ಇಂದು ರಾತ್ರಿ 12 ರಿಂದ 21 ದಿನ ದೇಶವ್ಯಾಪಿ ಲಾಕ್‌ಡೌನ್: ನರೇಂದ್ರ ಮೋದಿ
ನವದೆಹಲಿ:(ಉಡುಪಿ ಟೈಮ್ಸ್ ವರದಿ ) ದೇಶ ಇಂದು ಮಹತ್ವಪೂರ್ಣ ನಿರ್ಣಯ ತೆಗೆದುಕೊಂಡಿದೆ. ಇಂದು ರಾತ್ರಿ 12 ಗಂಟೆಯಿಂದ ಪೂರ್ತಿ ದೇಶದಲ್ಲಿ ಲಾಕ್‌ಡೌನ್ ಘೋಷಿಸುತ್ತಿದ್ದೇನೆ. ಇದು ಕರ್ಫ್ಯೂ ತರವೇ ಇರುತ್ತೆ. ಇದನ್ನು ಕಟ್ಟುನಿಟ್ಟಾಗಿ ಜಾರಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ್ದಾರೆ. ಭಾರತದಲ್ಲಿ ಕರೋನ ಹರಡುತ್ತಿರುವುದರ ಬಗ್ಗೆ ಆತಂಕಗೊಂಡ ಪ್ರಧಾನಿ 2 ನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದರು.
ಇಂದು ರಾತ್ರಿ 12 ಗಂಟೆಯ ನಂತರ ಸಂಪೂರ್ಣ ದೇಶ ಲಾಕ್ ಡೌನ್, ಈ ಕರೋನದ ವಿರುದ್ಧ ಹೋರಾಡಲು ಸುಮಾರು 21 (3 ವಾರ ) ದಿನ ಅವಶ್ಯಕತೆಯಿದ್ದು ಈ 21 ದಿನ ನಿಮ್ಮಿಂದ ಮನೆಯಲ್ಲಿ ಇರಲು ಆಗದೆ ಇದ್ದಾರೆ ನಿಮ್ಮ ಕುಟುಂಬ 21 ವರ್ಷ ಹಿಂದೆ ಸಾಗಬೇಕಾಗಬಹುದು ಎಂದು ಜನತೆಗೆ ಎಚ್ಚರಿಸಿದರು ಇದನ್ನು ನಾನು ಪ್ರಧಾನಿ ಯಾಗಿ ಅಲ್ಲ ಬದಲಾಗಿ ನಿಮ್ಮ ಮನೆಯ ಸದಸ್ಯನಾಗಿ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.
ಮನೆಯಿಂದ ಹೊರಗೆ ಬರುವುದನ್ನು ಸಂಪೂರ್ಣ ನಿಷೇದಿಸಲಾಗುತ್ತದೆ ಹಾಗು ಇದು ಒಂದು ರೀತಿಯ ಕರ್ಫ್ಯೂ ಹಾಗು ಜನತಾ ಕರ್ಫ್ಯೂ ಯಿಂದ ಇದು ಒಂದು ಹೆಜ್ಜೆ ಮುಂದೆ ಹಾಗಾಗಿ ಎಲ್ಲರೂ ಇದನ್ನು ಕಟ್ಟು ನಿಟ್ಟಾಗಿ ಪಾಲಿಸಲೇಬೇಕು ಎಂಬುದಾಗಿ ಹೇಳಿದರು. ನಮ್ಮ ದೇಶದಲ್ಲಿ ಇದರ ವಿರುದ್ಧ ಹೋರಾಡಲು ನಾವೆಲ್ಲರೂ ಒಟ್ಟಾಗಬೇಕಿದೆ ಎಂದರು .
ಕರೋನದ ವಿರುದ್ಧ ಹೋರಾಟ ಮಾಡಲು ನಾವು ಸೋಶಿಯಲ್ ಡಿಸ್ಟೆನ್ಸ್ (ಸಾಮಾಜಿಕ ಅಂತರ ) ಮಾಡಲೇಬೇಕಾಗಿದೆ ಎಂಬುದಾಗಿ ಅವರು ತಿಳಿಸಿದರು. ಎಲ್ಲ ರಾಜ್ಯ ಸರ್ಕಾರಕ್ಕೆ ಜನರ ಅರೋಗ್ಯವೇ ಮುಖ್ಯ. ಕೊರೋನಾ ಮಹಾಮಾರಿ ಹೋರಾಡಲು 15 ಸಾವಿರ ಕೋಟಿ ಮೀಸಲಿಟ್ಟಿದ್ದೆ ಎಂದರು.
ಪ್ರಧಾನಿ ಭಾಷಣದಲ್ಲಿ ಪ್ರಸ್ತಾಪವಾದ 10 ಅತಿಮುಖ್ಯ ಅಂಶಗಳು
1) ಕೊರೊನಾ ಅಂದ್ರೆ ‘ಕೋ- ಕೊಯಿ, ರೊ- ರೋಡ್ ಪರ್, ನಾ- ನ ನಿಕ್ಲೆ’ (ಯಾರೂ ರಸ್ತೆಗೆ ಇಳಿಯುವುದಿಲ್ಲ).
2) ಮನೆ ಎದುರು ‘ಲಕ್ಷ್ಮಣ ರೇಖೆ’ ಹಾಕಿಕೊಳ್ಳಿ. ಮನೆಯಿಂದ ಹೊರಗೆ ಬರಬೇಡಿ. ನೀವು ಮನೆಯಿಂದ ಹೊರಗೆ ಬಂದರೆ, ಈ ಮಾರಣಾಂತಿಕ ಕಾಯಿಲೆ ನಿಮ್ಮ ಮನೆಗೆ ಬರಬಹುದು.
3) ಇಂದು ರಾತ್ರಿ 12 ಗಂಟೆಯಿಂದ ಮುಂದಿನ 21 ದಿನಗಳ ಅವಧಿಗೆ ದೇಶವ್ಯಾಪಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
4) ‘ಜಾನ್ ಹೇ ತೊ ಜಹಾನ್ ಹೆ’ (ಜೀವ ಇದ್ದರೆ ಜಗತ್ತು ಇರುತ್ತೆ) ಅನ್ನೋದು ಅರ್ಥ ಮಾಡಿಕೊಳ್ಳಿ.
5) ಒಂದು ಸಮಾನ ಉದ್ದೇಶ್ಕಾಗಿ ಭಾರತೀಯರು ಒಗ್ಗೂಡಬಲ್ಲರು ಎಂಬುದನ್ನು ಮಾರ್ಚ್ 22ರ ‘ಜನತಾ ಕರ್ಫ್ಯೂ’ ತೋರಿಸಿಕೊಟ್ಟಿತು.
6) ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ಮಾತ್ರ ಕೊರೊನಾವೈರಸ್ ಹರಡುವುದನ್ನು ತಡೆಯಲು ಸಾಧ್ಯ.
7) ಕೇವಲ ಕಾಯಿಲೆಪೀಡಿತರಿಗೆ ಮಾತ್ರವೇ ಸಾಮಾಜಿಕ ಅಂತರ ಎಂದುಕೊಳ್ಳಬೇಡಿ. ದೇಶದ ಪ್ರಧಾನಿಗೂ ಅದು ಅನ್ವಯಿಸುತ್ತದೆ.
8) ಒಂದು ಸಣ್ಣ ಮೈಮರೆವಿಗೆ ಊಹಿಸಲು ಸಾಧ್ಯವಿಲ್ಲದಂಥ ಬೆಲೆ ತೆರಬೇಕಾದೀತು.
9) ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು 15 ಸಾವಿರ ಕೋಟಿ ರೂಪಾಯಿಯನ್ನು ಮಂಜೂರು ಮಾಡಿದೆ.
10) ದಿನಬಳಕೆಯ ಅವಶ್ಯ ವಸ್ತುಗಳ ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
Agreed on government decision..
I live in rent house I work everyday for my daily needs what I will eat if I don’t work is their anything available