ಗಡಿಪಾರದ ಬಾರ್ ಮಾಲಕನ ಹತ್ಯೆ: ಆರೋಪಿಗಳಿಗೆ 7 ದಿನ ಪೊಲೀಸ್ ಕಸ್ಟಡಿ

ಉಡುಪಿ: ಮುಂಬಾಯಿಯ ಲೇಡಿಸ್ ಬಾರ್ ಮಾಲಕ, ಹಲವಾರು ಕ್ರಿಮಿನಲ್ ಪ್ರಕರಣಗಳಿಂದ ನವಿಮುಂಬಾಯಿಂದ ಗಡಿಪಾರದ ವಶಿಷ್ಠ ಸತ್ಯನಾರಯಣ್ ಯಾದವ್(47)ನನ್ನು ಹತ್ಯೆಗೈದ ನಾಲ್ವರು ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಉಡುಪಿ ನ್ಯಾಯಾಲಯ ಇಂದು ಏಳು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.


ಘಟನೆ ವಿವರ: ಫೆ.9 ರಂದು ರಾತ್ರಿ ಕಡಿಯಾಳಿಯ ಗ್ರೀನ್ ಆಪಲ್ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ರಾತ್ರಿ ವಶಿಷ್ಠ ಮತ್ತು ನಾಲ್ವರು ಆರೋಪಿಗಳು ರಾತ್ರಿ 12 ಗಂಟೆ ತನಕ ಕುಡಿದು, ನಂತರ ವಶಿಷ್ಠನನ್ನು ತಿರುಗಾಡುವ ನೆಪದಲ್ಲಿ ಕರೆದುಕೊಂಡು ಹೋಗಿದ್ದರು. ಎಕೆಎಮ್‌ಎಸ್ ಬಸ್‌ನ ಮ್ಯಾನೇಜರ್ ಅವಿನಾಶ್ ಕರ್ಕೆರ ತನ್ನ ಸಹೋದರಿ ಸೀಮಂತಕ್ಕಾಗಿ ಪರಿಚಯದ ಜೀವನ್ ಎಂಬವರಲ್ಲಿ ಬಾಡಿಗೆ ಕಾರನ್ನು ಪಡೆದಿದ್ದ. ಇದೇ ಕಾರಿನಲ್ಲಿ ಹತ್ಯೆಯ ಸಂಚನ್ನು ಮೊದಲೇ ರೂಪಿಸಿದ್ದ ತಂಡ, ಬಾರ್ ಮಾಲಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು.


ಬಾರ್ ಎದುರಿನ ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿದ್ದ ಹಂತಕರು:
ಭಾನುವಾರ ಐದು ಜನರು ಕಡಿಯಾಳಿ ಬಾರ್‌ನಲ್ಲಿ ಕುಡಿದು ಮಧ್ಯ ರಾತ್ರಿ12.20 ಸುಮಾರಿಗೆ ಕಾರಿನಲ್ಲಿ ತಿರುಗಾಡಲು ಮಣಿಪಾಲ ಕಡೆ ಹೋಗಿದ್ದಾರೆ. ಕಾರನ್ನು ಆರೋಪಿ ಸುರತ್ಕಲ್‌ನ ಅಬ್ದುಲ್ ಶುಕೂರ್ ಚಲಾಯಿಸಿದ್ದು, ಮುಂದಿನ ಸೀಟ್‌ನಲ್ಲಿ ಬಾರ್ ಮಾಲಕ ವಶಿಷ್ಠ ಕುಳಿತಿದ್ದ. ಉಳಿದ ಆರೋಪಿಗಳಾದ ಮಾಯಾ ಬಾರ್‌ನ ಮಾಜಿ ವೈಟರ್ ದೆಹಲಿಯ ಸುಮಿತ್ ಮಿಶ್ರ, ಮಂಗಳೂರಿನ ತೆಂಕಮಿಜಾರ್‌ನ ಅವಿನಾಶ್ ಕರ್ಕೆರ, ದೊಡ್ಡಣಗುಡ್ಡೆಯ ಮೊಹಮ್ಮದ್ ಶರೀಫ್ ಕಾರಿನ ಹಿಂಬದಿ ಕುಳಿತಿದ್ದರು.


ಕಾರನ್ನು ಆತ್ರಾಡಿಯಿಂದಾಗಿ ಪರೀಕ ಬೆಳ್ಳಂಪಳ್ಳಿ ಕಡೆ ಹೋಗುವ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುವಾಗ ಹಿಂದಿನಿಂದ ಕುಳಿತ ಮಾಯಾ ಬಾರ್‌ನ ಮಾಜಿ ವೈಟರ್ ಸುಮಿತ್ ಮಿಶ್ರ ಮೊದಲೇ ತಂದಿದ್ದ ಕೇಬಲಲ್ ವಯರ್‌ನಲ್ಲಿ ಕುತ್ತಿಗೆ ಬೀಗಿದು ಹತ್ಯೆ ಮಾಡಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ನಂತರ ಉಳಿದ ಆರೋಪಿಗಳಾದ ಎ..ಎಮ್.ಎಸ್ ಬಸ್‌ನ ಸಿಬ್ಬಂದಿಗಳು ಸೇರಿ ಬೆಳ್ಳಂಪಳ್ಳಿ ನಿರ್ಜನ ಪ್ರದೇಶಕ್ಕೆ ಮೃತ ದೇಹ ಎಸೆದು ಹೋಗಿದ್ದಾರೆ.
ಕೊಲೆ ಮಾಡಿ ಮತ್ತೆ ಕಡಿಯಾಳಿ ಬಾರ್ ಎದುರಿನ ಓಕುಡೆ ಲಾಡ್ಜ್‌ಗೆ ಬಂದ ಆರೋಪಿಗಳು ರಾತ್ರಿ ಅಲ್ಲೆ ಕಳೆದಿದ್ದರು. ಸಿಸಿಟಿವಿ ದೃಶ್ಯ ಆಧಾರಿಸಿ ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರು, ಕೊಲೆ ನಡೆದ 24 ಗಂಟೆಯಲ್ಲೆ ಬಂಧಿಸಲು ಇದು ಸಹಕಾರಿಯಾಗಿದೆನ್ನುತ್ತಾರೆ ತನಿಖಾಧಿಕಾರಿಗಳು.


ಜ.31 ರಂದು ಇಂಡಿಗೋ ವಿಮಾನದಿಂದ ಆಗಮಿಸಿದ ವಶಿಷ್ಠ ಉಡುಪಿ ಕೆ.ಎಸ್. ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಶಾಂಭವಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಇದರ ಮಾಹಿತಿ ಪಡೆದ ಹಂತಕ ಸುಮಿತ್ ಉಡುಪಿಗೂ ಬಂದಿದ್ದ. ಬಾರ್ ಮಾಲಕನ ಚಲನವಲನ ಗಮನಿಸಿದ ಹಂತಕ ಸುಮಿತ್ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ಲೇಡಿಸ್ ಬಾರ್‌ನ ಡೆಸ್ಸಿಂಗ್ ಕೊಠಡಿಗೆ ಹೋಗಿದ್ದ ಸುಮಿತ್‌ನನ್ನು ಅರೆಬೆತ್ತಲೆಗೊಳಿಸಿ ಚೆನ್ನಾಗಿ ಥಳಿಸಿದ್ದ ದ್ವೇಷದಿಂದ ವಶಿಷ್ಠನಿಗೆ ಬುದ್ಧಿ ಕಲಿಸಬೇಕೆನ್ನುವ ಉದ್ದೇಶದಿಂದ ಹತ್ಯೆಯ ಸ್ಕೆಚ್ ಹಾಕಿದ್ದ ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹತ್ಯೆಯಲ್ಲಿ ಬಸ್ ಮಾಲಕನ ಕೈವಾಡದ ಬಗ್ಗೆ ವಶಿಷ್ಠನ ಪತ್ನಿ ನೇರ ಆರೋಪ ಮಾಡಿದ್ದು ಈ ನಿಟ್ಟಿನಲ್ಲಿ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉಡುಪಿಯ ಬಸ್ ಮಾಲಕ ಕಳೆದ 6 ವರ್ಷಗಳಿಂದ ಮಾಯಾ ಬಾರ್‌ನ ಪಾಲುದಾರನಾಗಿದ್ದು ಹತ್ಯೆಯಾದ ದಿನ ವಿಡಿಯೋ ಕಾಲ್ ಮಾಡಿ ಪರಿಚಯ ಮಾಡಿದ್ದಾಗಿ ವಶಿಷ್ಠನ ಪತ್ನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಬಾರ್ ಮಾಲಕ ವಶಿಷ್ಠ ಸತ್ಯನಾರಾಯಣ್ ಯಾದವ್‌ನ ಮೇಲಿನ ಪೂರ್ವ ದ್ವೇಷದಿಂದ ಈ ಹತ್ಯೆ ನಡೆದಿದೆಂದು ಪಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆಂದು ಉಡುಪಿ ಪೊಲೀಸ್ ಉಪಾಧೀಕ್ಷಕ ಕೆ.ಕುಮಾರ್‌ಚಂದ್ರ ಇಂದು ಬೇಟಿಯಾದ ಮಾಧ್ಯಮಕ್ಕೆ ತಿಳಿಸಿದರು. ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗುವುದೆಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!