ಅಯೋಧ್ಯೆಯಲ್ಲಿ ಮಸೀದಿಗೆ 5 ಎಕ್ರೆ ಜಾಗ ಬೇಡ:ರಾಮ್ ದೇವ್

ಉಡುಪಿ: ಮುಸ್ಲೀಂರಿಗೆ ಮಸೀದಿ ನಿರ್ಮಾಣಕ್ಕೆ 5 ಎಕ್ರೆ ಭೂಮಿಯನ್ನು ಅಯೋಧ್ಯೆಯಲ್ಲಿರುವ 64 ಎಕ್ರೆ ಜಾಗದಲ್ಲಿ ಕೊಡಬಾರದು ಎಂದು ಬಾಬರಾಮ್ ದೇವ್ ಕಡಕ್ ಆಗಿ ವಿರೋಧಿಸಿದ್ದಾರೆ.  ಐದು ದಿನಗಳ ಯೋಗ ಶಿಬಿರಕ್ಕಾಗಿ ನಗರಕ್ಕೆ ಶುಕ್ರವಾರ ಆಗಮಿಸಿದ ಅವರು, ಕೃಷ್ಣಮಠ ಕನಕ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಭೂಮಿ ಕೇಳುವ ಓವೈಸಿ ಸಂಪೂರ್ಣ ಕೆಟ್ಟು ಹೋದ ವ್ಯಕ್ತಿ ಎಂದರು. ಆತ ಹಿಂದೂ ಮುಸ್ಲೀಮರ ನಡುವೆ ಗಲಬೆ ಎಬ್ಬಿಸಲು ಯತ್ನಿಸುತ್ತಿರುವ ವಿಷ ತುಂಬಿಕೊಂಡಿರುವ ವ್ಯಕ್ತಿ ಎಂದರು. ಅಯೋಧ್ಯೆಯ 64 ಎಕ್ರೆ ಜಾಗದಲ್ಲಿ ಮಸೀದಿ ನಿರ್ಮಿಸಿದಲ್ಲಿ ಭವಿಷ್ಯದಲ್ಲಿ ಗಲಭೆ ನಡೆಯುವ ಸಾಧ್ಯತೆ. ಗಲಾಟೆಗೆ ಅವಕಾಶ ಕೊಡಬಾರದು . ಮಸೀದಿ ಹೊರಗಡೆ ನಿರ್ಮಾಣವಾಗಲಿ ನಾವು ಸ್ವಾಗತಿಸುತ್ತೇವೆ ಎಂದರು. ದೇಶವು ಒಂದೇ, ಹಿಂದೂ ಮುಸ್ಲೀಮರ ಡಿಎನ್‌ಎ ಒಂದೆ, ನಾವೆಲ್ಲರೂ ಸಾಮರಸ್ಯದಿಂದ ಬದುಕಬೇಕು ಎಂದರು. ರಾಮನವಮಿಯಂದು ಪ್ರಧಾನಿ ನರೇಂದ್ರ ಮೋದಿ ಅವರೆ ಅಯೋಧ್ಯೆ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಬೇಕು ಎಂದು ಯೋಗಗುರು ಬಾಬರಾಮ್‌ದೇವ್ ಹೇಳಿದರು.

 ಶುಕ್ರವಾರವಷ್ಟೆ ಅಂತರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಅಸ್ತಿತ್ವಕ್ಕೆ ಬಂದಿದ್ದು,  ತನನ್ನು ಮೊದಲ ಚೇರ್ಮೆನ್ ಆಗಿ ಸರ್ಕಾರ ಆಯ್ಕೆ ಮಾಡಿದೆ. ಒಲಂಪಿಕ್ಸ್‌ನಲ್ಲಿ ಯೋಗವನ್ನು ಸೇರ್ಪಡೆಗೊಳಿಸುವುದು ತನ್ನ ಮೊದಲ ಗುರಿ ಎಂದರು. ಕಳೆದ ಹತ್ತು ವರ್ಷಗಳಿಂದ ಯೋಗ ಶಿಕ್ಷಣ ಮತ್ತು ಶಿಬಿರವನ್ನು ನಡೆಸಿಕೊಂಡು ಬಂದಿದ್ದು, ಇಲ್ಲಿವರೆಗೆ 2-3 ದಿನವಷ್ಟೆ ಶಿಬಿರವನ್ನು ನಡೆಸಿದ್ದೆ. ಇದೇ ಮೊದಲಭಾರಿಗೆ ಕೃಷ್ಣನೂರು ಉಡುಪಿಯಲ್ಲಿ 5 ದಿನಗಳ ಶಿಬಿರ ಆಯೋಜಿಸಿ ಸಂಪೂರ್ಣವಾಗಿ ಭಾಗವಹಿಸುತ್ತಿದ್ದೇನೆ. ಕ್ಯಾನ್ಸರ್ ಖಾಯಿಲೆ ಗುಣಪಡಿಸುವ ತಾಕತ್ತು ಯೋಗಕ್ಕಿದೆ ಎಂದ ಅವರು, ಯೋಗದಿಂದ ವಿಶ್ವ ರೋಗ ಮುಕ್ತಗೊಳ್ಳಲಿದೆ ಎಂದರು.
ಮದುಮೇಹ, ರಕ್ತದೊತ್ತಡ, ಥೈರಾಡ್, ಒತ್ತಡ ಸಮಸ್ಯೆಗೆ ಪರಿಹಾರ ಕಾಣಬಹುದು. ಯೋಗಭ್ಯಾಸದಿಂದ ಶೇ.99ರಷ್ಟು ಔಷಧ ಮುಕ್ತರಾಗಿ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!