ಉಡುಪಿ ಜಿಲ್ಲಾ ಬಿಲ್ಲವರ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ನವೀನ್ ಅಮೀನ್ ಶಂಕರಪುರ ಆಯ್ಕೆ

 
ಉಡುಪಿ: ಜಿಲ್ಲಾ ಬಿಲ್ಲವರ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಯುವ ಉದ್ಯಮಿ ನವೀನ್ ಅಮೀನ್ ಶಂಕರಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಟಪಾಡಿ ವಿ.ಕೆ. ಟವರ್ಸ್ ಸಭಾಭವನದಲ್ಲಿ ನಡೆದ ಮಹಾಸಭೆಯಲ್ಲಿ ಪರಿಷತ್ ಅಧ್ಯಕ್ಷ ಶೇಖರ್ ಕರ್ಕೇರ ಅಧ್ಯಕ್ಷತೆಯಲ್ಲಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಆರಿಸಲಾಯಿತು.
ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನವೀನ್ ಅಮೀನ್ ಶಂಕರಪುರ, ಫ್ರೆಂಡ್ಸ್ ಕ್ಯಾಟರರ್ಸ್ ಮಾಲಕರಾಗಿದ್ದಾರೆ. ಇತ್ತೀಚೆಗೆ ಕಾಪು ಜೇಸಿಐ ಪ್ರಾಯೋಜಕತ್ವದಲ್ಲಿ ನಡೆದ ವ್ಯವಹಾರ ಮತ್ತು ಬೆಳವಣಿಗೆ ಹಾಗೂ ಉದ್ಯಮ ಸಮ್ಮೇಳನದಲ್ಲಿ “ಉದ್ಯಮ ರತ್ನ “ಪ್ರಶಸ್ತಿಗೆ ಭಾಜನರಾಗಿದ್ದರು. 
ಬಿಲ್ಲವರ ಪರಿಷತ್ ನ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಶೇಖರ್ ಕೆ ಕರ್ಕೇರ ಹೆಜಮಾಡಿ, ಉಪಾಧ್ಯಕ್ಷರಾಗಿ ಬದರಿನಾಥ್ ಸನಿಲ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರ್ ಕೆ ಪಾಲನ್, ಜತೆ ಕಾರ್ಯದರ್ಶಿಯಾಗಿ ಹರೀಶ್ ಕುಮಾರ್ ಮಟ್ಟು, ಕೋಶಾಧಿಕಾರಿಯಾಗಿ ಚಂದ್ರಹಾಸ್ ಕೋಟ್ಯಾನ್ ಉಡುಪಿ, ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ್ ಅಂಚನ್ ಉಚ್ಚಿಲ, ವಿನೋದ್ ಅಮೀನ್ ಕೋಟೆ, ಮಹೇಶ್ ಮೂಡಬೆಟ್ಟು, ಗೌರವ ಸಲಹೆಗಾರರಾಗಿ ವೈ ಸುಧೀರ್ ಕುಮಾರ್ ಪಡುಬಿದ್ರೆ, ದೀಪಕ್ ಕುಮಾರ್ ಎರ್ಮಾಳ್, ತಾರಾನಾಥ ಎಚ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!