ಮಣಿಪಾಲ: ವಿಡಿಯೋ ವೈರಲ್ ಮಾಡುತ್ತಿರಾ ಜೊಕೆ, ಗೂಂಡಾ ಪಡೆಯಿದೆ ಎಚ್ಚರಿಕೆ!

ಉಡುಪಿ: ಮಣಿಪಾಲ ಎಂದಾಕ್ಷಣ ನೆನೆಪಾಗುವುದೇ ದೇಶ ವಿದೇಶಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುವ ಊರೆಂದು. ಆದರೆ ಇಲ್ಲಿ ವಿಕೆಂಡ್ ಬಂತೆಂದರೆ ಸಾಕು ಈ ವಿದ್ಯಾರ್ಥಿಗಳ ಆಟೋಪಾಕ್ಕೆ ಲಘಾಮು ಹಾಕುವವರೇ ಇಲ್ಲ. ಕಳೆದ ಶನಿವಾರ ಮಟ ಮಟ ಮಧ್ಯಾಹ್ನ ವಿದ್ಯಾರ್ಥಿನಿಯೊರ್ವಳು ಮಣಿಪಾಲದ ಲಕ್ಷ್ಮೀಂದ್ರ ನಗರದ ಬಾರೊಂದರಲ್ಲಿ ಚೆನ್ನಾಗಿ ಕುಡಿದು ತೂರಾಡುತ್ತ ಹೊರಬರುತ್ತಿದ್ದಳು. ಇದನ್ನು ಸಂತೆಕಟ್ಟೆ ಯುವಕನೊರ್ವ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದ.

ಆದರೆ ಆತ ವಿಡಿಯೋ ಮಾತ್ರ ಮಾಡಿ ಸುಮ್ಮನಿರಲಿಲ್ಲ, ಅದನ್ನು ವಾಟ್ಸ್ ಆಪ್ ಮೂಲಕ ಹರಿಯ ಬಿಟ್ಟಿದ್ದ. ಸದ್ಯ ಈ ವಿಡಿಯೋ ವೈರಲ್ ಆಗಿದ್ದರಿಂದ ಅದೇ ಯುವಕ ಈಗ ಒದೆ ತಿನ್ನುವಂತಾಗಿದೆ.
ಕಾಪು ಲೈಟ್ ಹೌಸ್ ನಿಂದ ಮಣಿಪಾಲದ ಕುಂಡೆಲ್‌ಕಾಡು ಬಳಿ ಬಂದಿದ್ದ ಯುವಕ ವಿದ್ಯಾರ್ಥಿನಿಯೊಬ್ಬಳು ಬಾರ್ ನಿಂದ ತೂರಾಡುತ್ತ ಹೊರ ಬರುವ ವಿಡಿಯೋ ತೆಗೆದಿದ್ದ ಈ ವಿಡಿಯೋ ವಾಟ್ಸ್ ಆಪ್ ನಲ್ಲಿ ವೈರಲ್ ಆಗುತ್ತಿದ್ದಂತೆ ಬಾರ್ ಮಾಲೀಕರು ತಮ್ಮ ಪ್ರಭಾವ ಬಳಸಿ ತಕ್ಷಣ ಯುವಕನ ಪತ್ತೆ ಹಚ್ಚಿ ತನ್ನ ಗೂಂಡಾ ಪಡೆಗಳಿಂದ ಆತನನ್ನು ಬಾರ್‌ಗೆ ಎತ್ತಕಿಕೊಂಡು ಬಂದು ಚೆನ್ನಾಗಿ ತದುಕಿ ಮಣಿಪಾಲ ಪೊಲೀಸರಿಗೆ ನೀಡಿದ್ದಾರೆಂದು ತಿಳಿದು ಬಂದಿದೆ.


ಪೊಲೀಸರು ಮಾತ್ರ ಆತನಿಗೆ ಥಳಿಸಿರುವ ಗೂಂಡಾಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಬಿಟ್ಟು ವಿಡಿಯೋ ವೈರಲ್ ಮಾಡಿದಾತನ ಮೇಲೆಯೇ ಸಾರ್ವಜನಿಕ ಶಾಂತಿ ಭಂಗ ಕೇಸು ದಾಖಲಿಸಿ ಬಿಟ್ಟಿರುತ್ತಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!