ಸಂಘಟಿತ ವೈಜ್ಞಾನಿಕ ಕೃಷಿ ಲಾಭಕರ : ಶಾಂತಾರಾಮ್ ಸೂಡಾ

ಉಡುಪಿ: ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಕಾಡುಪ್ರಾಣಿಗಳ ಹಾವಳಿ, ಕೃಷಿ ಕಾರ್ಮಿಕರ ಕೊರತೆ, ಬೇಸಿಗೆಯಲ್ಲಿ ನೀರಿನ ಸಮಸ್ಯೆ, ಕೃಷಿ ಮಾಹಿತಿ ಕೊರತೆಗಳೆಲ್ಲ ಕೃಷಿಕರನ್ನು ತೀವ್ರ ಸಂಕಷ್ಟಕ್ಕೀಡು ಮಾಡುತ್ತಿವೆ. ಕೃಷಿಕ ಸಂಘಟನೆಯ ಮಾರ್ಗದರ್ಶನದಲ್ಲಿ ಎಲ್ಲರೂ ಒಗ್ಗಟ್ಟಾಗಿ ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಲು ಹೊರಟರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯವಿದೆ ಎಂದು ಮಾಜಿ ಮಂಡಲ ಪ್ರಧಾನ ಶಾಂತಾರಾಮ್ ಸೂಡಾ ಕೆ. ಹೇಳಿದರು. ಅವರು ಉಡುಪಿ ಜಿಲ್ಲಾ ಕೃ಼ಷಿಕ ಸಂಘ ಹಿರಿಯಡಕ ವಲಯ ಸಮಿತಿ, ಪೆರ್ಡೂರು ಜೋಗಿಬೆಟ್ಟು ದಿವಾಕರ ಶೆಟ್ಟಿಯವರ ಜ್ಯೋತಿ ಫಾರ್ಮ್‌ನಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ಪೆರ್ಡೂರು ಶ್ರೀ ಅನಂತದ್ಮ ಪದ್ಮನಾಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪ್ರಮೋದ್ ರೈ, ಪೆರ್ಡೂರು ಪಂಚಾಯತ್ ಉಪಾಧ್ಯಕ್ಷ ಸುರೇಶ್ ಸೇರ್ವೇಗಾರ್, ಶ್ರೀಪಾದ ರೈ, ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿಕ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಮತ್ತು ಸಾಧನಾಶೀಲ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ಭಾಗವಹಿಸಿದರು.

ಇಂಚರ ಬಳಗದ ಸಂದೀಪ್ ಕರ್ಕೇರಾ, ಭೋಜ ಪೂಜಾರಿ ಕುಕ್ಕುಂಜಾರು, ರವೀಂದ್ರ ಶೆಟ್ಟಿ, ಯಶೋದಾ ನಾಯ್ಕ್, ಇಂದಿರಾ ಆರ್.ಶೆಟ್ಟಿ, ಸುಲೋಚನಾ ಶೆಟ್ಟಿ, ಸುರೇಶ್ ಪ್ರಭು, ವಿಠಲ ನಾಯ್ಕ್, ಸುಧಾಕರ ಬಾಯಿರಿ, ಆನಂದ ಗೌಡ, ಕಟ್ಟೆ ಪ್ರಕಾಶ್ ಹೆಗ್ಡೆ, ಸುಂದರ ಕುಲಾಲ್, ರಮೇಶ್ ಕುಲಾಲ್,ಗೋಪಾಲ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

ರಮ್ಯ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಜೋಗಿಬೆಟ್ಟು ದಿವಾಕರ ಶೆಟ್ಟಿ ಸ್ವಾಗತಿಸಿದರು.ಪ್ರಕಾಶ್ ಶೆಟ್ಟಿ ಧನ್ಯವಾದವಿತ್ತರು. ಗುರುಮೂರ್ತಿ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!