ಬಹ್ರೇನ್‌ನಲ್ಲಿ 4.2 ಮಿ.ಡಾಲರ್ ವೆಚ್ಚದಲ್ಲಿ ಶ್ರೀ ಕೃಷ್ಣ ದೇವಾಲಯಕ್ಕೆ ಮೋದಿ ಚಾಲನೆ

ಮನಮಾ; ಇಲ್ಲಿನ 200 ವರ್ಷಗಳ ಹಳೆಯ ಶ್ರೀಕೃಷ್ಣ ದೇವಾಲಯದ ಡಾಲರ್ 4.2 ಮಿಲಿಯನ್ ವೆಚ್ಚದಲ್ಲಿ ಪುನರಾಭಿವೃದ್ಧಿ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ಭಾರತ ಮತ್ತು ಬಹ್ರೈನ್ ನಡುವಿನ ಗಟ್ಟಿಯಾದ ಸಂಬಂಧವನ್ನು ಇದು ತೋರಿಸುತ್ತದೆ ಎಂದು ಹೇಳಿದರು.


ಬಹ್ರೈನ್ ಗೆ ಮೊದಲ ಬಾರಿಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದು ಮನಾಮಾದಲ್ಲಿರುವ ಶ್ರೀನಾಥಜೀ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಹ್ರೈನ್ ನ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಇದು. 


ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಟ್ವೀಟ್ ಮಾಡಿರುವ ಪ್ರಧಾನಿ, ಬಹ್ರೈನ್ ನ ಶ್ರೀನಾಥಜೀ ದೇವಸ್ಥಾನದಲ್ಲಿ ಉತ್ತಮ ಸಮಯ ಕಳೆದೆ. ಕೊಲ್ಲಿ ರಾಷ್ಟ್ರಗಳಲ್ಲಿ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಇದು ಭಾರತ ಮತ್ತು ಬಹ್ರೈನ್ ಮಧ್ಯೆ ಗಟ್ಟಿಯಾದ ಸಂಬಂಧ ಬೆಳೆಸುತ್ತದೆ ಎಂದು ಹೇಳಿದ್ದಾರೆ. ದೇವಸ್ಥಾನಕ್ಕೆ ಬಂದ ಭಾರತೀಯರನ್ನು ಮೋದಿಯವರು ಮಾತನಾಡಿಸಿದರು. 


4.2 ಮಿಲಿಯನ್ ವೆಚ್ಚದಲ್ಲಿ ದೇವಸ್ಥಾನದ ಮರು ಅಭಿವೃದ್ಧಿ ಯೋಜನೆಗಳನ್ನು 16 ಸಾವಿರದ 500 ಚದರಡಿ ವಿಸ್ತೀರ್ಣದಲ್ಲಿ ಹೊಸ ನಾಲ್ಕು ಮಹಡಿಯ ಕಟ್ಟಡ 45 ಸಾವಿರ ಚದರಡಿ 30 ಮೀಟರ್ ಎತ್ತರ ಹೊಂದಿರುತ್ತದೆ. ಮರು ಅಭಿವೃದ್ಧಿ ಮಾಡುವಾಗ 200 ವರ್ಷ ಹಳೆಯ ದೇವಸ್ಥಾನದ ಪರಂಪರೆಯನ್ನು ತೋರಿಸಲಾಗುತ್ತದೆ. ಹೊಸ ಸಾಂಪ್ರದಾಯಿಕ ಸಂಕೀರ್ಣವು ಗರ್ಭಗುಡಿ ಮತ್ತು ಪ್ರಾರ್ಥನಾ ಮಂದಿರಗಳನ್ನು ಹೊಂದಿರುತ್ತದೆ.

Leave a Reply

Your email address will not be published. Required fields are marked *

error: Content is protected !!