ಜ.22ಕ್ಕೆ ಕನ್ನಪಾರ್ಡಿ ದೇಗುಲಕ್ಕೆ ನೂತನ ಕೊಡಿಮರ ಆಗಮನ
ಉಡುಪಿ: ಇತಿಹಾಸ ಪ್ರಸಿದ್ಧ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿದ್ದು, ಜ. 22ರಂದು ಸಾಯಂಕಾಲ 5ಕ್ಕೆ ಸುಳ್ಯ ತಾಲೂಕು ಎಡ್ಮೂರಿನಿಂದ ನೂತನ ಕೊಡಿಮರ ತಂದು ಜೋಡುಕಟ್ಟೆಯಿಂದ ಶೋಭಾಯಾತ್ರೆ ಮೂಲಕ ಸಮರ್ಪಿಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಶೋಭಾಯಾತ್ರೆಯಲ್ಲಿ ವಿಷ್ಣುಸಹಸ್ರನಾಮ ಪಾರಾಯಣ, ಪೂರ್ಣಕುಂಭ ಕಲಶ, ಚೆಂಡೆ, ಕುಣಿತ ಭಜನೆ, ಡೋಲು, ಬಿರುದಾವಳಿಗಳೊಂದಿಗೆ 65 ಅಡಿ ಉದ್ದದ ಕೊಡಿಮರ ಆಗಮಿಸಲಿದೆ. ಮಾ.21ರ ಒಳಗೆ ದೇವಸ್ಥಾನದ ಎಲ್ಲಾ ಕಾಮಗಾರಿ ಮುಗಿಸಿ ಮಾ.30ಕ್ಕೆ ಬ್ರಹ್ಮಕಲಶ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಗರ್ಭಗುಡಿ ಹೊರತುಪಡಿಸಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಯುತ್ತಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ಕೆರೆಯ ಜಿರ್ಣೋದ್ಧಾರಕ್ಕೆ 80 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಮುರಳೀಧರ ಬಲ್ಲಾಳ್, ಕಾರ‌್ಯಾಧ್ಯಕ್ಷ ಟಿ. ಸುಕುಮಾರ್, ಅರ್ಚಕ ಗುರುರಾಜ ಆಚಾರ್ಯ, ತಾಲೂಕು ಬ್ರಾಹ್ಮಣ ಸಭಾ ಕಾರ್ಯದರ್ಶಿ ದಿನೇಶ್ ಬೀಡು, ಗ್ರಾಪಂ ಸದಸ್ಯ ನವೀನ್ ಶೆಟ್ಟಿ ಉಪಸ್ಥಿತರಿದ್ದರು.