ಉಡುಪಿಯಲ್ಲಿ ಮುಂಬಾಯಿ ಲೇಡಿಸ್ ಬಾರ್ ಮಾಲಕನ ಹತ್ಯೆ

ಹಿರಿಯಡ್ಕ: ಬೆಳ್ಳಂಪಳ್ಳಿ ಮುಖ್ಯ ರಸ್ತೆಯಲ್ಲಿ ಲೇಡಿಸ್ ಬಾರ್ ಮಾಲಕನ ಹತ್ಯೆಗೈದು ಎಸೆದು ಹೋದ ಘಟನೆ ಇಂದು ಬೆಳಕಿಗೆ ಬಂದಿದೆ.
ಕೊಲೆಯಾದತ ಮುಂಬಾಯಿ ಲೇಡಿಸ್ ಬಾರ್ ಮಾಲಕ ವಶಿಷ್ಠ ಯಾದವ್ (43) ಎಂದು ತಿಳಿದು ಬಂದಿದೆ. ಈತನನ್ನು ನಿನ್ನೆ ರಾತ್ರಿ ಕೊಲೆಗೈದು ನಿರ್ಜನ ಪ್ರದೇಶವಾದ ಬೆಳ್ಳಂಪಳ್ಳಿ ಬಳಿ ಎಸೆದು ಹೋಗಿದ್ದಾರೆ.


ಆತ್ರಾಡಿ ಪರೀಕ-ಕುಕ್ಕೆಹಳ್ಳಿ ಮುಖ್ಯ ರಸ್ತೆಯ ಬೆಳ್ಳಂಪಳ್ಳಿಯಲ್ಲಿ ಇಂದು ಬೆಳಿಗ್ಗೆ 11.30 ಸುಮಾರಿಗೆ ಮೃತ ದೇಹ ನೋಡಿದ ಸ್ಥಳಿಯರು ಹಿರಿಯಡ್ಕ ಠಾಣೆಗೆ ಮಾಹಿತಿ ನೀಡಿದ್ದಾರೆ. ರವಿವಾರ ಉಡುಪಿಯ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಹೋಟೆಲ್‌ನ ರಶೀದಿ ವಶಿಷ್ಠನ ಪ್ಯಾಂಟ್ ಕಿಸೆಯಲ್ಲಿ ಸಿಕ್ಕಿದೆಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸಿನ ವಿಚಾರವಾಗಿ ಮುಂಬಾಯಿಯ ಮಾಯಾ ಬಾರ್ ಮಾಲಕನ ಹತ್ಯೆ ಮಾಡಲಾಗಿದೆಂದು ತಿಳಿದುಬಂದಿದೆ. ಈ ಹಿಂದೆ ಕೂಡ ಇದರ ಇನ್ನೋರ್ವ ಪಾಲುದಾರರನ್ನು ಕೊಲೆ ಮಾಡಲು ಯತ್ನಿಸಿದ್ದು, ಸುಮಾರು ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ಜೀವನ್ಮಾರಣ ಸ್ಥಿತಿಯಲ್ಲಿದ್ದಾರೆಂದು ಮುಂಬಾಯಿ ಮೂಲಗಳು ತಿಳಿಸಿವೆ.


ವಶಿಷ್ಟ ಯಾದವ್‌ರನ್ನು ದುಷ್ಕರ್ಮಿಗಳು ಕುತ್ತಿಗೆ ಬಿಗಿದು ಹತ್ಯೆ ಮಾಡಿ ಬೆಳ್ಳಂಪಳ್ಳಿಯಲ್ಲಿ ಎಸೆದು ಹೋಗಿದ್ದಾರೆ.

ಬಾರ್ ಮಾಲಕನ ಹತ್ಯೆಯ ದುಷ್ಕರ್ಮಿಗಳ ಪತ್ತೆಗೆ ಎರಡು ತಂಡಗಳ ರಚನೆ ಉಡುಪಿ ಡಿಸಿಐಬಿ ಪೊಲೀಸ್ ವೃತ್ತ ನಿರೀಕ್ಷಕರ ಮತ್ತು ಬ್ರಹ್ಮಾವರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ವಶಿಷ್ಠ ಉತ್ತರ ಪ್ರದೇಶದ ಮೂಲದವರಾಗಿದ್ದು, ಮುಂಬಾಯಿಯಲ್ಲಿ ಹಲವಾರು ವರ್ಷಗಳಿಂದ ಲೇಡಿಸ್ ಬಾರ್ ನಡೆಸುತ್ತಿದ್ದರು. ಹಣಕಾಸಿನ ವಿಚಾರವಾಗಿಯೇ ಈ ಕೊಲೆ ನಡೆದಿರುವ ಸಾಧ್ಯತೆ ಹೆಚ್ಚಿದೆಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!