ಮಣಿಪಾಲ : ಬೇಕ್ ಸ್ಟುಡಿಯೋ ಹದಿನೈದನೇ ಶಾಖೆ ಉದ್ಘಾಟನೆ

ನವನವೀನ ವಿನ್ಯಾಸದ ಕೇಕ್ ಗಳೊಂದಿಗೆ ಗ್ರಾಹಕರ ವಿಶ್ವಾಸವನ್ನು ಪಡೆದಿರುವ ಮತ್ತು ಕಿರಿಯರಿಂದ ಹಿರಿಯರ ತನಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೇಕ್ಗಳನ್ನು ಸಿದ್ಧಪಡಿಸುತ್ತಿರುವ ಕೆಮ್ಮಾಲೆ ಗ್ರೂಪ್ನ ಅಂಗ ಸಂಸ್ಥೆ “ಬೇಕ್ ಸ್ಟುಡಿಯೋ” ಇದರ ಹದಿನೈದನೇ ಶಾಖೆ ಮಣಿಪಾಲದಲ್ಲಿ ಇಂದು ಉದ್ಘಾಟನೆಗೊಂಡಿತು.

ಮಣಿಪಾಲದ ಹೃದಯ ಭಾಗದಲ್ಲಿರುವ ಹೋಟೆಲ್ ರಾಯಲ್ ಇಂಟರ್ನ್ಯಾಷನಲ್ ಇದರ ನೆಲ ಮಹಡಿಯಲ್ಲಿ ಬೇಕ್ ಸ್ಟುಡಿಯೋ ಸ್ಥಾಪನೆಯಾಗಿದ್ದು, ನಗರಸಭಾ ಸದಸ್ಯರಾದ ವಿಜಯಲಕ್ಷ್ಮೀ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಬೇಕರಿಯನ್ನು ಉದ್ಘಾಟನೆ ಗೊಳಿಸಿದರು.

ಜನನಿ ಲಾಡ್ಜಿನ ಮಾಲಕರಾದ ಜಯರಾಜ್ ಹೆಗ್ಡೆ ದೀಪ ಬೆಳಗಿಸುವುದರ ಮೂಲಕ ಬೇಕರಿಯ ಉತ್ಪನ್ನಗಳಿಗೆ ಚಾಲನೆಯನ್ನು ನೀಡಿದರು.

ಬಳಿಕ ನಡೆದ ಸರಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಸದಸ್ಯೆ ವಿಜಯಲಕ್ಷ್ಮಿ, ಈ ಭಾಗದಲ್ಲಿ ಹಲವಾರು ಉದ್ಯಮಗಳಿದ್ದು, ಬಹಳಷ್ಟು ಮಂದಿ ಉದ್ಯಮದಲ್ಲಿ ಯಶಸ್ಸನ್ನು ಕಂಡುಕೊಂಡಿದ್ದು, ಈ ಉದ್ಯಮದ ಮೂಲಕ ಸಾವಿರಾರು ಜನರಿಗೆ ಉದ್ಯೋಗಾವಕಾಶ ಸಿಕ್ಕಿದೆ. ಗ್ರಾಹಕರ ನಿರೀಕ್ಷೆಯಂತೆ ಸಿದ್ಧಪಡಿಸುತ್ತಿರುವ ಕೇಕ್ ಮತ್ತು ಇತರ ತಿಂಡಿ ತಿನಿಸುಗಳ ಉತ್ಪನ್ನಗಳಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ಬೇಕ್ ಸ್ಟುಡಿಯೋ ಹದಿನೈದನೇ ಶಾಖೆ ಲೋಕಾರ್ಪಣೆಗೊಂಡಿದ್ದು ನಿಜಕ್ಕೂ ಸಂತಸವಾಗಿದೆ ಎಂದರು.

ಜನನಿ ಲಾಡ್ಜ್ನ ಮಾಲಕರಾದ ಜಯರಾಜ್ ಹೆಗ್ಡೆ, ಯು ಲೈಕ್ ಮಾಲಕರಾದ ದಿನೇಶ್, ಕಟ್ಟಡದ ಮಾಲಕರು ಮತ್ತು ಲಯನ್ಸ್ ಡಿಸ್ಟ್ರಿಕ್ಟ್ ಉಪ ಗವರ್ನರ್ ಆಗಿರುವ ಲ. ಎಂಜೆಎಫ್ ವಿಶ್ವನಾಥ ಶೆಟ್ಟಿ, ಹಾಜಿ ಅಬ್ದುಲ್ಲಾ ಮಸೀದಿಯ ಧರ್ಮಗುರು ಮೌಲಾನ ಅನಸ್, ರಾಷ್ಟ್ರೀಯ ಮಟ್ಟದ ದೇಹದಾಡ್ಯ ಪಟು ಅಶೋಕ್ ಬಂಗೇರ ನೂತನ ಬೇಕರಿಯ ಉತ್ಪನ್ನಗಳಿಂದ ಜನರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಪಾಲುದಾರರಲ್ಲಿ ಓರ್ವರಾದ ರಾಘವೇಂದ್ರ ಸ್ವಾಗತಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

ಕೆಮ್ಮಾಲೆ ಗ್ರೂಪ್ ನ ಪರಿಚಯ:

ಕೆಮ್ಮಲೆ ಗ್ರೂಪ್ ಉಡುಪಿ, 2010-11ರಲ್ಲಿ ಕೆಮ್ಮಲೆ ಇಂಜಿನಿಯರ್ಸ್ ಮತ್ತು ಕಾಂಟ್ರಾಕ್ಟರ್ಸ್ಎಂಬ ಹೆಸರಿನೊಂದಿಗೆ ವಿನೂತನ ಶೈಲಿಯ ಬಹುಮಹಡಿ ಕಟ್ಟಡ ಕಾಮಗಾರಿಯ ಮೂಲಕ ಉಡುಪಿಯಲ್ಲಿ ಆರಂಭಗೊಂಡಿತು.

ಆಧುನಿಕತೆಗೆ ಪೂರಕವಾಗಿ ಇಂದಿನ ಜನರ ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ತಿಂಡಿ ತಿನಸುಗಳನ್ನು ತಯಾರಿಸುವ ಬಗ್ಗೆ ಸಂಸ್ಥೆಯ ನಿರ್ದೇಶಕರುಗಳ ಚಿಂತನೆ ಫಲವಾಗಿ 2013ರಲ್ಲಿ ಕೆಮ್ಮಲೆ ಗ್ರೂಪ್ ಇದರ ಸಹ ಸಂಸ್ಥೆಯಾದ ಕೆಮ್ಮಲೆ ಫುಡ್ & ಬೇವರೇಜಸ್ ನ ಆರಂಭವಾಯಿತು, ಬೇಕರಿ ಉತ್ಪನ್ನಗಳಿಗೆ ಬೇಕ್ ಸ್ಟುಡಿಯೋ ಎಂಬ ಹೆಸರಿನ ಅಡಿಯಲ್ಲಿ ಉತ್ಕೃಷ್ಟ ಮಟ್ಟದ ತಿಂಡಿ ತಿನಿಸುಗಳಿಗೆ ಹೆಸರುವಾಸಿಯಾಗಿ ಈಗಾಗಲೇ ಮಂಗಳೂರು, ಉಡುಪಿ , ಕಾರವಾರದಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಆ ಪ್ರಸಿದ್ಧಿಯ ಸಲುವಾಗಿ ಸಂಸ್ಥೆಯು ಅತೀ ಕಡಿಮೆ ಅವಧಿಯಲ್ಲಿ ಮೂರು ಜಿಲ್ಲೆಯಲ್ಲಿ ಒಟ್ಟಿಗೆ15 ಬೇಕರಿ ಶಾಖೆಗಳನ್ನು ಹೊಂದಿದೆ.

ಬೇಕ್ ಸ್ಟುಡಿಯೋ ದ ವಿಶೇಷತೆ:

ಉಡುಪಿ, ಮಂಗಳೂರಿನಲ್ಲಿ ಮತ್ತು ಕಾರವಾರದಲ್ಲಿ ಈಗಾಗಲೇ ಹೆಸರುವಾಸಿಯಾದ ಬೇಕ್ ಸ್ಟುಡಿಯೋ, ಯುವ ಉದ್ಯಮಿಗಳ ಚಿಂತನೆಯೊಂದಿಗೆ ಉನ್ನತ ಮಟ್ಟದ ಪರಿಣಿತರ ತಂಡದಿಂದ ಉತ್ಕೃಷ್ಟ ಮಟ್ಟದ ತಿಂಡಿ ತಿನಸುಗಳನ್ನು ಗ್ರಾಹಕರಿಗೆ ಪರಿಚಯಿಸುವಲ್ಲಿ ಬೇಕ್ ಸ್ಟುಡಿಯೋ ಯಶಸ್ಸನ್ನು ಕಂಡುಕೊಂಡಿದೆ. ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನ, ಎಲ್ಲಾ ವರ್ಗದ ಗ್ರಾಹಕರಿಗೆ ಅವರ ಅಭಿರುಚಿಗೆ ತಕ್ಕಂತೆ ತಿಂಡಿಗಳನ್ನು ಪೂರೈಸುತ್ತಿದೆ. ವಿಶೇಷವಾಗಿ ಯಶಸ್ಸನ್ನು ಕಂಡ ಜಾರ್ ಕೇಕ್ ಕೆಲವೇ ತಿಂಗಳ ಹಿಂದೆ ಬಿಡುಗಡೆಗೊಂಡಿದ್ದು, ಉಡುಪಿ, ಮಂಗಳೂರಿನಲ್ಲಿ ಪ್ರಪ್ರಥಮವಾಗಿ ಜಾರ್ ಕೇಕ್ ಅನ್ನು ಪರಿಚಯಿಸಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಮಾತ್ರವಲ್ಲದೆ ಯಾವುದೇ ವಿನ್ಯಾಸದಲ್ಲಿ ಹುಟ್ಟುಹಬ್ಬದ ಕೇಕ್, ಮದುವೆ ಕೇಕ್, ಅಥವಾ ಯಾವುದೇ ಬಗೆಯ ಶುಭ ಸಂದರ್ಭದ ಆಚರಣೆಗೆ ಗ್ರಾಹಕರಿಗೆ ಬೇಕಾಗುವ ಮಾದರಿಯಲ್ಲಿ ರುಚಿಯಾದ ಐಸ್ ಕೇಕ್ ತಯಾರಿಸಲಾಗುತ್ತದೆ. ಬಹು ವೈಶಿಷ್ಟ್ಯತೆಯನ್ನು ಹೊಂದಿರುವ ಈ ಬೇಕರಿಯಲ್ಲಿ ಗ್ರಾಹಕರಿಗೆ ಶುಚಿ ರುಚಿ ಯಾದ ಕೇಕ್, ಪೇಸ್ಟ್ರೀಸ್, ಸ್ವೀಟ್ಸ್, ಬಂಗಾಳಿ ಸ್ವೀಟ್ಸ್, ಡೆಸರ್ಟ್ ಐಟಮ್ಸ್, ಪಿಜ್ಜಾ, ಬರ್ಗರ್, ಸ್ಯಾಂಡ್ವಿಚ್, ಜ್ಯೂಸ್, ಚಾಟ್ಸ್ ಹಾಗೂ ಇನ್ನಿತರ ಆಧುನಿಕ ಮಾದರಿಯ ತಿಂಡಿ ತಿನಸುಗಳನ್ನು ಉತ್ಕ್ರಷ್ಟ ಮಟ್ಟದಲ್ಲಿ ಪರಿಚಯಿಸಲು ಕಾತರದಿಂದ ಸಂಸ್ಥೆ ಕಾಯುತ್ತಿದೆ. ಜೊತೆಗೆ ಬೇಕ್ ಸ್ಟುಡಿಯೋದಿಂದ ಹೋಮ್ ಡೆಲಿವೆರಿ ವ್ಯವಸ್ಥೆ ಕೂಡ ಇದೆ.


ಇದೀಗ ಮಣಿಪಾಲದಲ್ಲಿ ಆರಂಭಿಸಿರುವ ಬೇಕ್ ಸ್ಟುಡಿಯೋವಿನ ಹದಿನೈದ ನೇ ಶಾಖೆಗೆ ಇಲ್ಲಿನ ಜನತೆಯ ಮತ್ತು ಬಹುತೇಕ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರದ ನಿರೀಕ್ಷೆಯಲ್ಲಿದ್ದಾರೆ. ಗ್ರಾಹಕರಿಗೆ ಅನುಗುಣವಾಗಿ ತಿಂಡಿ ತಿನಿಸುಗಳು ಮತ್ತು ಕೇಕ್ ಗಳನ್ನು ಉತ್ತಮ ರೀತಿಯಲ್ಲಿ ಒದಗಿಸಲು ಬೇಕ್ ಸ್ಟುಡಿಯೋ ಸಿದ್ಧವಾಗಿದೆ

Leave a Reply

Your email address will not be published. Required fields are marked *

error: Content is protected !!