ಇನ್ನೂ ಸಿಗದ ಮರಳು – ಮತ್ತೆ ಬ್ರಹತ್ ಹೋರಾಟಕ್ಕೆ ಸಂಘಟನೆಗಳ ಸಿದ್ಧತೆ

ಉಡುಪಿ: ಜಿಲ್ಲೆಯ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಪಕ್ಷ ಭೇದ ಮರೆತು ಕಾರ್ಮಿಕ-ಮಾಲೀಕರ ಹದಿಮೂರು ಸಂಘಟನೆಗಳು ನಿನ್ನೆ ಜಂಟಿ ಸಭೆ ನಡೆಸಿವೆ. ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಕಛೇರಿಯಲ್ಲಿ ಸಭೆ  ನಡೆಸಿದ ಸಂಘಟನೆಗಳುಸಂಘಟನೆಗಳು, ಜಿಲ್ಲಾಡಳಿತ ಕಳೆದ 4ವರ್ಷಗಳಿಂದ ಮರಳು ಸಮಸ್ಯೆ ಇದೆ. ಬೇರೆ ಬೇರೆ ಸಂಘಟನೆಗಳು ಸ್ವತಂತ್ರವಾಗಿ ಹೋರಾಟಗಳನ್ನು ನಡೆಸಿ ಮನವಿಗಳನ್ನು ನೀಡಿವೆ.ಆದರೆ ಜಿಲ್ಲಾಡಳಿತ ಹುಸಿ ಭರವಸೆಗಳನ್ನು ನೀಡಿ ಸಮಸ್ಯೆಗಳನ್ನು ಬಗಿಹರಿಸಿಲ್ಲ. ಇತ್ತೀಚೆಗೆ ಸಮಸ್ಯೆ ತೀವ್ರವಾಗಿ ಬಿಗಡಾಯಿಸುತ್ತಿದ್ದರೂ ಇನ್ನೂ ಕೂಡ ಆಗಸ್ಟ್ ತಿಂಗಳಲ್ಲಿ ಜನರಿಗೆ ಮರಳು ದೊರಕಿಸುವ ಬಗ್ಗೆ ಯಾವುದೇ ಕ್ರಮಕೈಗೊಳ್ಳುವ ಕುರಿತು ಚಿಂತಿಸಿಲ್ಲ ಇದರಿಂದಾಗಿ ಈ ವರ್ಷವೂ ಜಿಲ್ಲೆಯ ಜನರಿಗೆ  ಮತ್ತಷ್ಟು ಸಮಸ್ಯೆಗಳು ಬರುವುದು ಖಚಿತವಾಗಿದೆ.ಇನ್ನೊಂದೆಡೆ ಕೆಂಪು ಕಲ್ಲು ಹಾಗು ಶಿಲೆಕಲ್ಲು ಗಣಿಗಾರಿಕೆಗೆ ತಡೆಯೊಡ್ಡುತ್ತಿರುವುದು ಕಾರ್ಮಿಕರು ಇನ್ನಷ್ಟು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗುತ್ತಿದೆ.ಇದರಿಂದ ಜಿಲ್ಲೆಯ ಆರ್ಥಿಕತೆ ಬಾರಿ ಕುಸಿತ ಕಾಣುವ ಲಕ್ಷಣಗಳಿವೆ.ಕಾರ್ಮಿಕರು ಕೆಲಸವಿಲ್ಲದೆ ವಲಸೆ ಹೋಗುವ ಸಂಭವವಿದೆ.ಜಿಲ್ಲೆಯ ಈ ಸಮಸ್ಯೆಗಳನ್ನು ಪರಿಹರಿಸುವ ಜವಬ್ದಾರಿ ಜಿಲ್ಲೆಯ ಜನರ ಮೇಲಿದೆ.ಆ ನಿಟ್ಟಿನಲ್ಲಿ ಮರಳು ಸಮಸ್ಯೆಯನ್ನು ಸಾರ್ವಜನಿಕರ ಬೆಂಬಲದೊಂದಿಗೆ ಜನಚಳುವಳಿಯಾಗಿ ಮಾರ್ಪಡಿಸಲು ಪಕ್ಷಾತೀತ ಹೋರಾಟ ಮಾಡಬೇಕೆಂದು ಸಭೆ ನಿರ್ಧರಿಸಿತು.ಹೋರಾಟದ ಮೊದಲ ಹಂತವಾಗಿ 13ಸಂಘಟನೆಗಳ ಪ್ರಮುಖರ ನಿಯೋಗ ತಕ್ಷಣ ಜಿಲ್ಲಾಧಿಕಾರಿ ಭೇಟಿ ಮಾಡಿ ನಮ್ಮ ಅಹವಾಲು ಸಲ್ಲಿಸುವುದು.

ದುಂಡು ಮೇಜಿನ ಸಭೆ ನಡೆಸುವುದು ನಂತರವೂ ಮರಳುಗಾರಿಕೆ ಆರಂಭವಾಗದಿದ್ದರೆ 2ನೇ ಹಂತದ ಹೋರಾಟ ಸಂಘಟನೆಗಳು ಜಂಟಿಯಾಗಿ ಗ್ರಾಮ ಗ್ರಾಮಗಳಲ್ಲಿ ಅನಿರ್ಧಿಷ್ಟ ಹೋರಾಟಗಳನ್ನು ತೀರ್ಮಾನಿಸುವುದು.ಮುಂದೆ ಜಿಲ್ಲಾಧಿಕಾರಿಗಳ ಕಛೇರಿ ಚಲೋ ನಡೆಸಿ ತೀವ್ರ ರೀತಿಯ ಹೋರಾಟ ಮಾಡುವುದು ಎಂಬ ಅಭಿಪ್ರಾಯಕ್ಕೆ ಜಂಟಿ ಸಭೆ ತೀರ್ಮಾನಿಸಿತು.         ಸಭೆಯಲ್ಲಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶೇಖರ ಬಂಗೇರ,ಪ್ರಧಾನ ಕಾರ್ಯದರ್ಶಿ ಬಾಲಕ್ರಷ್ಣಶೆಟ್ಟಿ,ದಯಾನಂದ ಕೋಟ್ಯಾನ್,ಮರಳಿಗಾಗಿ ಹೋರಾಟ ಸಮಿತಿಯ ಮುಖಂಡರಾದ ಸತ್ಯರಾಜ್ ಬಿರ್ತಿ,ಲಾರಿ ಮಾಲಿಕರ ಸಂಘದ  ಜಿಲ್ಲಾ ಮಖಂಡರಾದ ಪ್ರವೀಣ ಸುವರ್ಣ,ಕಟಪಾಡಿ ಲಾರಿ ಮಾಲಿಕರ ಸಂಘದ ರಾಘವೇಂದ್ರ ಶೆಟ್ಟಿ,ಕುಂದಾಪುರ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ,ಬೈಂದೂರು ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ವೆಂಕಟೇಶ್ ಕೋಣಿ,ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಪಿ.ವಿಶ್ವನಾಥ ರೈ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ಜಿಲ್ಲಾ ಖಜಾಂಚಿ ಶಶಿಧರಗೊಲ್ಲ ಸಿಐಟಿಯು ತಾಲೂಕು ಕಾರ್ಯದರ್ಶಿ ಕವಿರಾಜ್,ವಿಠ್ಠಲಪೂಜಾರಿ ತಮ್ಮ ಅಭಿಪ್ರಾಯ ಮಂಡಿಸಿದರು.

Leave a Reply

Your email address will not be published. Required fields are marked *

error: Content is protected !!