ಮುತ್ತಪ್ಪ‌ ರೈ ಅಂತ್ಯಕ್ರಿಯೆ ವೇಳೆ ಗುಂಡು ಹಾರಾಟ: ಆರು ಜನರ ಬಂಧನ

ರಾಮನಗರ: ಮುತ್ತಪ್ಪ‌ ರೈ ಅವರ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಜನ ಗನ್‌ಮ್ಯಾನ್ ಗಳನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಸಂಜೆ ಬಿಡದಿಯಲ್ಲಿ ನಡೆದ ಅಂತ್ಯಕ್ರಿಯೆ ಸಂದರ್ಭ ಆರೋಪಿಗಳು ಗಾಳಿಯಲ್ಲಿ ಐದು ಸುತ್ತು ಗುಂಡು ಹಾರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಡಬಲ್ ಬ್ಯಾರಲ್ ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ. 

ಮೋನಪ್ಪ, ಗಿರೀಶ್, ಲಕ್ವಿರ್ ಸಿಂಗ್, ಚಾತರ್ ಸಿಂಗ್, ರಂಜಿತ್ ರೈ‌ ಹಾಗೂ ಸುನಿಲ್ ಬಂಧಿತರು. ಅಲ್ಲದೇ ಅಂತ್ಯಸಂಸ್ಕಾರ‌ ಕಾರ್ಯಕ್ರಮದಲ್ಲಿ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ‌ ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ನಿಧನರಾದ ಮಾಜಿ ಡಾನ್ ಮುತ್ತಪ್ಪ ರೈ ಅಂತ್ಯಕ್ರಿಯೆ ರಾಮನಗರ ಜಿಲ್ಲೆ ಬಿಡದಿ ಸಮೀಪದ ಫಾರ್ಮ್ ಹೌಸ್‌‌ನಲ್ಲಿ ನೆರವೇರಿತು. ಎರಡನೇ ಪುತ್ರ ಅಂತಿಮ ವಿಧಿ ವಿಧಾನ ನೆರವೇರಿಸಿದರು. ಕೊರೊನಾ ಲಾಕ್‌ಡೌನ್ ಕಾರಣ ಕೆಲವೇ ಕೆಲವು ಮಂದಿ ಕುಟುಂಬ ಸದಸ್ಯರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!