ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ:ಪೂಜಾರಿಗೆ ಮೀನುಗಾರಿಕೆ, ಬಂದರು

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಆರ್‌ಎಸ್‌ಎಸ್ ಮತ್ತು ಯಡಿಯೂರಪ್ಪ ನಡುವಿನ ಹಗ್ಗ-ಜಗ್ಗಾಟದ ಬಳಿಕ ಖಾತೆ ಹಂಚಿಕೆ ಅಂತಿಮಗೊಂಡಿದೆ.

ಅಶ್ವಥ್ ನಾರಾಯಣ,  ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ.  ನಾಳೆ ಬೆಳಗ್ಗೆ 11.30ಕ್ಕೆ ಉಮೇಶ್ ಕತ್ತಿ ಮತ್ತು ಅರವಿಂದ ಲಿಂಬಾವಳಿ ಸಂಪುಟಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದ್ದು, ಈ ಸಂಬಂಧ ಸಿಎಂ ಸಮಯಾವಕಾಶ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಯಾರಿಗೆ ಯಾವ ಖಾತೆ?
ಸಿಎಂ ಬಿ.ಎಸ್.ಯಡಿಯೂರಪ್ಪ- ಹಣಕಾಸು, ಗುಪ್ತಚರ, ವಾರ್ತಾ ಪ್ರಸಾರ, ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಇಂಧನ,ಶಿಕ್ಷಣ, ಕೃಷಿ,

1) ಗೋವಿಂದ ಕಾರಜೋಳ – ಲೋಕೋಪಯೋಗಿ, ಸಮಾಜ ಕಲ್ಯಾಣ
2) ಡಾ. ಅಶ್ವತ್ಥ ನಾರಾಯಣ – ಉನ್ನತ ಶಿಕ್ಷಣ, ಐಟಿ ಮತ್ತು  ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ,
3) ಲಕ್ಷ್ಮಣ ಸವದಿ – ಸಾರಿಗೆ
4) ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್
5) ಜಗದೀಶ್ ಶೆಟ್ಟರ್ – ಬೃಹತ್, ಮಧ್ಯಮ ಕೈಗಾರಿಕೆ
6) ಆರ್. ಅಶೋಕ್ – ಕಂದಾಯ
7) ಬಿ. ಶ್ರೀರಾಮುಲು – ಆರೋಗ್ಯ
8) ಸುರೇಶ್ ಕುಮಾರ್ – ಪ್ರಾಥಮಿಕ ಶಿಕ್ಷಣ
9) ವಿ ಸೋಮಣ್ಣ – ವಸತಿ, ಕನ್ನಡ ಮತ್ತು ಸಂಸ್ಕೃತಿ

10) ಸಿ ಟಿ ರವಿ – ಪ್ರವಾಸೋದ್ಯಮ
11) ಬಸವರಾಜ್ ಬೊಮ್ಮಾಯಿ – ಗೃಹ
12) ಕೋಟ ಶ್ರೀನಿವಾಸ್ ಪೂಜಾರಿ – ಮೀನುಗಾರಿಕೆ, ಬಂದರು
13) ಜೆ ಸಿ ಮಾಧುಸ್ವಾಮಿ – ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
14) ಸಿ.ಸಿ ಪಾಟೀಲ್ – ಗಣಿ ಮತ್ತು ಭೂ ವಿಜ್ಞಾನ, ವಾಣಿಜ್ಯ ಮತ್ತು ಕೈಗಾರಿಕೆ
15) ಪ್ರಭು ಚೌವ್ಹಾಣ್ – ಪಶು ಸಂಗೋಪನೆ
16) ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
17) ನಾಗೇಶ್ – ಅಬಕಾರಿ

Leave a Reply

Your email address will not be published. Required fields are marked *

error: Content is protected !!