ಮಿಣಿ ಮಿಣಿ ಪೌಡರ್ ಟ್ರೊಲ್ : ಕುಮಾರಸ್ವಾಮಿ ಕೋರ್ಟ್‌ಗೆ
ಬೆಂಗಳೂರು: ತಮ್ಮ ಮಿಣಿ ಮಿಣಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಟ್ರೊಲ್ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಿಣಿ ಮಿಣಿ ಪೌಡರ್ ಉಲ್ಲೇಖಿಸದಂತೆ ಕುಮಾರಸ್ವಾಮಿ ಅವರು ಶನಿವಾರ ಬೆಂಗಳೂರಿನ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ‘ಮಿಣಿ ಮಿಣಿ ಪೌಡರ್’ ವೈರಲ್ ಮಾಡಿದ್ದಕ್ಕೆ ಕುಮಾರಸ್ವಾಮಿ ಗರಂ ಆಗಿದ್ದಾರೆ. ಮಿಣಿ ಮಿಣಿ ಪೌಡರ್ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುವುದಕ್ಕೆ ನಿರ್ಬಂಧ ಹೇರುವಂತೆ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಕೋರ್ಟ್ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿದ್ದು, ಕುಮಾರಸ್ವಾಮಿ ಪರ ವಕೀಲ ಇಸ್ಮಾಯಿಲ್ ಜಬೀ ಉಲ್ಲಾ ವಾದ ಮಂಡಿಸಲಿದ್ದಾರೆ. ಮಿಣಿ-ಮಿಣಿ ಟ್ರೋಲ್ ಆಗಿದ್ಯಾಕೆ ಗೊತ್ತಾ? ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕಿತ್ತು. ಇದನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿತ್ತು. ಇದಕ್ಕೆ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ ಅದ್ಯಾವದೋ ಬಾಂಬ್ ಅಂತೆ. ಅದನ್ನು ಎಲ್ಲೆಲ್ಲೋ ತೆಗೆದುಕೊಂಡು ಹೋಗಿ ವೈರ್ ಎಳೆದು ರಿಮೋಟ್‌ನಿಂದ ಬ್ಲಾಸ್ಟ್ ಮಾಡಿದ್ದಾರೆ. ಅದರಲ್ಲಿ ಪಟಾಕಿಗಳಲ್ಲಿ ಬಳಸುವ ಮಿಣಿ ಮಿಣಿ ಪೌಡರ್ ಇತ್ತು ಎಂದು ಹೇಳಿಕೆ ಕೊಟ್ಟಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿದಲ್ಲದೇ ಮಿಣಿ-ಮಿಣಿ ಪೌಡರ್ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೋಲ್ ಆಗುತ್ತಿದೆ . |