ಜಾಲತಾಣದಲ್ಲಿ ಅವಹೇಳನ:1ಕೋಟಿ ರೂ.ಮಾನನಷ್ಟ ದಾವೆ

ಉಡುಪಿ : ಶಿರ್ವ ಚರ್ಚಿನ ಸಹಾಯಕ ಧರ್ಮಗುರು, ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾಮಹೇಶ್‌ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹರಡಿದ ಹಿನ್ನಲೆಯಲ್ಲಿ ಮೂರನೇ ಹೆಚ್ಚುವರಿ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕುತ್ಯಾರ್ ಜೋಯಲ್ ಮಥಾಯಾಸ್, ಪಿಲಾರ್ ಫ್ಲೇವಿಯಾ ಮಥಿಯಾಸ್, ಲೀನಾ ಮಥಾಯಾಸ್ ಅವರ ಮೇಲೆ ಒಂದು ಕೋಟಿ ರೂಪಾಯಿಯ ಮಾನಹಾನಿ ದಾವೆ ದಾಖಲಾಗಿದ್ದು ನ್ಯಾಯಾಲಯ ಈ ಮೂವರಿಗೆ ನೋಟಿಸ್‌ ನೀಡಿದೆ.


ಈ ಹಿಂದೆ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಮಹೇಶ್‌ ಡಿಸೋಜಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ವಿರುದ್ಧ ಸುಳ್ಳು ಸಂದೇಶವನ್ನು ಈ ಮೂವರು ಆರೋಪಿಗಳು ಹರಡುತ್ತಿದ್ದಾರೆ ಎಂದು ಡೇವಿಡ್ ಡಿಸೋಜಾ ದೂರಿನಲ್ಲಿ ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ ಉಡುಪಿ ಅವರು ಕುತ್ಯಾರ್ ನಿವಾಸಿ ಜೊಯೇಲ್ ಮಥಿಯಾಸ್ ಮತ್ತು ಪಿಲಾರ್ ನಿವಾಸಿ ಫ್ಲೇವಿಯಾ ಮಥಿಯಾಸ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಶಿರ್ವ ಪೊಲೀಸರಿಗೆ ಆದೇಶ ನೀಡಿತ್ತು.

“ಫಾ. ಮಹೇಶ್‌ ಡಿಸೋಜಾ ಅವರ ಆತ್ಮಹತ್ಯೆಗೆ ಕಾಂಗ್ರೆಸ್‌ ಮುಖಂಡ, ಡೇವಿಡ್ ಡಿಸೋಜಾ ಹಾಗೂ ಅವರ ಪುತ್ರ ಡೋಯ್ಸನ್‌ ಡಿಸೋಜಾ ಅವರು ಪ್ರೇರಣೆ ನೀಡಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ” ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುತ್ತಿದೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿತ್ತು.

“ಈ ಸುಳ್ಳು ಸುದ್ದಿಯಿಂದ ನನ್ನ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರಿದ್ದು ಸಮಾಜದಲ್ಲಿ ತಲೆ ಎತ್ತಿ ನಡೆಯಲಾಗದಂತಹ ಪರಿಸ್ಥಿತಿ ಉಂಟಾಗಿದೆ. ಆರೋಪಿಗಳು ಈ ಮೊದಲು ನನ್ನ ವಿರುದ್ದ ಸುಳ್ಳು ಸುದ್ದಿ ಹರಿಯಬಿಟ್ಟಿದ್ದು, ಬಳಿಕ ಪೊಲೀಸ್‌ ಠಾಣೆಯಲ್ಲಿ ಈ ಕ್ಷಮೆ ಯಾಚಿಸಿದ್ದರು. ಇದಾದ ನಂತರ ಮಹೇಶ್‌ ಡಿಸೋಜಾ ಅವರ ಪ್ರಕರಣದ ದುರ್ಬಳಕೆ ಮಾಡಿಕೊಂಡು ಮತ್ತೊಮ್ಮೆ ನನ್ನ ವಿರುದ್ದ ವದಂತಿಗಳನ್ನು ಹಬ್ಬುತ್ತಿದ್ದಾರೆ ಎಂದು ಡೇವಿಡ್ ಡಿಸೋಜಾ ದೂರಿನಲ್ಲಿ ಆರೋಪಿಸಿದ್ದರು .

Leave a Reply

Your email address will not be published. Required fields are marked *

error: Content is protected !!