ಅಂತರಾಷ್ಟ್ರೀಯ ಯೋಗ ದಿನ- ರಾಂಚಿಯಲ್ಲಿ ಮೋದಿ ಭಾಗಿ
ನವದೆಹಲಿ: ಐದನೇ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ದೇಶದಾದ್ಯಂತ ಯೋಗ ಪ್ರದರ್ಶನ ಮಾಡುವ ಮೂಲಕ ಯೋಗದಿನ ಆಚರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಜಾಖಂಡ್ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂಧರ್ಭದಲ್ಲಿ ಭಾರತ ಸೇರಿದಂತೆ ವಿಶ್ವದ ಜನರಿಗೆ ಶುಭಾಶಯ ಕೋರಿದರು. ಇಂದು ವಿಶ್ವದ ಅನೇಕ ಕಡೆಗಳಲ್ಲಿ ಜನರು ಯೋಗ ಮಾಡುತ್ತಿದ್ದಾರೆ.
ಯೋಗ ನಮ್ಮ ಸಂಸ್ಕೃತಿಯ ಪ್ರಮುಖ ಭಾಗ. ಇಂದಿನ ಬದಲಾದ ಕಾಲಘಟ್ಟದಲ್ಲಿ ನಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು, ಯೋಗದಿಂದ ಮಾತ್ರ ಸದೃಢ ಮಾಸಿಕ ಮತ್ತು ದೈಹಿಕ ಆರೋಗ್ಯ ಹೊಂದಲು ಸಾಧ್ಯ, ಆಧುನಿಕ ಯೋಗದ ಪಯಣವನ್ನು ನಗರದಿಂದ ಹಳ್ಳಿಗೆ, ಬುಡಕಟ್ಟು ಪ್ರದೇಶಕ್ಕೆ ತೆಗೆದುಕೊಂಡು ಹೋಗಬೇಕಿದೆ. ಯೋಗವನ್ನು ಬಡವರು ಮತ್ತು ಬುಡಕಟ್ಟು ಜನರ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕಿದೆ. ಏಕೆಂದರೆ ಅನಾರೋಗ್ಯದಿಂದ ಹೆಚ್ಚು ಬಳಲುವವರು ಬಡವರು ಎಂದು ಪ್ರಧಾನಿ ನರೇಂದ್ರ ಮೋದಿ ಈ ಸಂಧರ್ಭ ಹೇಳಿದರು.
ಕಾರ್ಯಕ್ರಮದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುವೀರ್ ದಾಸ್ ಮತ್ತು ಹಲವು ಸಚಿವರು ಮತ್ತು ೩೦ ಸಾವಿರ ಜನ ಪ್ರಧಾನಮಂತ್ರಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಹಾಜರಿದ್ದು, ಯೋಗಭ್ಯಾಸ ಮಾಡಿದರು.