ಚಪ್ಪಲ್ ಹಾಕಿ ಬೈಕ್ ಓಡಿಸಿದ್ರ ನಿಮಗೂ ದಂಡ !
ಬೆಂಗಳೂರು: ಮೋಟಾರು ಕಾಯ್ದೆ ತಿದ್ದುಪಡಿ ಬಳಿಕ ನೂತನ ಸಂಚಾರಿ ನಿಯಮಗಳು ಹಾಗೂ ದುಬಾರಿ ದಂಡದಿಂದ ಬೇಸ್ತು ಬಿದ್ದಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕಾದಿದೆ , ಇನ್ನುಮುಂದೆ ಚಪ್ಪಲಿ ಹಾಕಿಕೊಂಡು ವಾಹನ ಚಲಾಯಿಸಿದರೂ ದಂಡ ಗ್ಯಾರಂಟಿ ಎನ್ನಲಾಗುತ್ತಿದೆ.
ಹೌದು.. ಈಗಾಗಲೇ ಜಾರಿಗೆ ಬಂದಿರುವ ಹೊಸ ಟ್ರಾಫಿಕ್ ನಿಯಮಗಳಿಂದ ವಾಹನ ಸವಾರರು ಆಘಾತಕ್ಕೊಳಗಾಗಿದ್ದು, ಈ ಬೆನ್ನಲ್ಲೆ ವಾಹನ ಸವಾರರರಿಗೆ ಮತ್ತೊಂದು ಶಾಕ್ ತಗುಲಿದೆತಟ್ಟಲಿದೆ . ಸವಾರರು ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿಕೊಂಡು ಗೇರ್ ಹೊಂದಿರುವ ದ್ವಿಚಕ್ರ ವಾಹನ ಓಡಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ 1,000 ರೂ ದಂಡ ತೆರಬೇಕಾಗಿರುತ್ತದೆ. ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, , ಪಾರ್ಕಿಂಗ್ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತದವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಒಳ್ಳೆಯದು ಎಂಬುದು ನಿಯಮದ ಉದ್ದೇಶವಾಗಿದೆ. 1988ರ ಮೋಟಾರು ವಾಹನ ಕಾಯ್ದೆಯಲ್ಲೇ ಇದನ್ನು ಉಲ್ಲೇಖಿಸಲಾಗಿದೆ.