ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಫೆ22 ರಂದು ವಿಂಶತಿ ಸಂಭ್ರಮ

ನಂದಳಿಕೆ: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಇವರ ಸಹಯೋಗದಲ್ಲಿ ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರ್ನಾಟಕ ಸಂಘ ರತ್ನ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 20ನೇ ವರ್ಷಾಚರಣೆ ಅಂಗವಾಗಿ ವಿಂಶತಿ ಸಂಭ್ರಮ ಮತ್ತು 14 ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಮಹಾಶಿವರಾತ್ರಿ ಪೂಜಾ ಮಹೋತ್ಸವವು ಫೆಬ್ರವರಿ 22 ರಂದು ಶನಿವಾರ ನಂದಳಿಕೆಯ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಜರಗಲಿದೆ.
ಮಧ್ಯಾಹ್ನ 3 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭ, ಸಂಜೆ 4 ಗಂಟೆಗೆ ಬೋಳ ತ್ರಿವೇಣಿ ಸಂಗಮ ಪುರ್‍ಲಡ್ಕ ಕ್ರಾಸ್‌ನಿಂದ ಸಂಘದವರೆಗೆ ಮೆರವಣಿಗೆ, ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭ.

ನಂದಳಿಕೆ: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಇವರ ಸಹಯೋಗದಲ್ಲಿ ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರ್ನಾಟಕ ಸಂಘ ರತ್ನ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ 20ನೇ ವರ್ಷಾಚರಣೆ ಅಂಗವಾಗಿ ವಿಂಶತಿ ಸಂಭ್ರಮ ಮತ್ತು 14 ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಮಹಾಶಿವರಾತ್ರಿ ಪೂಜಾ ಮಹೋತ್ಸವವು ಫೆಬ್ರವರಿ 22 ರಂದು ಶನಿವಾರ ನಂದಳಿಕೆಯ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಜರಗಲಿದೆ.
ಮಧ್ಯಾಹ್ನ 3 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭ, ಸಂಜೆ 4 ಗಂಟೆಗೆ ಬೋಳ ತ್ರಿವೇಣಿ ಸಂಗಮ ಪುರ್‍ಲಡ್ಕ ಕ್ರಾಸ್‌ನಿಂದ ಸಂಘದವರೆಗೆ ಮೆರವಣಿಗೆ, ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭ.

ಸಭಾಕಾರ್ಯಕ್ರಮ:
ಶ್ರೀ ಕ್ಷೇತ್ರ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೋಳ ವಂಜಾರಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ವಿವಿಧ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್, ನಂದಳಿಕೆ ಚಾವಡಿ ಅರಮನೆಯ ಎನ್. ಸುಹಾಸ್ ಹೆಗ್ಡೆ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ವಿದ್ಯಾರ್ಥಿ ವೇತನ ವಿತರಣೆ ಮಾಡಲಿದ್ದಾರೆ. ಬೆಂಗಳೂರು ಬಿ.ಎಸ್.ಎನ್.ಡಿ.ಪಿ. ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಗೀತಾಂಜಲಿ ಎಂ. ಸುವರ್ಣ ಕಟಪಾಡಿ ‘ಅಬ್ಬನಡ್ಕ ಐಸಿರಿ’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಸಮಾಜ ಸೇವಕರು ಮತ್ತು ಯುವ ಉದ್ಯಮಿ ಇನ್ನಾ ದೀಪಕ್ ಕೋಟ್ಯಾನ್ ಅನಾರೋಗ್ಯವಂತರಿಗೆ ಸಹಾಯಧನ ವಿತರಣೆ ಮಾಡಲಿದ್ದಾರೆ. ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಪ್ರೆಡ್ ಡಿಸೋಜಾ, ಕಾರ್ಕಳದ ಯುವ ಉದ್ಯಮಿ ಸಮದ್ ಖಾನ್, ಮುಂಬೈ ಉದ್ಯಮಿ ಶ್ರೀಕಾಂತ್ ಜಿ. ಶೆಟ್ಟಿ, ಬೆಳ್ಮಣ್ಣು ಜೇಸಿಐನ ಅಧ್ಯಕ್ಷ ಸತ್ಯನಾರಾಯಣ ಭಟ್, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ವಿಂಶತಿ ಸಂಭ್ರಮಾಚರಣೆ ಸಮಿತಿಯ ಕಾರ್ಯಾಧ್ಯಕ್ಷ ನಂದಳಿಕೆ ರಾಜೇಶ್ ಕೋಟ್ಯಾನ್ ಸಮಾರಂಭದಲ್ಲಿ ಗೌರವ ಉಪಸ್ಥಿತಿತರಿರುವರು.

ತುಳು ಚಲನಚಿತ್ರ ನಟರ ಆಗಮನ : ತುಳು ಚಲನಚಿತ್ರ ಹಾಗೂ ಬಲೇ ತೆಲಿಪಾಲೆ ಖ್ಯಾತಿಯ ಬೈಲೂರು ಪ್ರಸನ್ನ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಅಬ್ಬನಡ್ಕ ಸೌರಭ ಪ್ರಶಸ್ತಿ: ಹರೀಶ್ ಪೂಜಾರಿ ಬೋಳ (ಗರಡಿ ಅರ್ಚಕರು), ಶ್ರೀಧರ್ ಕುಲಾಲ್ ಕುತ್ಯಾರು (ನಿವೃತ್ತ ಯೋಧ), ಸಂಜೀವ (ದೇಜು) ಕೆದಿಂಜೆ (ದೈವಸ್ಥಾನದ ಅರ್ಚಕರು), ಸುರೇಶ್ ರಾವ್, ಕೆಮ್ಮಣ್ಣು (ಸಂಘಟಕರು), ವಾಸುದೇವ ತಂತ್ರಿ ಬೆಳ್ಮಣ್ಣು (ಪಾಕತಜ್ಞರು), ರಾಜೇಶ್ ಸೇರಿಗಾರ ನಂದಳಿಕೆ (ಸ್ಯಾಕೋಪೋನ್ ವಾದಕರು), ಶರತ್ ಶೆಟ್ಟಿ ಕಿನ್ನಿಗೋಳಿ (ರಂಗಭೂಮಿ ಕಲಾವಿದರು), ಪ್ರತಿಮಾ ಅನಿಲ್ ನಂದಳಿಕೆ (ಎಸ್.ಎಲ್.ಆರ್.ಎಂ. ಮೇಲ್ವೀಚಾರಕರು), ರಾಜು ಶೆಟ್ಟಿ ನಂದಳಿಕೆ (ಕೃಷಿ), ಸುಂದರ ಪೂಜಾರಿ ಬೋಳ (ಮೂರ್ತೆದಾರರು), ಹರಿಪ್ರಸಾದ್ ನಂದಳಿಕೆ (ಪ್ರತಕರ್ತರು), ಪುಂಡಲೀಕ ಮರಾಠೆ ಬಂಟಕಲ್ಲು (ಶಿಕ್ಷಣ), ಉದಯ್ ಮುಂಡ್ಕೂರು (ಛಾಯಾಗ್ರಾಹಕರು), ಹರೀಶ್ ಸಚ್ಚೇರಿಪೇಟೆ (ಟಿವಿ ವರದಿಗಾರರು), ಕೃತಿ ಆರ್. ಸನಿಲ್ ಉಡುಪಿ (ನೃತ್ಯ)

ಅಬ್ಬನಡ್ಕ ಗಾನಕೋಗಿಲೆ ಪ್ರಶಸ್ತಿ: ಸಚಿತ್ ಪೂಜಾರಿ ನಂದಳಿಕೆ, ಶರತ್ ದೇವಾಡಿಗ ಬೆಳ್ಮಣ್ಣು, ಪ್ರದೀಪ್ ಆಚಾರ್ಯ ಕೆಮ್ಮಣ್ಣು, ಸುಪ್ರೀತ್ ಸಫಳಿಗ ಬೋಳ, ಅಶೋಕ್ ಶೆಟ್ಟಿ ಬೋಳ.

ಸಮಾರಂಭದ ವಿಶೇಷತೆಗಳು: ಸ್ವಚ್ಛ ಅಬ್ಬನಡ್ಕ ಪರಿಕಲ್ಪನೆಯಡಿಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ, ತುಳುನಾಡ ಶೈಲಿಯ ಬೆಲ್ಲ-ನೀರಿನ ಪಾನಕದ ವ್ಯವಸ್ಥೆ, ಪ್ರಶಸ್ತಿ ಪ್ರದಾನ-ಸನ್ಮಾನ-ವಿಶೇಷ ಮನ್ನಣೆಗಳು, ಅಶಕ್ತರಿಗೆ ಸಹಾಯಧನ ವಿತರಣೆ, ದೇಶಭಕ್ತಿಯ ಸ್ಮರಣೆಯೊಂದಿಗೆ ನಿವೃತ್ತ ಯೋಧರಿಗೆ ಸನ್ಮಾನ, ಪ್ರತಿಭಾವಂತರಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ವಿವಿಧ ಸಂಘ-ಸಂಸ್ಥೆಗಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ನೃತ್ಯ ಸಿಂಚನ, ಕುಂಟಲಗುಂಡಿ ಕುಮಾರಿ ನಿಯಾ ಶೆಟ್ಟಿಯವರಿಂದ ಯಕ್ಷಗಾನ ನೃತ್ಯ, ವಿಶ್ವ ದಾಖಲೆಯ ಸರದಾರ್ತಿ ಈಟಿವಿ ತೆಲುಗು ಡಿ ಜ್ಯೂನಿಯರ್ ಖ್ಯಾತಿಯ ಉಡುಪಿ ಕುಮಾರಿ ಕೃತಿ ಆರ್. ಸನಿಲ್‌ರವರಿಂದ ಫಿಲ್ಮಿಡ್ಯಾನ್ಸ್, ಟಿವಿ ರಿಯಾಲಿಟಿ ಶೋ ಮಾದರಿಯಲ್ಲಿ ಸೂಪರ್ ಮಿನಿಟ್ ಗೇಮ್ಸ್, ಖ್ಯಾತ ಸಂಗೀತ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಲಿದೆ.

Leave a Reply

Your email address will not be published. Required fields are marked *

error: Content is protected !!