ಮಣಿಪಾಲ: ಸಹಾಯಕ ವೈದ್ಯ ನೀಡಿದ ಚುಚ್ಚುಮದ್ದು:ಗೃಹಿಣಿ ಸಾವು

ಮಣಿಪಾಲ: ಇಲ್ಲಿನ ಹೊರ ವಲಯದ ದೊಡ್ಡಣಗುಡ್ಡೆ ಖಾಸಗಿ ಆಸ್ಪತ್ರೆಗೆ ವಿಪರೀತ ತಲೆ ನೋವಿನ ಚಿಕಿತ್ಸೆಗಾಗಿ ದಾಖಲಾದ ಗೃಹಿಣಿ ಸಾವು,
ಆಸ್ಪತ್ರೆಯೇ ಸಹಾಯಕ ವೈದ್ಯ ನೀಡಿದ ಚುಚ್ಚುಮದ್ದು ಗೃಹಿಣಿಯ ಸಾವಿಗೆ ಕಾರಣವೆಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಅ.28 ರಂದು ಬ್ರಹ್ಮಾವರ ಹೊನ್ನಾಳದ ಹಾರಡಿ ನಿವಾಸಿ ಆಲಿಯಾ ಬಾನು (31) ಎಂಬವರಿಗೆ ಆಗಾಗ ತಲೆ ನೋವು ಕಾಣಿಸಿಕೊಳ್ಳುತ್ತಿದ್ದರಿಂದ ನೆರೆಮನೆಯವರ ಮಾಹಿತಿಯಂತೆ ದೊಡ್ಡಣಗುಡ್ಡೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೋಮವಾರ ದಾಖಲಾಗಿದ್ದರು.


ಶುಕ್ರವಾರ ಮಧ್ಯಾಹ್ನ1.35 ಸುಮಾರಿಗೆ ಆಲಿಯಾ ಬಾನು ಮಲಗಿದ್ದ ಬೆಡ್‌ನಿಂದ ಕೆಳಗೆ ಬಿದ್ದಿದ್ದರು. ಇದರಿಂದ ಆಕೆಯ ತುಟಿಗೆ ಗಾಯವಾಗಿತ್ತು. ಅದರ ಚಿಕಿತ್ಸೆಗೆಂದು ಆಸ್ಪತ್ರೆಯ ಸಹಾಯಕ ವೈದ್ಯ ಚುಚ್ಚು ಮದ್ದನ್ನು ನೀಡಿದ್ದರು. ಇದಾದ ಸ್ವಲ್ಪ ಸಮಯದಲ್ಲೆ ಆಲಿಯಾ ಮೃತಪಟ್ಟಿದ್ದಾರೆಂದು ಆಕೆಯ ಸಂಬಂಧಿಕರು ದೂರಿದ್ದಾರೆ.
ಆಸ್ಪತ್ರೆಯ ವೈದ್ಯ ನೀಡಿದ ಚುಚ್ಚು ಮದ್ದಿನಿಂದಲೇ ಆಲಿಯಾ ಮೃತ ಪಟ್ಟಿದ್ದಾಗಿ ಮನೆಯವರ ಆರೋಪವಾಗಿದೆ. ಇದರಿಂದ ಆಕ್ರೋಶಗೊಂಡ ಆಲಿಯಾ ಮನೆಯವರು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆಗ ಸಹಾಯಕ ವೈದ್ಯ ನನ್ನಿಂದ ತಪ್ಪಾಗಿದೆ, ಹಿರಿಯ ವೈದ್ಯರ ಅನುಮತಿ ಇಲ್ಲದೆ ನಾನು ನೀಡಿದ ಚುಚ್ಚು ಮದ್ದಿನಿಂದ ಆಕೆಯ ಸಾವು ಸಂಭವಿಸಿದೆಂದೆ ಒಪ್ಪಿಕೊಂಡಿದ್ದ ಎಂದು ಕುಟುಂಬಸ್ಥರ ಆರೋಪವಾಗಿದೆ.


ನನ್ನಿಂದ ತಪ್ಪಾಗಿದೆ ನನ್ನನ್ನು ಏನು ಬೇಕಾದರೂ ಮಾಡಿ ನಾನು ಸಾಯಲು ಸಿದ್ದನಿದ್ದೇನೆಂದು ಸಹಾಯಕ ವೈದ್ಯ ಹೇಳಿಕೊಂಡಿದ್ದಾಗಿ ಮನೆಯವರು ದೂರಿದರು.
ಗೃಹಿಣಿಗೆ 9 ವರ್ಷ ಮತ್ತು4 ವರ್ಷದ ಗಂಡು ಮಕ್ಕಳಿದ್ದು ವೈದ್ಯರ ಎಡವಟ್ಟಿನಿಂದ ಮಕ್ಕಳು ಅನಾತವಾಗುವಂತಾಯಿತು.

2 thoughts on “ಮಣಿಪಾಲ: ಸಹಾಯಕ ವೈದ್ಯ ನೀಡಿದ ಚುಚ್ಚುಮದ್ದು:ಗೃಹಿಣಿ ಸಾವು

Leave a Reply to Azad Cancel reply

Your email address will not be published. Required fields are marked *

error: Content is protected !!