ಮಣಿಪಾಲ: ಎರಡು ಮಕ್ಕಳ ತಂದೆ, ಬಸ್ ಚಾಲಕ ಗೃಹಣಿಯೊಂದಿಗೆ ಪರಾರಿ?
ಮಣಿಪಾಲ: ಎರಡು ಮಕ್ಕಳ ತಂದೆ, ಶಾಲಾ ಬಸ್ನ ಚಾಲಕ ಗೃಹಣಿಯೊಂದಿಗೆ ಪರಾರಿ?
ಇಲ್ಲಿನ ಪ್ರತಿಷ್ಠಿತ ಶಾಲೆಯ ಬಸ್ನ ಚಾಲಕ, ಎರಡು ಮಕ್ಕಳ ತಂದೆ, ಕಕ್ಕುಂಜೆ ನಿವಾಸಿ ಸುನೀಲ್ಡಿಸಿಲ್ವ
(೩೮) ನಾಪತ್ತೆಯಾದಾತ.
ಕಳೆದ ಆಗಸ್ಟ್ ಒಂದರಿಂದ ಸುನೀಲ್ ನಾಪತ್ತೆಯಾದ ಬಗ್ಗೆ ಇತನ ಪತ್ನಿ ಸುಕನ್ಯಾ ಮಣಿಪಾಲ ಠಾಣೆಯಲ್ಲಿ ಇಂದು ದೂರು ನೀಡಿದ್ದಾರೆ.
ಈತ ನಾಪತ್ತೆಯಾದ ದಿನವೇ ಮಣಿಪಾಲದ ೮೦ ಬಡಗುಬೆಟ್ಟುವಿನ ಮಾಜಿ ಸೈನಿಕನ ಪತ್ನಿ ನಾಪತ್ತೆಯಾಗಿದ್ದಾಳೆ.
ಇವರಿರ್ವರು ಕಳೆದ ಹಲವಾರು ಸಮಯಗಳಿಂದ ದೂರವಾಣಿ ಸಂಪರ್ಕದಲ್ಲಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಆದ್ದರಿಂದ ಇವರಿರ್ವರು ಜೊತೆಯಾಗಿ ಪರಾರಿಯಾಗಿರಬೇಕೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೃಹಣಿಗೂ ಒಂದು ಮಗು ಇದ್ದು, ಸುನೀಲ್ ಶಾಲಾ ಬಸ್ನಲ್ಲಿ ದುಡಿದ ನಂತರ ಮಣಿಪಾಲದಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದಾನೆ. ಇತನ ಮೊಬೈಲ್ ಸ್ವೀಚ್ ಆಫ್ ಆಗಿದ್ದು ಗೃಹಣಿ ಮೊಬೈಲ್ ಸಿಗ್ನಲ್ ಮೈಸೂರಿನಲ್ಲಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಸಿಕ್ಕಿದೆಂದು ತಿಳಿದು ಬಂದಿದೆ.