ಪೇಜಾವರ ಶ್ರೀ ಪ್ರಜ್ಞಾವಸ್ಥೆಯಲ್ಲಿ ಸುಧಾರಣೆ ಕಂಡುಬಂದಿಲ್ಲ: ಹೆಲ್ತ್ ಬುಲೆಟಿನ್
ಮಣಿಪಾಲ: ಕಳೆದ ಒಂದು ವಾರದಿಂದ ಕೆಎಂಸಿ ಅಸ್ಪತ್ರೆಯಲ್ಲಿ ದಾಖಲಾಗಿರುವ ಪೇಜಾವರ ಶ್ರೀ ಆರೋಗ್ಯ ಗಂಭೀರವಾಗಿದ್ದು, ನಿನ್ನೆಯಿಂದ ಸ್ವಾಮೀಜಿಗಳ ಪ್ರಜ್ಞಾವಸ್ಥೆಯಲ್ಲಿ ಸುಧಾರಣೆ ಕಂಡುಬಂದಿಲ್ಲ ಎಂದು ಕೆಎಂಸಿ ಆಸ್ಪತ್ರೆ ವೈದರು ಗುರುವಾರ ಸಂಜೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದ್ದಾರೆ.
ಶ್ವಾಸಕೋಶದ ಸೊಂಕಿಗೆ ನುರಿತ ವೈದರಿಂದ ಚಿಕಿತ್ಸೆ ನೀಡಲಾಗುತ್ತಿದೆ. ನಿಧಾನವಾಗಿ ಶ್ರೀಗಳು ಚೇತರಿಸಿಕೊಳ್ಳುವ ಬಗ್ಗೆ ಬುಧವಾರ ಕೆ ಎಂ ಸಿ ಅಸ್ಪತ್ರೆ ವೈದರು ಹೇಳಿದ್ದರು. ಅದ್ರೆ ಶ್ರೀ ಗಳ ಪ್ರಜ್ಞಾವಸ್ಥೆಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ ಎಂದು ಹೇಳಲಾಗಿದೆ. ಬೆಂಗಳೂರಿನ ನುರಿತ ವೈದರು ಶ್ರೀಗಳಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ.