ಮಣಿಪಾಲ: ಶಂಕಿತ ಕೊರೋನಾ ವೈರಸ್ ಸೊಂಕಿತ ಮಹಿಳೆ ಆಸ್ಪತ್ರೆಗೆ ದಾಖಲು

ಮಣಿಪಾಲ: ಕೆಎಂಸಿ ಆಸ್ಪತ್ರೆಗೆ ಶಂಕಿತ  ಕೊರೋನಾ ವೈರಸ್ ಸೋಂಕಿತ ಮಹಿಳೆ ದಾಖಲಾದ ಮಾಹಿತಿ ತಿಳಿದು ಬಂದಿದೆ. ಮಹಿಳೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದವರು.

68 ವರ್ಷದ ಮಹಿಳೆಯ ಕಫದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ತಿಳಿಸಿದರು. ಕಳೆದ ವಾರ ಸೌದಿಯಲ್ಲಿರುವ ಮೆಕ್ಕಾಗೆ ತೆರಳಿದ್ದ ಮಹಿಳೆಗೆ ಜ್ವರ, ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಅಲ್ಲಿಯೇ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಶಿವಮೊಗ್ಗಕ್ಕೆ ಮರಳಿದ್ದರು.


ಮತ್ತೆ ಜ್ವರ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿಗೆ ಕರೆತರಲಾಗಿದೆ. ಮಹಿಳೆಗೆ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್‌ಒ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!