ಬಿಜೆಪಿಗೆ ಮಟ್ಟಾರು ವಲಸಿಗ: ದೇವಿಪ್ರಸಾದ್ ಶೆಟ್ಟಿ
ಉಡುಪಿ: ಬಿ.ಜೆ.ಪಿ.ಯ ಜಿಲ್ಲಾಧ್ಯಕ್ಷ ರಾದ ಮಟ್ಟಾರು ರತ್ನಾಕರ್ ಹೆಗ್ಡೆ ಯವರು ಬೆಳಪುವಿನಲ್ಲಿ ವಲಸಿಗರು ನೆಲೆಸಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಬೆಳಪುವಿನಲ್ಲಿ ಬಡಜನರು ವಾಸಿಸುತ್ತಿದ್ದಾರೆ ಬಿ.ಜೆ.ಪಿ.ಗೆ ಮಟ್ಟಾರು ವಲಸಿಗರೆಂದು ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.ಬೆಳಪುವಿನಲ್ಲಿ ಕಳೆದ ಕೆಲವು ದಶಕಗಳಿಂದ ಜಾತಿ-ಭೇದವಿಲ್ಲದೆ ಧರ್ಮಗಳಲ್ಲಿ ಅಂತರ ವಿರದೇ ಎಲ್ಲರನ್ನು ಪ್ರೀತಿಸಿ ಶಾಂತಿಯಿಂದ ಜೀವನ ನಡೆಸುವ ಜನರಿದ್ದಾರೆ.
ಇಲ್ಲಿ ಶಾಂತಿ ಕದಡಲು ಬಿ.ಜೆ.ಪಿ ಯವರ ಹುನ್ನಾರ ಫಲಿಸದೆಂದು ಶೆಟ್ಟಿ ತಿಳಿಸಿದ್ದಾರೆ.ಬಾಂಬ್ ರಾಜಕೀಯ ಮೂಲಕ ಉಭಯ ಜಿಲ್ಲೆಯಲ್ಲಿ ಅಶಾಂತಿಃ ಸ್ರಷ್ಟಿಸುವ ಮತ್ತು ಸಂಘರ್ಷಕ್ಕೆ ಅವಕಾಶ ಮಾಡಿ ಕೊಡುವ ರಾಜಕೀಯ ಲಾಭಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ದರಾಗಿರುವ ಇಂತ ನಾಯಕರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಶೆಟ್ಟಿ ಒತ್ತಾಯಿಸಿದ್ದಾರೆ.ಬೆಳಪು ಗ್ರಾಮದಲ್ಲಿ ಯಾವುದೇ ಗ್ರಾಮಸ್ಥರ ಸಾಮರಸ್ಯವನ್ನು ಕೆಡಿಸುವ ಯಾವುದೇ ಪ್ರಯತ್ನವನ್ನು ಸಹಿಸುಯುದಿಲ್ಲ ಎಂದು ಶೆಟ್ಟಿ ಎಚ್ಚರಿಸಿದ್ದಾರೆ