ಮುಸ್ಲಿಮರು ರಾಜಕೀಯ ನಾಯಕರ ಷಡ್ಯಂತ್ರಕ್ಕೆ ಬಲಿಯಾಗಬಾರದು: ಮುಹಮ್ಮದ್ ಶಾಫಿ

ಉಡುಪಿ: ಇಂದು ದೇಶದ ಭದ್ರಬುನಾದಿಯಾಗಿರುವ ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಸಮಾಜದಲ್ಲಿ ಧಕ್ಕೆಯಾಗುವ ಸನ್ನಿವೇಶ ನಡೆಯುತ್ತಿದೆ.ಇಂತಹ ಸಂದರ್ಭ ಮುಸ್ಲಿಮ್ ಸಮುದಾಯವು ರಾಜಕೀಯ ಪ್ರೇರಿತ ಷಡ್ಯಂತರಕ್ಕೆ ಬಲಿಯಾಗಬಾರದು ಎಂದು ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ಬೆಂಗಳೂರು ಹೇಳಿದ್ದಾರೆ.

ಕರ್ನಾಟಕ ಮುಸ್ಲಿಂ ಜಮಾಅತ್ ಆಶ್ರಯದಲ್ಲಿ ಉಡುಪಿಯ ಲಿಗಾಡೋ ಹೊಟೇಲಿನ ಸಭಾಂಗಣದಲ್ಲಿ ಗುರುವಾರ ನಡೆದ `ಪ್ರಜಾ ಭಾರತ’ ರಾಜ್ಯ ಮಟ್ಟದ ಜನಜಾಗೃತಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸಿಎನ್‌ಎನ್, ಎನ್‌ಆರ್‌ಸಿ ಕಾಯಿದೆ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕು. ಇದರಿಂದ ಸಮಾಜದ ಸೌಹಾರ್ದತೆ, ಸಹಬಾಳ್ವೆಗೆ ಯಾವುದೇ ಧಕ್ಕೆ ಉಂಟಾಗಬಾರದು. ಇಂದು ನಮಗೆ ದೇಶ ಕಟ್ಟುವ ಕೆಲಸ ಆಗಬೇಕಾಗಿದೆ ಎಂದರು.

ಈ ದೇಶದ ಸಂವಿಧಾನವೇ ಭಾರತ ಆಡಳಿತ ನಡೆಯುತ್ತಿದೆ. ಯಾವುದೇ ಒಂದು ಪಕ್ಷದ ಪ್ರಣಾಳಿಕೆ ಮೇಲೆ ಭಾರತ ನಡೆಯಲ್ಲ. ಸಂವಿಧಾನದ ಅಡಿಯಲ್ಲಿ ಇಲ್ಲಿನ ಸರಕಾರ ನಡೆಯುತ್ತದೆ. ಆಡಳಿತ ಇದರ ವಿರುದ್ಧ ಕೆಲಸ ಮಾಡಿದರೆ ನಮಗೆ ನ್ಯಾಯಾಂಗ ವ್ಯವಸ್ಥೆ ಇದೆ. ಕಾನೂನು ಹೋರಾಟ ಅವಕಾಶ ಇದೆ. ಅದು ಹಿಂದು ಮುಸ್ಲಿಮ್ ಧ್ವೇಷಕ್ಕೆ ಕಾರಣ ಆಗಬಾರದು. ಈ ದೇಶವನ್ನು ಪ್ರೀತಿಯಿಂದ ಕಟ್ಟಬಹುದೇ ಹೊರತು ಧ್ವೇಷದಿಂದ ಅಲ್ಲ ಎಂದು ಅವರು ತಿಳಿಸಿದರು.

ಮುಸ್ಲಿಮರು ಗಲಭೆಗೆ ಅವಕಾಶ ನೀಡುವುದಿಲ್ಲ. ವಿವೇಕದಿಂದ ವರ್ತಿಸಬೇಕು. ನಾವು ನಮ್ಮ ಬುದ್ದಿವಂತಿಕೆಯಲ್ಲಿ ಮುಂದುವರೆಯಬೇಕು. ಸ್ವಾತಂತ್ರ ದೊರೆತು ೭೦ ವರ್ಷಗಳಾಗದರೂ ನಮ್ಮ ಹಕ್ಕುಗಳಿಗಾಗಿ ನಾವು ಇಂದು ಬೀದಿಯಲ್ಲಿzವೆ. ಬೇರೆ ಸಮುದಾಯದ ರೀತಿಯಲ್ಲಿ ಯಾಕೆ ನಾವು ಪ್ರಗತಿ ಸಾಧಿಸಿಲ್ಲ. ಕರ್ನಾಟಕದಲ್ಲಿ ಮುಸ್ಲಿಮರು ೮೦ ಲಕ್ಷ ಇದ್ದರೂ ಕೇವಲ ಏಳು ಮಂದಿ ಶಾಸಕರಿದ್ದಾರೆ. ಒಬ್ಬರೇ ಒಬ್ಬ ಸಂಸದರಿಲ್ಲ ಎಂದರು.

ಅಭಿಯಾನವನ್ನು ಉದ್ಘಾಟಿಸಿದ ಜಮಾಅತ್ ರಾಜ್ಯ ಉಪಾಧ್ಯಕ್ಷ ಡಾ. ಮುಹಮ್ಮದ್ ಫಾಝಿಲ ರಝ್ವಿ ಮಾತನಾಡಿ, ಇಂದು ಮಾನವೀಯತೆ ಎಂಬುದು ಕ್ಷೀಣಿಸುತ್ತ ಬರುತ್ತಿದೆ. ಪರಸ್ಪರರಲ್ಲಿ ಅಪನಂಬಿಕೆ ಹೆಚ್ಚಾಗುತ್ತಿದೆ. ಇಂದು ಮನುಷ್ಯತ್ವವನ್ನು ಎಲ್ಲ ಕಡೆ ಪಸರಿಸುವ ಕೆಲಸ ಮಾಡಬೇಕು. ಇಂದು ಯುವಜನತೆ ಅಪರಾಧಿ ಕೃತ್ಯ, ಡ್ರಗ್ಸ್ ಮಾಫಿಯಾದಂತಹ ದುಶ್ಚಟಗಳಿಗೆ ಬಲಿ ಯಾಗುತ್ತಿದೆ. ಅದರಿಂದ ದೂರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಭಾರತೀಯ ಮುಸ್ಲಿಮರು ತಮ್ಮ ಹೆತ್ತವರಂತೆ ಈ ನೆಲವನ್ನು ಪ್ರೀತಿಸುವವ ರಾಗಿದ್ದಾರೆ. ದೇಶಪ್ರೇಮ ಎಂಬುದು ನಮ್ಮ ರಕ್ತದ ಕಣಕಣದಲ್ಲೂ ಇದೆ. ಈ ದೇಶದ ರಕ್ಷಣೆಗೆ ಮುಸ್ಲಿಮರು ಸದಾ ಸಿದ್ಧರಿದ್ದಾರೆ. ಸಮಾಜದಲ್ಲಿ ಸೌಹಾರ್ದತೆ ಗಟ್ಟಿಗೊಳಿಸುವ ಮೂಲಕ ದೇಶ ಕಟ್ಟುವ ಕೆಲಸವನ್ನು ಎಲ್ಲರು ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಮುಸ್ಲಿಮ್ ಜಮಾಅತ್ ರಾಜ್ಯ ಉಪಾಧ್ಯP ಅಬೂ ಸುಫಿ ಯಾನ್ ಇಬ್ರಾಹಿಂ ಮದನಿ ವಹಿಸಿದ್ದರು. ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಬೆಂಗಳೂರು, ನಿವೃತ್ತ ಕೆಎಎಸ್ ಅಧಿಕಾರಿ ಇಜಾಝ ಅಹ್ಮದ್ ಬಳ್ಳಾರಿ ವಿಷಯ ಮಂಡನೆ ಮಾಡಿದರು.

ಜಮಾಅತ್ ರಾಜ್ಯ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ರಾಜ್ಯ ವಕ್ಪ್ ಬೋರ್ಡ್ ಸದಸ್ಯ ಯಹ್ಕೂಬ ಯೂಸುಫ್ ಶಿವಮೊಗ್ಗ, ಸಯ್ಯಿದ್ ಜುನೈದ್ ತಂಙಳ್, ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಯ್ಯಿದ್ ಎಸ್.ಎಂ. ತಂಙಳ್, ಜಅಮಾತ್ ಜಿಲ್ಲಾಧ್ಯಕ್ಷ ಮೌಲಾನಾ ನಝೀರ್ ಅಝ್ಹರಿ, ಕಾರ್ಯಕ್ರಮ ನಿರ್ವಣಾ ಸಮಿತಿ ಅಧ್ಯಕ್ಷ ಹಾಜಿ ಪಿ. ಅಬೂಬಕ್ಕರ್ ನೇಜಾರು ಮುಖ್ಯ ಅತಿಥಿಗಳಾಗಿದ್ದರು.

ಪ್ರಮುಖರಾದ ಸಯ್ಯಿದ್ ಫರೀದ್ ಉಡುಪಿ, ಮುಹಮ್ಮದ್ ನಯೀಮ ಕಟಪಾಡಿ, ಬಿಎಸ್‌ಎಫ್ ರಫೀಕ ಕುಂದಾಪುರ, ಕೆ.ಎಸ್.ಎಂ.ಮನ್ಸೂರು, ಹಾಜಿ ಅಬ್ದು ಪರ್ಕಳ, ಶೇಖ್ ಗೌಸ್ ಕಾರ್ಕಳ, ಅಬ್ದುರ್ರಹ್ಮಾನ್ ಮಲ್ಪೆ, ಮುಹಮ್ಮದ್ ಮೌಲಾ ಮೊದಲಾದ ವರು ಉಪಸ್ಥಿತರಿದ್ದರು.

ಜಮಾಅತ್ ರಾಜ್ಯ ಕಾರ್ಯದರ್ಶಿ ಎಂ.ಬಿ.ಎಂ.ಸ್ವಾದಿಕ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ವಂದಿಸಿದರು. ಕೆ.ಎ. ಅಬ್ದುರ್ರಹ್ಮಾನ ರಝ್ವಿ ಕಲ್ಕಟ್ಟ ಹಾಗೂ ವೈಬಿಸಿ ಬಶೀರ್ ಅಲಿ ಮೂಳೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!