ಉಡುಪಿ: ತುಳುನಾಡಿನ ಸಂಸ್ಕೃತಿಯಲ್ಲಿ ಒಂದಾದ ಆಟಿ ಅಮಾವಾಸ್ಯೆ ಕಷಾಯ

ತುಳುನಾಡಿನ ಸಂಸ್ಕೃತಿಯಲ್ಲಿ ಒಂದಾದ ಆಟಿ ಅಮಾವಾಸ್ಯೆ ಆಚರಣೆ ಧಾರ್ಮಿಕವಾಗಿ. ವೈಜ್ಞಾನಿಕವಾಗಿ ಅತಿ ಮಹತ್ವ ಹೊಂದಿದೆ. ಹಾಳೆ ಮರವು ಹೂ ಬಿಡುವ ಒಂದು ತಿಂಗಳ ಮೊದಲೇ ಆಟಿ ಅಮಾವಾಸ್ಯೆ ಬರುವುದರಿಂದ ಮರದ ತೊಗಟೆಯಲ್ಲಿ ಔಷಧೀಯ ಗುಣಧರ್ಮ ಹೆಚ್ಚಿರುದರಿಂದ ಅದರಿಂದ ತಯಾರಿಸಿದ ಮದ್ದು / ಕಷಾಯ ಕುಡಿಯುದರಿಂದ ಅನೇಕ ರೋಗ ರುಜಿನಗಳು ದೂರವಾಗುತ್ತದೆ ಎಂದು ಪುರಾತನ ಕಾಲದ ಪಂಡಿತರಿಂದ ಹಿಡಿದು ಈಗಿನ ವೈಜ್ಞಾನಿಕ ಸಂಶೋದಕರು ಕೂಡ ಧೃಡ ಪಡಿಸಿದ್ದಾರೆ.

ಕಳೆದ ವರ್ಷ ಉಡುಪಿ ಕುತ್ಪಾಡಿ  ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಜನಪದ ವೈದ್ಯಕೀಯ ಸಂಶೋದನಾ ಸಂಸ್ಥೆ ಕೂಡ ಆಟಿ ಅಮಾವಾಸ್ಯೆಯ ದಿನ ಹಾಲೆಮರದ ತೊಗಟೆಯಲ್ಲಿ ಔಷದೀಯ ಗುಣಧರ್ಮ ಹೆಚ್ಚಾಗಿರುವುದು ಧೃಡ ಪಡಿಸಿರುತ್ತದೆ.

ಪ್ರಸ್ತುತ ಕಾಲಘಟ್ಟದಲ್ಲಿ ನಾನಾ ಕಾರಣಗಳಿಂದ ಜನರು ಈ ಆಚರಣೆಯಿಂದ ದೂರ ಸರಿಯುವಂತೆ ಮಾಡಿದೆ. ಅದರಿಂದ ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು ತನ್ನ ಸದಸ್ಯರು ಹಾಗೂ ಓಂ ಕೇಟರರ್ಸ್ ಮಾಲಕ ಸಂಜೀವ ಆಮೀನ್ ಸಹಕಾರದೊಂದಿಗೆ ಸುಮಾರು 1000 ಮಂದಿಗೆ ಈ ಪುರಾತನ ಆಚರಣೆಯ ಪ್ರಯೋಜನವನ್ನು ಪಡೆಯಲು ಅನುವು ಮಾಡಿಕೊಟ್ಟಿರುತ್ತೇವೆ.

ಯಾವುದೇ ಜಾತಿ ಧರ್ಮದ ಬೇಧವಿಲ್ಲದೆ , ನಮ್ಮ ಉರ-ಪರ ಉರ ಜನರ ಸ್ಪಂದನೆ ನಿರಂತರ ನಾಲ್ಕು ವರ್ಷದಿಂದ ನಮಗೆ ಪ್ರೇರಣೆಯಾಗಿದ್ದು. ವರ್ಷದಿಂದ ವರ್ಷಕ್ಕೆ ಹೆಚ್ಚೆಚು ಜನರಿಗೆ ಹಾಲೆ ಮರದ ತೊಗಟೆಯ ಪ್ರಯೋಜನ ಪಡೆಯುವ ಅವಕಾಶ ಕಲ್ಪಿಸುವ ಜವಾಬ್ದಾರಿ ನಮ್ಮದಾಗಿದೆ.

Leave a Reply

Your email address will not be published. Required fields are marked *

error: Content is protected !!