ನಿರ್ಮಿಲ್ಲೆಂ ನಿರ್ಮೋಣೆಂ ಕೊಂಕಣಿ ಚಲನ ಚಿತ್ರ ಬಿಡುಗಡೆ

ಮಂಗಳೂರು : ಪ್ರೆಸ್ಟೊನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹೆನ್ರಿ ಡಿ ಸಿಲ್ವಾ ಸುರತ್ಕಲ್ ಇವರ ನಿರ್ಮಾಣದಲ್ಲಿ ಮೆಲ್ವಿನ್ ಎಲ್ಪೆಲ್ ನಿರ್ದೇಶನದಲ್ಲಿ ತಯಾರಾದ ನಿರ್ಮಿಲ್ಲೆಂ ನಿರ್ಮೋಣೆಂ ಕೊಂಕಣಿ ಚಲನ ಚಿತ್ರದ ಬಿಡುಗಡೆ ಸಮಾರಂಭವು ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ನೆರವೇರಿತು.

ಮಂಗಳೂರಿನ ವಿಶ್ರಾಂತ ಬಿಷಪ್ ರೈ|ರೆ| ಡಾ ಅಲೋಸಿಯಸ್ ಪಾವ್ಲ್ ಡಿ’ಸೋಜ ಸಿನಿಮಾ ಬಿಡುಗಡೆಗೊಳಿಸಿ ಆಶಿರ್ವದಿಸಿದರು. ಸೀಮಿತ ಮಾರುಕಟ್ಟೆಯ ಕೊಂಕಣಿ ಚಿತ್ರರಂಗದಲ್ಲಿ ಸಿನಿಮಾವನ್ನು ಬಿಡುಗಡೆಗೊಳಿಸಬೇಕಾಗುತ್ತದೆ.
ಸಿನಿಮಾದ ಮೂಲಕ ಹಾಸ್ಯದ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶವೂ ಬೇಕು. ಆ ನಿಟ್ಟಿನಲ್ಲಿ ಕೊಂಕಣಿ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿ. ಪ್ರಾದೇಶಿಕ ಭಾಷೆಯಲ್ಲಿ ಬರುತ್ತಿರುವ ಎಲ್ಲಾ ಚಿತ್ರಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸುವಂತೆ ಕೊಂಕಣಿ ಸಿನಿಮಾಗಳನ್ನೂ ಪ್ರೇಕ್ಷಕರು, ತುಳು ನಾಡಿನ ಜನತೆ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.

ನಿರ್ಮಿಲ್ಲೆಂ ನಿರ್ಮೋಣೆಂ ಮಂಗಳೂರಿನಲ್ಲಿ ಭಾರತ್ ಸಿನಿಮಾಸ್ ಮತ್ತು ಪಿವಿಆರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮೂಡಬಿದ್ರೆ, ಉಡುಪಿ, ಕಾರ್ಕಳ, ಶಿವಮೊಗ್ಗ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಸುರತ್ಕಲ್ ಮೊದಲಾದೆಡೆ ಪ್ರದರ್ಶನ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಹೆನ್ರಿ ಡಿ’ ಸಿಲ್ವ ಸುರತ್ಕಲ್ ತಿಳಿಸಿದರು. ಸಿನಿಮಾವನ್ನು ಮೆಲ್ವಿನ್ ಎಲ್ಪೆನ್ ನಿರ್ದೇಶಿಸಿದ್ದಾರೆ.

ಚಿತ್ರಕ್ಕೆ ಚಿತ್ರಕಥೆ ಮತ್ತು ಮುಖ್ಯ ಸಹನಿರ್ದೇಶನ ನೋಬರ್ಟ್ ಜಾನ್ ಮಾಡಿದ್ದಾರೆ. ಸಿನಿಮಾದ ನಾಯಕ ಪಾತ್ರದಲ್ಲಿ ಪ್ರತಾಪ್ ಮಿನೇಜಸ್ ಹಾಗೂ ನಾಯಕಿ ಪಾತ್ರದಲ್ಲಿ ಸೀಮಾ ಬೊತೆಲ್ಲೋ, ಖಳ ನಾಯಕ ಪಾತ್ರದಲ್ಲಿ ನೋಬರ್ಟ್ ಜಾನ್ ಮತ್ತು ಇತರ ಸಹಕಲವಿದರಾಗಿ ಗೋಡ್ವಿನ್, ಹೆರಾ ಪಿಂಟೊ, ವಿನ್ನಿ ಫೆರ್ನಾಂಡಿಸ್, ಮೀನಾಕ್ಷಿ ಮಾರ್ಟಿನ್, ಹಂಬರ್ಟ್ ಗೋವಾ, ರೋನಿ ಸುರತ್ಕಲ್, ಚಾರ್ಲ್ಸ್ ಗೋಮ್ಸ್, ಚಿತ್ರಕ್ಕೆ ಛಾಯಾ ಗ್ರಾಹಕರಾಗಿ ಮಂಜುನಾಥ್ ಹೆಗ್ಡೆ, ಎಡಿಟರ್ ಆಗಿ ಚಂದು ಉಪ್ಪಳಪಟ್ಟಿ, ಡಿ.ಟಿ.ಎಸ್ ಮತ್ತು ಬಿಜಿಎಂ ನಂದು ಜೆ. ಜೇಬಿಸ್‌ರವರು ಮಾಡಿರುತ್ತಾರೆ. ಚಿತ್ರಕ್ಕೆ ಸಂಗೀತ ನಿರ್ದೇಶಕರು ಪಪ್ಪನ್-ಜಾಸ್ವಿನ್ ಲೆರೈಸ್ ವಿಲ್ಫಿ ರೆಬಿಂಬಸ್‌ರವರು ನೀಡಿರುತ್ತಾರೆ.ಚಿತ್ರಕ್ಕೆ ಸಹನಿರ್ದೇಶಕರಾಗಿ ಸಂತೋಷ್ ಮುಖ್ಖೆರಿಯಾ ಹಾಗೂ ಮಿಲನ್ ಮರ್ಕಂಜ, ಜೆರಾಲ್ಡ್, ರಾಯನ್ ಸಹಾಯಕ ನಿರ್ದೇಶಕರಾಗಿದ್ದಾರೆ.

ಸಮಾರಂಭದಲ್ಲಿ ವಾಲ್ಟರ್ ನಂದಳಿಕೆ, ನೋಬರ್ಟ್ ಜಾನ್, ಪ್ರೀತಂ ನೆಲ್ಸನ್ ಹೆನ್ರಿ ಡಿ’ ಸಿಲ್ವ ಹೀರಾ ಪಿಂಟೋ ವಿನ್ನಿ ಫೆರ್ನಾಂಡಿಸ್ ಮೆಲ್ವಿನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!