ಸೀಲ್ ಡೌನ್ ಪ್ರದೇಶಗಳಲ್ಲಿ ಹಾಲು, ದಿನಸಿಗಳನ್ನು ಉಚಿತವಾಗಿ ನೀಡಿ: ಐವನ್ ಆಗ್ರಹ
May 2, 2020
ಮಂಗಳೂರು: ಹಠಾತ್ ಆಗಿ ಸೀಲ್ ಡೌನ್ ಪ್ರದೇಶಗಳಾಗಿ ಘೋಷಿಸಿರುವುದರಿಂದ ಯಾವುದೇ ಪೂವ೯ ತಯಾರಿ ಇಲ್ಲದೇ ಈ ಪ್ರದೇಶಗಳಲ್ಲಿ ಅದರಲ್ಲೂ ಬೋಳೂರಿನ ಜನರು ತುಂಬಾ ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಜನಾಂಗದವರು ವಾಸಿಸುವುದರಿಂದ ಈ ಭಾಗದಲ್ಲಿ ಜನರಿಗೆ ನಗರಪಾಲಿಕೆ ವತಿಯಿಂದ ಹಾಲು ಮತ್ತು ಮನೆ ಸಾಮಾಗ್ರಿಗಳನ್ನು ವಿತರಿಸಲು ಕ್ರಮಕೈಗೊಳ್ಳಬೇಕೆಂದು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಸ್ಥಳೀಯ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕರು ಸ್ಥಳೀಯರೊಂದಿಗೆ ಮಾತನಾಡಿ, ಕಷ್ಟದಲ್ಲಿರುವರಿಗೆ ಅಕ್ಕಿಯನ್ನು ವಿತರಿಸಿದರು. ಮತ್ತು ಆರೋಗ್ಯದ ದೃಷ್ಟಿಯಿಂದ ಇಲಾಖೆ ಕೈಗೊಂಡಿರುವ ನಿಯಮವನ್ನು ಪಾಲನೆ ಮಾಡಬೇಕೆಂದು, ಜನರ ಕಷ್ಟಗಳಿಗೆ ಸ್ಪಂದಿಸಲು ತಾನು ಇಲಾಖೆಯ ಜೊತೆ ಮಾತನಾಡಿ, ಸೀಲ್ ಡೌನ್ ಪ್ರದೇಶಗಳಲ್ಲಿ ವಾಸಿಸುವವರಿಗೆ ಅವರ ಕಷ್ಟಗಳಿಗೆ ಸ್ಪಂದಿಸಲು ಈ ಭಾಗದ ದಾನಿಗಳ ಜೊತೆಯೂ ಮಾತನಾಡಿ, ಸಹಾಯವನ್ನು ಮಾಡಲು ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮಾಜಿ ಕಾಪೊ೯ರೇಟರ್ ಕಮಾಲಕ್ಷ ಸಾಲಿಯಾನ, ಜಾಫ್ರಿ ಡಿಸೋಜಾ, ಡಾನ್, ಯುವನಾಯಕರುಗಳಾದ ಶಸಿ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು. .