ಉಡುಪಿಯಲ್ಲಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್

ಉಡುಪಿ: ಈ ಬಾರಿ ಕಿರಿಯ ಬಾಲಕರ ಹಾಗೂ ಕಿರಿಯ ಬಾಲಕಿಯರ 13 ವರ್ಷ ವಯೋಮಿತಿಯೊಳಗಿನ ಅಖಿಲ ಭಾರತ ಸಬ್ ಜ್ಯೂನಿಯರ್ ರ್‍ಯಾಂಕಿಂಗ್ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‌ಗೆ ನೀಡಲಾಗಿದೆ. ಜುಲೈ 2-7-2019 ರಿಂದ 7-7-2019 ರಂದು ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ ಹಾಗೂ ಮಣಿಪಾಲದ ಮರಿನಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಹಾಗೂ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಘುಪತಿ ಭಟ್ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಪ್ರತಿನಿಧಿಸುವ ಆಟಗಾರರಲ್ಲದೆ ಎಲ್ಲಾ ರಾಜ್ಯದ ಅಗ್ರ ಶ್ರೇಯಂಕಿತ ಒಟ್ಟು 1000 ಆಟಗಾರರು ಮತ್ತು 50 ಜನ ತೀರ್ಪುಗಾರರು ಭಾಗವಿಸಲಿದ್ದಾರೆ. ಆಟಗಾರರೆಲ್ಲರಿಗೂ ಉಚಿತ ಊಟ ಉಪಚಾರ ವ್ಯವಸ್ಥೆ, ಕೂಟದ ಪ್ರಶಸ್ತಿ ಮೊತ್ತ ರೂ 3.50 ಲಕ್ಷ ಆಗಿದ್ದು ಮತ್ತು ಈ ಕೂಟದ ಒಟ್ಟು ವೆಚ್ಚ ರೂ ೪೩.೬೩ ಲಕ್ಷ ಆಗಲಿದೆ ಎಂದರು.

ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯ ಮತ್ತು ರಾಷ್ಟ್ರಮಟ್ಟದ ರ್‍ಯಾಂಕಿಂಗ್ ಪಂದ್ಯಾಟ, ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಹಾಗೂ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಫರ್ಧೆಗಳನ್ನು ಯಶಸ್ವಿಯಾಗಿ ಸಂಘಟಿಸಿದೆ. ಅಖೀಲ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಸಾಧನೆಗಳನ್ನು ಗುರುತಿಸಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‌ಗೆ ನೀಡಲಾಗಿದೆ ಎಂದರು . ಈ ಸಂದರ್ಭ ಸುಧೀರ್ ಕುಮಾರ್, ಎಂ.ಕಾಶಿನಾಥ್ ಪೈ, ಸೊಹೈಲ್ ಅಮೀನ್, ಅರುಣ್ ಎನ್. ಶೇರಿಗಾರ್, ಸಂದೀಪ್ ನಾಯಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!