ಮಣಿಪಾಲ:ಚಿನ್ನಾಭರಣ,ಲ್ಯಾಪ್ ಟಾಪ್ ಕಳ್ಳತನ ಪ್ರಕರಣದ ಆರೋಪಿ ಬಂಧನ

ಮಣಿಪಾಲ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಹಾಗೂ ಲ್ಯಾಪ್ ಟಾಪ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣದ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಹೊಯ್ಗೆಪದವುವಿನ ಯೋಗೀಶ್ ಎಂಬಾತನನ್ನು ಮಣಿಪಾಲ ಸಮೀಪದ ಪೆರಂಪಳ್ಳಿ ಬಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಣಿಪಾಲ ಪೊಲೀಸ್ ಠಾಣೆಯ ವಿವಿಧ ಪ್ರಕರಣಗಳಲ್ಲಿ ಕಳವು ಮಾಡಿದ್ದ 133 ಗ್ರಾಂ ಚಿನ್ನಾಭರಣಗಳು, 5 ಲ್ಯಾಪ್ ಟಾಪ್ ಹಾಗೂ 1ಲಕ್ಷ ರೂಪಾಯಿ ನಗದು ಹಣ ಮತ್ತು ಪ್ರಕರಣಕ್ಕೆ ಬಳಸಿದ ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದ್ದು ಈ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 6 ಲಕ್ಷದ 65 ಸಾವಿರ ಅಂದಾಜು ಆಗಿದೆ.

ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಮನೆಗಳ, ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳವು ಪ್ರಕರಣ ನಿರಂತರವಾಗಿದ್ದು ಉಡುಪಿ ಜಿಲ್ಲಾ ಪೊಲೀಸ್ ಗಂಭೀರವಾಗಿ ಪರಿಗಣಿಸಿದ್ದು ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ , ಪ್ರೋಬೇಷನರಿ ಪಿಎಸ್‌ಐ ರಾಜಶೇಖರ್ ವಂದಲಿ, ಸುಮಾ. ಬಿ., ಎಎಸ್‌ಐ ಶೈಲೇಶ್ ಹಾಗೂ ಸಿಬ್ಬಂದಿಯವರಾದ ವಿಶ್ವಜಿತ್ ಸಾಲಿಯಾನ್, ದಯಾಕರ್ ಪ್ರಸಾದ್, ಅಬ್ದುಲ್ ರಜಾಕ್,ಥಾಮ್ಸನ್ ಜಡ್ಕಲ್, ಪ್ರಸನ್ನ, ಆದರ್ಶ,ಹೋಮ್ ಗಾರ್ಡ್ ಶ್ರೀನಿವಾಸ ಶೆಟ್ಟಿಗಾರ್ ಹಾಗೂ ಚಾಲಕ ಸುದೀಪ್ ಮೊದಲಾದವರಿದ್ದರು.ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ನೀಶಾ ಜೆಮ್ಸ್ ರೂ . 20,000 ನಗದು ಪುರಸ್ಕರ ನೀಡುವುದಾಗಿ ಘೋಷಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!