ಮಂಗಳೂರು:ಅಲೆಗಳ ಹೊಡೆತಕ್ಕೆ ಸಿಕ್ಕ ಹಡಗು 13 ಸಿಬ್ಬಂದಿಗಳ ರಕ್ಷಣೆ

ಮಂಗಳೂರು: ಅಲೆಯಲ್ಲಿ ಸಿಲುಕಿದ್ದ ಹಡಗಿನ 13 ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಸಿಬ್ಬಂದಿ ಜೀವ ರಕ್ಷಕ ದೋಣಿಗಳನ್ನು ಬಳಸಿ ರಕ್ಷಿಸಿರುವ ಘಟನೆ ನವಮಂಗಳೂರು ಬಂದರಿನಲ್ಲಿ ನಡೆದಿದೆ.

ಸೋಮವಾರ ನಸುಕಿನ ಜಾವ  2.30 ರ ಸುಮಾರಿಗೆ ನಡೆದ ಘಟನೆಯಲ್ಲಿ ‘ತ್ರಿದೇವಿ ಪ್ರೇಮ್’ ಹೆಸರಿನ ಹಡಗು ಸಮುದ್ರದಲ್ಲಿ ಉಂಟಾಗಿದ್ದ ತೀವ್ರತರದ ಅಲೆಗಳ ನಡುವೆ ಸಿಲುಕಿದ್ದು ಆ ವೇಳೆ ನವಮಂಗಳೂರು ಪೋರ್ಟ್ ಟ್ರಸ್ಟ್  (ಎನ್‌ಎಂಪಿಟಿ ) ಆಂಕಾರೇಜ್‌ನಿಂದ ಆಗಮಿಸಿದ ಐಸಿಜಿ ಹಡಗು ‘ಅಮರ್ತ್ಯ’ ದಲ್ಲಿನ ಸಿಬ್ಬಂದಿ ರಕ್ಷಿಸಿದ್ದಾರೆ.

ಇದೇ ವೇಳೆ ಕಾಣೆಯಾಗಿರುವ ಇನ್ನೂ ಏಳು ಮಂದಿಗೆ ಶೋಧ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!