ಜೈಲೂಟ ತಿಂದು ಬೋರ್ ಆಯ್ತಾ ? ಬಿಡುಗಡೆ ಭಾಗ್ಯ ದೊರಕಿಸುತ್ತಾರೆ ಮಂಗಳೂರು ಜೈಲಾಧಿಕಾರಿಗಳು!!

ಮಂಗಳೂರು: ಮೂರು ವರ್ಷದಿಂದ ಜೈಲೂಟ ತಿಂದು ಬೋರ್ ಆಯ್ತಾ ಹಾಗಾದರೆ ನಿಮ್ಮಿಷ್ಟದ ಊಟ ಮಾಡಲು ಬಿಡುಗಡೆ ಭಾಗ್ಯ ದೊರಕಿಸಿ ಕೊಡುತ್ತಾರೆ ಮಂಗಳೂರು ಜೈಲಾಧಿಕಾರಿಗಳು.
ಇದೇನು ದೇಶದಲ್ಲಿ ಎಲ್ಲೂ ಇಲ್ಲದ ಕಾನೂನು ಮಂಗಳೂರು ಜೈಲಿನಲ್ಲಿ ಇದೆ ಎಂದು ನೀವು ಹುಬ್ಬೇರಿಸಬೇಡಿ ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ವರ್ಷದಿಂದ ಕೊಲೆ ಪ್ರಕರಣದ ಆರೋಪಿಗಳಿಗಬ್ಬರನ್ನು ಮೂರು ದಿನದ ಮಟ್ಟಿಗೆ ಜಾಮೀನು ಸಿಕ್ಕಿದೆ ಎಂದು ಬಿಡುಗಡೆಗೊಳಿಸಿದ  ಜೈಲಾಧಿಕಾರಿಗಳು.
ತಮ್ಮ ಎಡವಟ್ಟಿನಿಂದ ಬಿಡುಗಡೆ ಮಾಡಿದ್ದಾಗಿ ತಿಳಿದ ಆರೋಪಿಗಳನ್ನು ಮತ್ತೆ ಅವರನ್ನು ಬಂಧಿಸಿ ಜೈಲೂಟಕ್ಕೆ ಕಳುಹಿಸಿದ ಘಟನೆ ಮಂಗಳೂರಿನ ನಡೆದಿದೆ.
2016ರ ಮೇ 15 ರಂದು ಬಿಜೈ ಕೆಎಸ್ಆರ್’ಟಿಸಿ ಬಳಿ ನಡೆದ ಕದ್ರಿ ರೋಹಿತ್ ಕೋಟ್ಯಾನ್ ಕೊಲೆ ಪ್ರಕರಣದ ಆರೋಪಿಗಳಾಗಿರುವ ಕದ್ರಿ  ನಿವಾಸಿ ಶಿವಾಜಿ ಮತ್ತು ಬಿಕರ್ನಕಟ್ಟೆ ಕಂಡೆಟ್ಟು ನಿವಾಸಿ ಜಗದೀಶ್ ಬಿಡುಗಡೆಗೊಂಡವರು. ಇವರಿಬ್ಬರಿಗೂ ಕೋರ್ಟ್ ನಿಂದ ಆದೇಶ ಬಂದಿದ್ದು ಇದನ್ನು ಜಾಮೀನು ಬಿಡುಗಡೆ ಆದೇಶ ಎಂದು ತಪ್ಪಾಗಿ ತಿಳಿದ ಜೈಲರ್ ಗಳು ಜೈಲು ಅಧೀಕ್ಷಕ ಅನುಮತಿ ಪಡೆದು ಜುಲೈ 9ರಂದು ಬಿಡುಗಡೆಗೊಳಿಸಿದ್ದರು.
ಜೈಲಿನ ಎಲ್ಲ ದಾಖಲಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಜಾಮೀನಿನ ನಿಯಮದ ಪ್ರಕಾರವೇ ಬಿಡುಗಡೆ ಮಾಡಲಾಗಿತ್ತು
ಜಾಮೀನು ಸಿಕ್ಕಿತು ಎಂದು ಆರೋಪಿಗಳು ಖುಷಿಯಿಂದಲೇ ಮನೆಗೆ ಹೋಗಿದ್ರು. ಕೋರ್ಟ್ ನಿಂದ ಆರೋಪಿಗಳು ಬಿಡುಗಡೆಯಾದ ಬಳಿಕ ತಮ್ಮ ವಕೀಲರ ಬಳಿ ತೆರಳಿ  ಈ ಬಗ್ಗೆ ವಿಚಾರಿಸಿದ್ದರು. ಈ ಸಂದರ್ಭ ವಕೀಲರಿಗೆ ಅಚ್ಚರಿ ಕಾದಿತ್ತು. ತಕ್ಷಣ ಎಚ್ಚೆತ್ತ ವಕೀಲರು ಜೈಲಿನಲ್ಲಿ ಆದ ಎಡವಟ್ಟಿನ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಜೈಲಾಧಿಕಾರಿಗಳು ಆರೋಪಿಗಳ ಮನೆಗೆ ಹೋಗಿ ಮತ್ತೆ ಅವರನ್ನು ವಶಕ್ಕೆ ಪಡೆದು ಜೈಲಿಗೆ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!