ಆರ್ಥಿಕ ಹಿಂಜರಿತ: ಮಾರುತಿ ಸುಜುಕಿ ಎರಡು ದಿನ ಕಾರು ಉತ್ಪಾದನೆ ಸ್ಥಗಿತ
ನವದೆಹಲಿ: ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ತನ್ನ ಗುರುಗ್ರಾಮ ಮತ್ತು ಮಾನೇಸರ ಘಟಕಗಳಲ್ಲಿ ಎರಡು ದಿನ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಸೆ.7 ಮತ್ತು 9ರಂದು ಎರಡೂ ಘಟಕಗಳು ಕಾರ್ಯನಿರ್ವಹಿಸುವುದಿಲ್ಲ. ಈ ಎರಡೂ ದಿನಗಳನ್ನು ಉತ್ಪಾದನೆ ಮಾಡದ ದಿನ ಎಂದು ಘೋಷಿಸಲಾಗುವುದು ಎಂದು ಮಾರುತಿ ಷೇರು ಮಾರುಕಟ್ಟೆಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದೆ. ಮಾರುತಿ ಸುಜುಕಿ ಷೇರುಗಳು ಶೇ 2.5ರಷ್ಟು ಕುಸಿತ ಕಂಡಿವೆ. ಬುಧವಾರ ಮಧ್ಯಾಹ್ನ ₹5900ಕ್ಕೆ ಮಾರುತಿ ಷೇರು ಮಾರಾಟವಾಗುತ್ತಿತ್ತು.
ಆರ್ಥಿಕ ಹಿಂಜರಿತದಿಂದ ಮಾರಾಟ ಕುಸಿತವಾದ ಹಿನ್ನೆಲೆಯಲ್ಲಿ ಈಗಾಗಲೇ ಮಾರುತಿ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನಾ ಸಾಮರ್ಥ್ಯವನ್ನು ಶೇ 33.99ರಷ್ಟು ಇಳಿಸಿರುವ ಕಂಪನಿ ಸತತ ಏಳನೇ ತಿಂಗಳು ಉತ್ಪಾದನೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ.