ಮಣಿಪಾಲದಲ್ಲಿ ನೇಪಾಳದ ಬಾಲಕ ಪತ್ತೆ

ಉಡುಪಿ: ಮಣಿಪಾಲದ ಹೊಟೇಲೊಂದರಲ್ಲಿ ಕ್ಲೀನರ್ ಕೆಲಸ ನಿರ್ವಹಿಸುತ್ತಿರುವ ನೇಪಾಳ
ಮೂಲದ ಬಾಲಕನ ಬಗ್ಗೆ ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಮತ್ತು ಮಣಿಪಾಲ ಪೊಲೀಸ್ ಇವರೊಂದಿಗೆ ಹೊಟೇಲಿಗೆ ದಾಳಿ ನಡೆಸಿ ಬಾಲಕನನ್ನು ರಕ್ಷಿಸಲಾಯಿತು.

ಬಾಲಕನನ್ನು ವಿಚಾರಿಸಿದಾಗ ಆತನು ನೇಪಾಳ ಮೂಲದವನಾಗಿದ್ದು, ಆತನ ತಂದೆ, ತಾಯಿ ಮತ್ತು ಸಂಬಂಧಿಕರ ಬಗ್ಗೆ ಸರಿಯಾದ ಮಾಹಿತಿ ಗೊತ್ತಿಲ್ಲವೆಂದು ತಿಳಿಸಿರುತ್ತಾನೆ. ಹೊಟೇಲ್ ಮಾಲಿಕರನ್ನು ವಿಚಾರಿಸಿದಾಗ ಅವನು ಕೆಲಸ ಕೇಳಿ ಬಂದಿದ್ದು,
ನಾವು ಕ್ಲೀನರ್ ಆಗಿ ಕೆಲಸಕ್ಕೆ ನಿಯೋಜಿಸಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಆದರೆ ಆತನ ಯಾವುದೇ ಪೂರ್ವಪರ ಮತ್ತು ದಾಖಲೆಗಳನ್ನು ತೆಗೆದುಕೊಂಡಿಲ್ಲವೆಂದು ತಿಳಿಸಿರುತ್ತಾರೆ. ರಕ್ಷಿಸಲಾದ ಬಾಲಕನನ್ನು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ
ಮಾಹಿತಿ ನೀಡಲಾಗಿದ್ದು, ಸಮಿತಿಯ ಮೌಖಿಕ ಆದೇಶದಂತೆ ಸಿ.ಎಸ್.ಐ ಬಾಯ್ಸ್ ಹೋಂ ಇಲ್ಲಿ ಪುನರ್ವಸತಿ ಕಲ್ಪಿಸಲಾಯಿತು.


ಕಾರ್ಯಾಚರಣೆಯಲ್ಲಿ ಉಡುಪಿ 1 ನೇ ವೃತ್ತ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ಉಡುಪಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಪೂರ್ಣಿಮಾ ಬಾನು, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಆಪ್ತ
ಸಮಾಲೋಚಕಿ ಅಂಬಿಕಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಔಟ್‍ರೀಚ್ ವರ್ಕರ್ ಸುನಂದ, ಮಣಿಪಾಲ ಠಾಣಾ ಸಿಬ್ಬಂದಿ ಬಸಪ್ಪ, ಉಡುಪಿ ಮಕ್ಕಳ ಸಹಾಯವಾಣಿಯ ಸದಸ್ಯ ಪ್ರಮೋದ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!