ಮಾತೃಶ್ರೀ ‌ಸೇವಾ ಸಂಘ: ಬಳ್ಕೂರುನಲ್ಲಿ‌ ಆಹಾರ ಸಾಮಗ್ರಿ ವಿತರಣೆ

ಮಣಿಪಾಲ : ಕೊರೋನಾ ವೈರಸ್ ಸೋಂಕಿನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆ ಯಲ್ಲಿ ಆರ್ಥಿಕ ವಾಗಿ ಸಂಕಷ್ಟದಲ್ಲಿರುವ ವಿಶ್ವಕರ್ಮ ‌ಸಮಾಜದವರಿಗೆ ವಿಶ್ವಕರ್ಮ ಸಮಾಜ ಸೇವಾ ಸಂಘ ಬಸ್ರೂರು ಹಾಗೂ ಮಾತೃಶ್ರೀ ಸೇವಾ ಸಂಘ ‌ಮಣಿಪಾಲ ಇವರ ಜಂಟಿ‌ ಆಶ್ರಯದಲ್ಲಿ ಬಸ್ರೂರು ಹಾಗೂ ಬಳ್ಕೂರಿನ 100 ಬಡ ಕುಟುಂಬಗಳಿಗೆ ದಿನನಿತ್ಯ ಬಳಕೆಯ ಆಹಾರ ಸಾಮಗ್ರಿಗಳನ್ನು‌ ವಿತರಿಸಲಾಯಿತು.

ಈ‌ ಸಂದರ್ಭದಲ್ಲಿ ‌ಮಾತೃಶೀ ಸೇವಾ ಸಂಘ ಇದರ ಮಾರ್ಗದರ್ಶಕರಾದ ಡಾ.ಬಳ್ಕೂರು ಗೋಪಾಲ‌ ಆಚಾರ್ಯ, ವಿಶ್ವಕರ್ಮ ‌ಸಮಾಜ‌ ಸೇವಾ‌‌‌ ಸಂಘ ಬಸ್ರೂರು ಬಳ್ಕೂರು ಇದರ ಗೌರವದ್ಯಕ್ಹರಾದ ಸೀತರಾಮ್ ಆಚಾರ್ಯ ಮಾರ್ಗೋಳಿ, ಅಧ್ಯಕ್ಷ ಉಮೇಶ್ ಆಚಾರ್ಯ ಬಸ್ರೂರು, ಮಾತೃಶೀ ಸೇವಾ‌ ಸಂಘ ಮಣಿಪಾಲ ‌ಇದರ ಅಧ್ಯಕ್ಷ ‌ಅರವಿಂದ್‌ ಮಣಿಪಾಲ್, ಸ್ಥಾಪಕ‌ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ್, ಮಾಜಿ‌ ಅಧ್ಯಕ್ಷ ಉದಯ ಸುವರ್ಣ ಕಕ್ಕುಂಜೆ, ಪಂಚಾಯತ್ ಸದಸ್ಯ ರಾಘವೇಂದ್ರ ಮಣಿಪಾಲ್, ರಾಮಚಂದ್ರ ‌ಆಚಾರ್ಯ ಬಳ್ಕೂರು, ರಮೇಶ್ ಆಚಾರ್ಯ ಬಳ್ಕೂರು, ಅಣ್ಣಪ್ಪಯ್ಯ ಆಚಾರ್ಯ ಬಸ್ರೂರು,ಮಹೇಶ್ ಬಿ ಎಚ್ ಹಾಗೂ ಸಂಘದ ಸದಸ್ಯರು ‌ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!