ಶಿರೂರು ಶ್ರೀಗಳ ಸಾವಿಗೆ ನ್ಯಾಯ ದೊರತಿಲ್ಲ:ನ್ಯಾಯವಾದಿ ರವಿಕಿರಣ್

ಶಿರೂರು ಶ್ರೀಗಳು ಮೃತರಾಗಿಒಂದು   ವರ್ಷ ಕಳೆದರು ಇನ್ನು ಅವರ ಮರಣದ ಬಗ್ಗೆ ನ್ಯಾಯ ದೊರತಿಲ್ಲ ಎಂದು  ನ್ಯಾಯವಾದಿ, ಶಿರೂರು ಮಠಾಧೀಶರ ಆಪ್ತರು ಆಗಿರುವ ರವಿಕಿರಣ್ ಮುರ್ಡೇಶ್ವರ ಬೇಸರ ವ್ಯಕ್ತ ಪಡಿಸಿದರು.
ಶಿರೂರು ಲಕ್ಷ್ಮೀವರತೀರ್ಥ ಶ್ರೀಪಾದರು ವೃಂದಾವನಸ್ಥರಾಗಿ ಒಂದು ವರ್ಷ ಕಳೆದ ಹಿನ್ನಲೆಯಲ್ಲಿ ಶಿರೂರು ಶ್ರೀಗಳ ಅಭಿಮಾನಿಗಳು ಉಪ್ಪೂರಿನ ಸ್ಪಂದನ ವಿಶೇಷ ಮಕ್ಕಳ ಆಶ್ರಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮುರ್ಡೇಶ್ವರ ಶಿರೂರು ಸ್ವಾಮೀಜಿಗಳದ್ದು  ಅಸಹಜ ಸಾವು. ಆದರೆ ಅದರ ತನಿಖೆ ಹಳ್ಳ ಹಿಡಿದಿದೆ.

ಆಗಸ್ಟ್ 10 ರಂದು ಉದಾರಂಗದಲ್ಲಿ ವಿಷ ಉಂಟು  ಎಂದು  ಪರೀಕ್ಷಿಸುತ್ತಾರೆ. ಆದರೆ  ಮುಂದಿನ ಪ್ರಕ್ರಿಯೆ ಆಮೆ ಗತಿಯಲ್ಲಿ ನಡೆದ ಕಾರಣ  ತನಿಖೆಯಲ್ಲಿ ವಿಷ ಕಂಡು ಬಂದಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ಹೇಳಿದೆ.  ಈ ಎರಡು ವರದಿಯನ್ನು ಕ್ರೋಢಿಕರಿಸಿ ಸ್ವಭಾವಿಕ ಮರಣ ಎಂದು ವರದಿ ನೀಡುತ್ತಾರೆ. ಸ್ವಾಮಿಗಳದ್ದು ರೋಗಗ್ರಸ್ಥ ಕಿಡ್ನಿಯಲ್ಲ ಬದಲಿಗೆ ಗಾಯಗೊಂಡ ಕಿಡ್ನಿ. ನರದಲ್ಲಿ ರಕ್ತ ಸ್ರಾವ ಆಗಿದೆ. ಇದರಿಂದ ಸ್ವಾಮೀಯ ಸಾವು ಆಗಿದೆ. ಸ್ವಾಮೀಯ ಸುತ್ತ ವಿವಾದ ಇತ್ತು. ಹಾಗಾಗಿ ಅವರ ಸಾವಿನ ಬಗ್ಗೆಯೂ ಅನೇಕ ಸಂಶಗಳು ಎದ್ದಿದೆ ಎಂದರು.
ಆಗಸ್ಟ್ 13 ರಂದು ಡಿವೈಎಸ್ಪಿ ಮಾಡಿದ ಪತ್ರವ್ಯವಹಾರ ದಲ್ಲಿಯೂ ವೈದ್ಯರು ಅದನ್ನೇ ಹೇಳಿದ್ದಾರೆ. ವಿಷಪ್ರಾಶಣ ಆಗಿದೆಂಬ ಹೇಳಿಕೆಗೆ ಬದ್ಧರಾಗಿದ್ದರು. ಇದನೆಲ್ಲ ನೋಡಿದಾಗ ಪ್ರಕರಣ ಹಳ್ಳ ಹಿಡಿದಿಲ್ಲ. ಜೀವಂತವಾಗಿದೆ. ಆದರೆ ಮುಂದುವರಿಸುವವರು ಯಾರು.? ಲಾಲಬಹುದೂರ್ ಶಾಸ್ತ್ರಿ ಸುಭಾಷ್ ಚಂದ ಬೋಸ್ ಪ್ರಕರಣಗಳು  ಎಷ್ಟೋ ದಿನಗಳ ಮೇಲೆ ವಿಚಾರಣೆ ನಡೆದಿದೆ ಅದೇ ರೀತಿ ಈ ವಿಚಾರಗಳ  ಬಗ್ಗೆ ಹಲವಾರು ಪುಸ್ತಕ ಬಿಡುಗಡೆಯಾಗಿದೆ.

ಶಿರೂರು ಸ್ವಾಮೀಜಿ ಕುರಿತು ಪ್ರಥಮ ವರ್ತಮಾನ ದಾಖಲಾಗಿಲ್ಲ. ಇಂತಹದೊಂದು ದುರಂತ ಮರಣದ ಬಗ್ಗೆ ನ್ಯಾಯಾಲಯದಲ್ಲಿ ವರ್ತಮಾನ ದಾಖಲು ಆಗಿಲ್ಲ. ಸಹಾಯಕ ಕಮಿಷನರ್ ಮುಂದೆ ಎಫ್ ಐಆರ್ ಆದದ್ದು.  ಕೊಲೆ ಪ್ರಕರಣ, ಸಂಶಯದ ಸಾವಿನ ತನಿಖೆಗೆ  ಕಾಲಮಿತಿ ಇಲ್ಲ. ಈ ಪ್ರಕರಣವನ್ನು ಯಾರದ್ರೂ ಮುಂದುವರಿಸುವುದಾದ್ದರೆ  ಈಗಲೂ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಬಹುದು. ಇನ್ನೂ ಕೂಡ ದೂರು ನೀಡುವ ಅವಕಾಶ ಇದೆ,  ವೈದ್ಯಕೀಯ ವರದಿಗಳನ್ನು ನೋಡಿದಾಗ ಅನುಮಾನ ಮೂಡುತ್ತದೆ. ಅವರ ಸಾವಿನ ಬಗ್ಗೆ ಬೇರೆ ಬೇರೆ ವಿಷಯಗಳನ್ನೊಳಗೊಂಡ ,ಈ ವರದಿಯಲ್ಲಿ 1115 ಪುಟಗಳಿವೆ. ಇದು ಯಾರ ಕೈಗೂ ಸಿಗಲಿಲ್ಲ. ನಾವು ಅರ್ಜಿ ಸಲ್ಲಿಸಿದ ಒಂದು ತಿಂಗಳ ಬಳಿಕ ಸಿಕ್ಕಿದೆ.

51 ವರ್ಷದ ಬಳಿಕ ಮರಣ ಹೊಂದಿದ ಶ್ರೀಗಳ ಸಾವು ಸ್ವಭಾವಿಕ. ಇದರಲ್ಲಿ ಬಹಳಷ್ಟು ಜನರ ವಿಚಾರಣೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಇದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇದೆ. ಕೆಎಂಸಿಯ ಅಂದಿನ ವೈದ್ಯಕೀಯ ಮುಖ್ಯಸ್ಥ ಡಾ. ಅವಿನಾಶ್ ಶೆಟ್ಟಿ ವಿಷ ಪ್ರಾಶಣ ಆಗಿದೆ ಎಂದು ಉದ್ವೇಗಕ್ಕೆ ಒಳಗಾಗಿ ಹೇಳಿದ್ದಾರ. ಸ್ವಾಮೀಜಿಯ ಮೂತ್ರ, ರಕ್ತ, ಮೂರರಲ್ಲಿಯೂ ವಿಷ ಇದೆ. ಇದನ್ನು ಹೇಳಿದವರು ಕೆಎಂಸಿಯ ಸಹಾಯಕ ಪ್ರಾಧ್ಯಾಪಕ ,ಡಾ. ಅಶ್ವಿನಿ ಕುಮಾರ್ ಹಾಗೂ ಡಾ. ಎಸ್. ಅನಿತಾ ಹೇಳಿದ್ದಾರೆ. ಶ್ರೀಗಳ ರಕ್ತದಲ್ಲಿ ಆರ್ಗೋನೊ ಪಸ್ಪೋರಪ್.. ಮೂತ್ರದಲ್ಲಿ ಬೆಂಜೋ ಡಾಯಾಜಿನ್ ವಿಷ ಇದೆ ಎಂದು ಬರೆದಿದ್ದಾರೆ. .  ಸ್ವಾಮೀಯದ್ದು
ಟಿಎಲ್ ಸಿ ಟೆಸ್ಟ್ ಮಾಡಿದ್ದಾರೆ. ಉದಾರಂಗದಲ್ಲಿ ತನಿಖಾಧಿಕಾರಿ ವಿಷಪ್ರಾಶಣ ಆಗಿದೆ  ಹೇಳಿದರು . ಆಗ ನಾವು ಟಿಎಲ್ ಸಿ ಟೆಸ್ಟ್ ಮಾಡಿ ವಿಷ ಇದೆ ಎಂದು ಎಂದು  ವೈದ್ಯಾಧಿಕಾರಿ ಹೇಳಿದ್ದರು . ಟಿಲ್ ಎಲ್ ಸಿ ಎನ್ನುದು ಉತ್ಕ್ರಷ್ಟ ಪರೀಕ್ಷೆ ಹಾಗಾಗಿ ಇಲ್ಲಿ  ವಿಷ ಎಂದ ನಂತರ 21 ದಿಗಳ ನಂತತಾ ಬೇರೆ ಟೆಸ್ಟ್ ಗಳಲ್ಲಿ ವಿಷ ಇಲ್ಲ ಎಂದು ಬಂದಿರುವುದು ಸರಿಯಲ್ಲ ಯಾಕೆ ಎಂದರೆ ದಿನಗಳೆದಂಥ ವಿಷ ಕೂಡ ತನ್ನ ಗುಣವನ್ನ ಬಿಡುತ್ತದೆ , .ಒಟ್ಟಾರೆಯಾಗಿ .ಶ್ರೀಗಳ ಸಾವು ರಹಸ್ಯ ದಿಂದ ಕೂಡಿದೆ ಇದಕ್ಕೆ ನ್ಯಾಯ ಬೇಕು ಎಂದು ತಿಳಿಸಿದರು.


ನಂತರ  ಮಾತನಾಡಿದ ಕೇಮಾರು ಶ್ರೀಗಳು, ಶಿರೂರು ಶ್ರೀಗಳಿಗೆ ಅನ್ಯಾಯ ಆಗಿದೆ. ಅದರ ಬಗ್ಗೆ ಆಕ್ರೋಶ ಇದೆ.  ಬಡಜನರಿಗೆ ಶ್ರೀಕೃಷ್ಣಮಠವನ್ನು ಪರಿಚಯಿಸಿದ್ದಾರೆ.,ಜಾತಿಭೇದ ಮಾಡಿಲ್ಲ. ಜಾತಿಭೇದ ಇಲ್ಲದ ಏಕೈಕ ಸ್ವಾಮೀಜಿ ಇದ್ದಾರೆ ಶ್ರಿರೂರು.  . ಕೆಳವರ್ಗದ ಜನರನ್ನು ಪ್ರೀತಿ ಮಾಡಿದರು. ಮಡಿಮೈಲಿಗೆಯನ್ನು ದೂರ ಇಟ್ಟರು. ಶಿರೂರು ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರೆ ಅವರ ವಿರುದ್ಧ ದೂರು‌ ದಾಖಲಿಸುತ್ತೇವೆ.,  ಪೊಲೀಸ್ ರಿಗೆ ದೊಡ್ಡ ವ್ಯಕ್ತಿಗಳನ್ನು ವಿಚಾರಣೆ ಮಾಡುವ ಶಕ್ತಿಯಿಲ್ಲ  ಎಂದು ಹೇಳಿದರು . ಬಡಗುಬೆಟ್ಟು ಸೊಸೈಟಿಯ ಆಡಳಿತ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಾಯಿರಾಧ ಡೆವಲಪರ್ಸ್ ಮನೋಹರ ಶೆಟ್ಟಿ, ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ನವೀನ್, ಭಾಸ್ಕರ್ ಗುಂಡಿಬೈಲು, ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಪಾಡುರಂಗ ಭಜನ ಮಂಡಳಿ ಶಿವಾನಂದ ಹಾಗೂ ಬಳಗದವರು ಭಜನೆ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು ,ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!