ಉಡುಪಿ:ಬಿ.ಆರ್.ಶೆಟ್ಟಿ ಆಸ್ಪತ್ರೆ ನಿರ್ಮಾಣ ಸ್ಥಗಿತಕ್ಕೆ ನೋಟಿಸ್


ಉಡುಪಿ: ನಗರಸಭೆ ಎದುರು ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯ ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆ ನಿಯಮಗಳ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವುದರ ವಿರುದ್ದ ಉಡುಪಿ ನಗರ ಸಭೆ ನೋಟಿಸಿ ನೀಡಿದೆ.
ಆಸ್ಪತ್ರೆಯ ನಿರ್ಮಾಣಕ್ಕೆ ಕೇವಲ ನೆಲದ ಅಡಿಯಲ್ಲಿ ೨ ಅಂತಸ್ತು ನಿರ್ಮಿಸುವ ಬಗ್ಗೆ ಪರಾವನಿಗೆ ಪಡೆದು ಈಗ ಹೆಚ್ಚುವರಿಯಾಗಿ ಇನ್ನೊಂದು ಅಂತಸ್ತು ನೆಲವನ್ನು ಅಗೆದು ನಿಯಮ ಉಲ್ಲಂಘಿಸಲಾಗಿದೆಂದು ಉಡುಪಿ ನಗರ ಸಭೆ ಪೌರಾಯುಕ್ತರು ತಕ್ಷಣದಿಂದಲೇ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ನೋಟಿಸು ನೀಡಿದ್ದಾರೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಆಸ್ಪತ್ರೆ ನಿರ್ಮಾಣಕ್ಕೆ ೨ ತಳ ಅಂತಸ್ತುವಿನಲ್ಲಿ ವಾಹನ ನಿಲುಗಡೆಗೆ ಮಾಡುವ ಕಟ್ಟಡಕ್ಕೆ ಪರಾವನಿಗೆ ನೀಡಿದ್ದು ,ಈಗ ೩ನೇ ಮಹಡಿಗಾಗಿ ಮಣ್ಣಿನ ಅಗೆತ ಮಾಡುತ್ತಿದ್ದು ತಕ್ಷಣ ಹೆಚ್ಚುವರಿಯಾಗಿ ಅಗೆದದನ್ನು ಅಂತಸ್ತು ಮುಚ್ಚಬೇಕೆಂದು ನಗರ ಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಆಸ್ಪತ್ರೆಯ ವ್ಯವಸ್ಥಾಪಕ ಕುಶಲ್ ಶೆಟ್ಟಿಗೆ ನೋಟಿಸು ನೀಡಿರುತ್ತಾರೆ.
ಆದ್ದರಿಂದ ತಕ್ಷಣದಿಂದಲೇ ಆಸ್ಪತ್ರೆ ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಪೌರಾಯುಕ್ತರು ಸೂಚಿಸಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡರೆ ಮುಂದೆ ಆಗಬಹುದಾದ ಕಷ್ಟ ನಷ್ಟಗಳಿಗೆ ನೀವು
ಜವಾಬ್ದಾರರೆಂದು ನೋಟಿಸಿನಲ್ಲಿ ಎಚ್ಚರಿಸಿದೆ.
ಉಡುಪಿ ನಗರದೆಲ್ಲೆಡೆ ಇದೆ ರೀತಿ ಕಟ್ಟಡಗಳನ್ನು ನಿಯಮ ಮೀರಿ ರಚಿಸಲಾಗುತ್ತಿದ್ದು ಆಡಳಿತಾಧಿಕಾರಿಯಾಗಿರುವ ನೂತನ ಜಿಲ್ಲಾಧಿಕಾರಿಗಳು ಕಳೆದ ಒಂದು ವರ್ಷದಲ್ಲಿ ನಗರ ಸಭೆ ನೀಡಿದ ಪರಾವನಿಗೆ ಹಾಗೂ ನಿರ್ಮಣವಾದ ಕಟ್ಟಡಗಳನ್ನು ಪರೀಶಿಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಟ್ಟಡದ ನಿರ್ಮಾಣಕ್ಕೆ ನೀಡಿದ ನಕ್ಷೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಕಟ್ಟಡಗಳು ನಿರ್ಮಾಣವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಈ ಕಡತಗಳನ್ನು ಪರೀಶಿಲಿಸ ಬೇಕೆಂದು ಉಡುಪಿ ಜನತೆಯ ಆಗ್ರಹವಾಗಿದೆ.
ನಿಯಮ ಮೀರಿ ಕಟ್ಟಡ ನಿರ್ಮಿಸಿದ ಪರಿಣಾಮ ಹೆಚ್ಚಿನ ವಾಹನ ಪಾರ್ಕಿಂಗ್ ರಸ್ತೆಗಳಲ್ಲೆ ಇರುವುದರಿಂದ ನಗರದಲ್ಲಿ ದಿನ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.
ಪಾದಾಚಾರಿ ಮಾರ್ಗವಂತು ಹುಡುಕುವಂತಾಗಿದೆಂದು ಜನರು ಅಸಮಾಧನ ವ್ಯಕ್ರಪಡಿಸುತ್ತಾರೆ. ಈ ಪರಾವನಿಗೆ ನೀಡುವಲ್ಲಿ ನಗರ ಸಭಾ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆದಿದ್ದಾರೆಂದು ನಾಗರಿಕರ ಆರೋಪವಾಗಿದೆ.

Leave a Reply

Your email address will not be published. Required fields are marked *

error: Content is protected !!