ರಾಜ್ಯದಲ್ಲಿ ನಾರಿ ಅದಾಲತ್_ ಶ್ಯಾಮಲಾ ಕುಂದರ್
ಉಡುಪಿ – ಸಂಸ್ಕಾರ ಸಂಸ್ಕೃತಿಯೊಂದಿಗೆ ಮಹಿಳೆಯ ಅಭಿವೃದ್ಧಿಗೆ ದ್ವನಿಯಾಗುವ ಕೆಲಸದಲ್ಲಿ ತೊಡಗಿಸಿಕೊಂ ಡಿರುವೆ.ನಾಲ್ಕು ರಾಜ್ಯಗಳ ಜವಾಬ್ದಾರಿ ನನ್ನ ಮೇಲಿದೆ. ರಾಜ್ಯದಲ್ಲಿ ಸದ್ಯದಲ್ಲಿಯೇ ” ನಾರಿ ಅದಾಲತ್ “ಪ್ರಾರಂಭ ಗೊಳ್ಳಲಿದೆ ಎಂದು ರಾಷ್ಟ್ತ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು.
ಮಹಿಳೆ ಸಂಸಾರದ ಕಣ್ಣು, ಎಂಬಂತೆ ಮನೆ ಮಂದಿಯ ಲಾಲನೆ, ಪಾಲನೆ ಯೊಂದಿಗೆ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುವ ಮಹಿಳೆ ತನ್ನ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾದ ಅವಶ್ಯಕತೆ ಇದೆ ಎಂದು ಉಪನ್ಯಾಸಕಿ, ಚಿಂತಕಿ ಭಾಗ್ಯಶ್ರೀ ಐತಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲೆವೂರು ಮಹಿಳಾ ಸಂಘ ರಾಮಪುರ ಆಶ್ರಯದಲ್ಲಿ ಅಲೆವೂರು ಯುವಕ ಸಂಗದ ಸಹಯೋಗದೊಂದಿಗೆ ಆಯೋಜಿಸಿದ್ದ ” ಮಹಿಳೆ ಮತ್ತು ಆರೋಗ್ಯ” ಮಾಹಿತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಅಭಿನಂದನೆ ಯನ್ನು ಸ್ವೀಕರಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ದಾ/ ರಾಜಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಕೆಮ್ತೂರು ಯುವತಿ ಮಂಡಲ ಅಧ್ಯಕ್ಷೆ ಅನುಸೂಯ ಶೆಟ್ಟಿ, ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣ ವಿ. ಆಚಾರ್ಯ, ಮಾರ್ಪಳ್ಳಿ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ, ಅಲೆವೂರು ಯುವಕ ಸಂಘದ ಅಧ್ಯಕ್ಷ ಉಮೇಶ್ ಸೇರಿಗಾರ್, ಗೌರವಾಧ್ಯಕ್ಷ ಆನಂದ ಸೇರಿಗಾರ್, ಅಲೆವೂರು ಮಹಿಳಾ ಸಂಘದ ಗೌರವಾಧ್ಯಕ್ಶರಾದ ಮಮತಾ A ಶೆಟ್ಟಿಗಾರ್,ಅಧ್ಯಕ್ಷರಾದ ಮಲ್ಲಿಕಾ, ವಾರಿಜಾ S ಶೆಟ್ಟಿ. ಸಂಘಟಕಿ ರಮಾ ಜೆ.ರಾವ್ ಉಪಸ್ಥಿತಿದ್ದರು.
ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ನಾಯಕ್ ಪ್ರಸ್ತಾಪ ನೆ ಗೈದರು ಪ್ರಧಾನಕಾರ್ಯದರ್ಶಿ ಕುಸುಮಾವತಿ ಹರೀಶ್ ಸ್ವಾಗತಿಸಿದರು. ವೀಣಾಜಯರಾಂ ದನ್ಯವಾದಗೈದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.