ಉಡುಪಿ ಕನಕದಾಸ ರಸ್ತೆಯಲ್ಲಿ‌ ತೆರೆದ‌ ಒಳಚರಂಡಿ : ಅಪಘಾತಕ್ಕೆ ಆಹ್ವಾನ?

ಉಡುಪಿ: ಸಂಸ್ಕ್ರತ ಕಾಲೇಜು ಬಳಿಯಿಂದ ರಥಬೀದಿ ಸಂರ್ಕಿಸುವ ಕನಕದಾಸ ರಸ್ತೆಯ, ನಡು ರಸ್ತೆಯಲ್ಲಿ ಇರುವ ಡ್ರೈನೆಜ್ ಚೆಂಬರಿನ ಮೇಲಿನ ಮುಚ್ಚಳವು ಬಿರಕು ಬಿದ್ದು ಕಂದಕ ಉಂಟಾಗಿದೆ. ಯಾವುದೇ ಕ್ಷಣದಲ್ಲಿ ಇಲ್ಲಿ ಪ್ರಾಣ ಹಾನಿ ದುರಂತಗಳು ಸಂಭವಿಸಲು ಸಾಧ್ಯತೆವಿದ್ದು, ಈ ರಸ್ತೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ಚಿಕ್ಕ ಮಕ್ಕಳು ,ಯಾತ್ರಿಕರು ಸಂಚರಿಸುತ್ತಾರೆ. ಮಳೆ ನೀರು ರಸ್ತೆಯಲ್ಲಿ ಹರಿದು ಹೋಗುವಾಗ  ಈ ಹೊಂಡ ಕಾಣದೆ   ಗುಂಡಿಗೆ ಬೀಳುವ ಸಾಧ್ಯತೆ ಇದೆ.
ನಗರಸಭೆ ಅಧಿಕಾರಿಗಳು ತುರ್ತಾಗಿ ಈ ಡ್ರೈನೆಜ್ ಮುಚ್ಚಳವನ್ನು ದುರಸ್ಥಿ ಪಡಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!