ಉಡುಪಿಗೆ ಸುಧಾಮೂರ್ತಿ ಯವರಿಂದ ₹54 ಲಕ್ಷದ ವೈದ್ಯಕೀಯ ಸಲಕರಣೆ

ಉಡುಪಿ : ಕೋವಿಡ್ ಸೋಂಕಿತ ರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವೈದ್ಯ ಕೀಯ ಸಲಕರಣೆಗಳ ನೆರವು ನೀಡುವಂತೆ ಜಿಲ್ಲಾಡಳಿತ ಮಾಡಿದ್ದ ಮನವಿಗೆ ಸ್ಪಂದಿಸಿರುವ ಇನ್‌ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಅವರು ಬುಧವಾರ ₹ 54 ಲಕ್ಷ ಮೌಲ್ಯದ ವಸ್ತುಗಳನ್ನು ಜಿಲ್ಲೆಗೆ ಕಳುಹಿಸಿದ್ದಾರೆ.


4,000 ಎನ್‌–95 ಮಾಸ್ಕ್‌, 4,000 ಸ್ಯಾನಿಟೈಸರ್ಸ್‌, 25,000 ತ್ರಿಪಲ್ ಲೇಯರ್ ಮಾಸ್ಕ್‌, 10,000 ಸರ್ಜಿಕಲ್ ಗ್ಲೌಸ್‌, 1,500 ಪಿಪಿಇ ಸೂಟ್ಸ್‌ಗಳನ್ನು ಸುಧಾಮೂರ್ತಿ ನೀಡಿದ್ದಾರೆ.

ಜಿಲ್ಲಾಡಳಿತ ಮನವಿ ಮಾಡಿದ್ದ 24 ಗಂಟೆಯಲ್ಲಿ ನೆರವು ಸಿಕ್ಕಿದೆ. ಇದಕ್ಕಾಗಿ ಸುಧಾಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!