ಮತ್ತು ಕಾಶ್ಮೀರಿಗಳ ನರಮೇಧವು ತೆರೆದುಕೊಳ್ಳುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, “ಜನಾಂಗೀಯ ಶುದ್ಧೀಕರಣದ ಮೂಲಕ ಕಾಶ್ಮೀರದ ಜನಸಂಖ್ಯೆಯನ್ನು ಬದಲಾಯಿಸುವ ಪ್ರಯತ್ನ ನಡೆದಿದೆ. ಮ್ಯೂನಿಚ್ನಲ್ಲಿ ಹಿಟ್ಲರ್ ಮಾಡಿದನ್ನು ಜಗತ್ತು ಮತ್ತೆ ನೋಡುತ್ತದೆಯೇ” ಎಂದು ಪ್ರಶ್ನಿಸಿರುವ ಇಮ್ರಾನ್ ಖಾನ್ ಅವರು, ಎರಡನೇ ಮಹಾಯುದ್ಧದ ಆರಂಭವನ್ನು ನೆನೆದು ಭಾರತದ ಮೇಲೆ ಅಸ್ತ್ರ ಪ್ರಯೋಗ ಮಾಡಿದ್ದಾರೆ.
“ನಾಜಿ ಪ್ರಾಬಲ್ಯವನ್ನು ಅನುಸರಿಸುತ್ತಿರುವ ಹಿಂದೂ ಪ್ರೇರಿತ ಆರ್ಎಸ್ಎಸ್ ಸಿದ್ಧಾಂತಕ್ಕೆ ನಾನು ಹೆದರುತ್ತೇನೆ. ಈ ಸಿದ್ಧಾಂತವು ಭಾರತದಲ್ಲಿ ಮುಸ್ಲಿಮರನ್ನು ನಿಗ್ರಹಿಸಲು ಮತ್ತು ಅಂತಿಮವಾಗಿ ಪಾಕಿಸ್ತಾನವನ್ನು ಗುರಿಯಾಗಿಸಲು ಮುಂದಾಗುತ್ತದೆ. ಹಿಂದೂ ಸರ್ವೋತ್ತಮ ವಾದವು ಹಿಟ್ಲರ್ ಮತ್ತೊಂದು ಆವೃತ್ತಿ” ಎಂದು ಟ್ವೀಟ್ ಮಾಡಿದ್ದಾರೆ.