ಮೇ 25 ರವರೆಗೆ ಅಂಗಡಿ ಮುಗ್ಗಟ್ಟುಗಳು ತೆರೆಯಲು ಅವಕಾಶ ನೀಡದಂತೆ ಮುಸ್ಲಿಮ್ ಒಕ್ಕೂಟ ಮನವಿ

ಉಡುಪಿ: ಈದ್ ಸಂದರ್ಭದಲ್ಲಿ ಜನ ಮುಗಿಬಿದ್ದು ಖರೀದಿಸಲು ಹೋಗುವ ಅಪಾಯವಿದ್ದು, ವದಂತಿ ಹರಡುವ ಮತ್ತು ಸಮಾಜದ ಶಾಂತಿ ಕದಡಲು ಕೆಲವರು ಈ ಸಂದರ್ಭವನ್ನು ಬಳಸಿಕೊಳ್ಳುವ ಸಾಧ್ಯತೆಯಿರುವುರಿಂದ ಮೇ.17 ರ ನಂತರವೂ ಮೇ 25 ರವರೆಗೆ ಯಾವುದೇ ವಾಣಿಜ್ಯ ಅಂಗಡಿ ಮುಗ್ಗಟ್ಟುಗಳು ತೆರೆಯಲು ಅವಕಾಶ ನೀಡದಂತೆ ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಮಾಡಿದ್ದಾರೆ.

ರಮದಾನ್ ಕೊನೆಯ ವಾರದಲ್ಲಿ ವಾಣಿಜ್ಯ ಮಳಿಗೆಗೆ ಅವಕಾಶ ನೀಡಿದರೆ ಜನ ಈದ್ ಖರೀದಿಗೆ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿಯುವ ಸಾಧ್ಯತೆಯಿದ್ದು ಇದರ ಬಗ್ಗೆ ಗಮನ ಹರಿಸಿ ಪ್ರಸ್ತುತ ಲಾಕ್’ಡೌನ್ ನ್ನು ಮುಂದುವರಿಸಿ ಅಗತ್ಯ ವಸ್ತುಗಳಿಗೆ ಮಾತ್ರ ಅನುವು ಮಾಡಿಕೊಡಬೇಕಾಗಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಯಾಸೀಮ್ ಮಲ್ಪೆ, ಮುಹಮ್ಮದ್ ಮೌಲ, ಸಲಾಹುದ್ದೀನ್ ಅವರು ಉಪಸ್ಥಿತರಿದ್ದರು


Leave a Reply

Your email address will not be published. Required fields are marked *

error: Content is protected !!