ಉಡುಪಿ ಸಿಟಿ ಸೆಂಟರ್ : ಮ್ಯಾಕ್ಸ್ ಶೋರೂಂ ಉದ್ಘಾಟನೆ
ಸಿಟಿ ಸೆಂಟರ್ನ ಮಾಲೀಕ ಜಮಾಲುದ್ದೀನ್ ಅವರ ತಂದೆ ಬಿ.ಎಂ.ಅಬ್ಬಾಸ್ ರಿಬ್ಬನ್ ಕತ್ತರಿಸುವ ಮೂಲಕ ಶೋರೂಂ ಉದ್ಘಾಟಿಸಿದರು. ಈ ಸಂದರ್ಭ ಪುಟಾಣಿಗಳು ಗಣ್ಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿದರು.
ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮ್ಯಾಕ್ಸ್ ಫ್ಯಾಶನ್ನ ಸಹಾಯಕ ಉಪಾಧ್ಯಕ್ಷ (ಕರ್ನಾಟಕ ಆ್ಯಂಡ್ ಗೋವಾ)ಪಿಯೂಷ್ ಶರ್ಮ ಮಾತನಾಡಿ, ಇದು ಮ್ಯಾಕ್ಸ್ ಫ್ಯಾಶನ್ನ 45 ನೇ ಶೋರೂಂ. ಹೊಸ ಮಾದರಿಯ ವಿನ್ಯಾಸಗಳನ್ನು ಹೊಂದಿರುವ ಈ ಮಳಿಗೆಯಲ್ಲಿ ಪುಟಾಣಿಯಿಂದ ವಯೋವೃದ್ಧರಿಗೂ ಬೇಕಾದ ಬಟ್ಟೆ ಸಂಗ್ರಹಗಳಿವೆ. ಕರಾವಳಿಯ ಮಂಗಳೂರಿನಲ್ಲಿ ಮ್ಯಾಕ್ಸ್ಗೆ ಗ್ರಾಹಕರ ಉತ್ತಮ ಸ್ಪಂದನೆ ಸಿಕ್ಕಿದ್ದು, ಉಡುಪಿಯಲ್ಲೂ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದೇವೆ. ನಾವು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಮ್ಯಾಕ್ಸ್ ಮೊಬೈಲ್ ಆ್ಯಪ್ವಿದ್ದು, ಅದರಿಂದಲೂ ಖರೀದಿಗೆ ಅವಕಾಶವಿದೆ ಎಂದರು.
ಮ್ಯಾಕ್ಸ್ ಫ್ರಾಂಚೈಸಿ ಮುಖ್ಯಸ್ಥ ದೀಪಕ್ ರಮಾನಿ ಮಾತನಾಡಿ, ಉಡುಪಿ ಕಳೆದ 4, 5 ವರ್ಷಗಳಿಂದ ವೇಗವಾಗಿ ಅಭಿವೃದ್ಧಿ ಸಾಸಿದ್ದು, ಜನರ ಫ್ಯಾಶನ್ ಅಭಿರುಚಿ ಕೂಡಾ ಬದಲಾಗಿದೆ. ಜಿಲ್ಲೆಯ ಹೆಚ್ಚಿನ ಗ್ರಾಹಕರು ಮಂಗಳೂರು ಮ್ಯಾಕ್ಸ್ ಶೋರೂಂನಲ್ಲಿ ಖರೀದಿಗೆ ಬರುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಉಡುಪಿಯಲ್ಲೇ ಶೋರೂಂ ತೆರೆದಿದ್ದೇವೆ. ಸುಮಾರು 8500 ಚದರ ಅಡಿ ವಿಸ್ತೀರ್ಣದ ಈ ಮಳಿಗೆಯಲ್ಲಿ ಎಲ್ಲಾ ವಯೋಮಾನದ ಅಭಿರುಚಿಗೆ ಬೇಕಾದ ಬಟ್ಟೆ ಸಿಗುತ್ತದೆ. ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾದೇಶಿಕ ಮಾರುಕಟ್ಟೆ ಮ್ಯಾನೇಜರ್ ರಾಜೇಶ್ ಕುಮಾರ್, ಸಿಟಿ ಸೆಂಟರ್ನ ಮಾಲೀಕ ಜಮಾಲುದ್ದೀನ್ ಉಪಸ್ಥಿತರಿದ್ದರು.