ಪ್ರೊ. ಶ್ರೀನಾಥ್ ರಾವ್ ಗೆ:”ರಾಷ್ಟೀಯ ಪ್ರತಿಭಾ ಪ್ರಶಸ್ತಿ”

 ಉಡುಪಿ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಗುಣಮಟ್ಟದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ, “ಬಿಜೆಪಿ ಬೇಟೀ ಬಚಾವೋ, ಬೇಟೀ ಪಡಾವೋ” ರಾಷ್ಟೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಪ್ರೊ. ಶ್ರೀನಾಥ್ ರಾವ್ ಕುಂದಾಪುರ ರವರಿಗೆ ಇತ್ತೀಚಿಗೆ ದೆಹಲಿಯ ಪ್ರತಿಷ್ಠಿತ “ಭಾರತೀಯ ಸಾಮಾಜಿಕ ಅಭಿವೃದ್ಧಿ ಸಂಸ್ಥೆ (ಐ.ಎಸ್.ಡಿ.ಎ)”ಯು “ರಾಷ್ಟೀಯ ಪ್ರತಿಭಾ ಪ್ರಶಸ್ತಿ”ಯನ್ನು ನೀಡುವುದರ ಮೂಲಕ ಸನ್ಮಾನಿಸಲಾಯಿತು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ಸರಕಾರದ ಆಯುಷ್ ಸಚಿವಾಲಯದ ಸದಸ್ಯರೂ ಹಾಗೂ ಬಿಜೆಪಿ ಹಿರಿಯ ರಾಷ್ಟ್ರೀಯ ನಾಯಕರಾದ ಡಾ. ದಿನೇಶ್ ಉಪಾಧ್ಯಾಯ, ಬಿಜೆಪಿ ರಾಷ್ಟೀಯ ಪೂರ್ವ ಪ್ರಧಾನ ಕಾರ್ಯದರ್ಶಿ ಶ್ರೀ ಸಂಜಯ್ ಜೋಶಿ, ಪಶ್ಚಿಮ ಬಂಗಾಳದ ಹಿರಿಯ ಐಪಿಎಸ್ ಅಧಿಕಾರಿ ಶ್ರೀ ಎಸ್ ಎಂ ಎಚ್ ಮಿರ್ಜಾ, ಉತ್ತರಾಖಂಡ ರಾಜ್ಯದ ಹಿರಿಯ ನಾಯಕರಾದ ಶ್ರೀ ಕಮಲ್ ಸಿಂಗ್ ನೇಗಿ, ದೆಹಲಿಯ ಸೆಂಟರ್ ಫಾರ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕಿ ಪ್ರೊ. ಅಮರ್ಜಿತ್ ಕೌರ್, ಪ್ರಖ್ಯಾತ ಬಂಗಾಳಿ ಗಾಯಕರಾದ ಶ್ರೀ ಮುಖೋಪಾಧ್ಯಾಯ್, ದೆಹಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಡಿ ಕೆ ಸಿಂಗ್, ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿಗಳು, ಮತ್ತು ಸರಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!