ಮಂಗಳೂರಿನ ಸುದ್ದಿವಾಹಿನಿ ಮಾಲಕ ಮಣಿಪಾಲದಲ್ಲಿ ನಿಗೂಢ ಸಾವು
ಮಣಿಪಾಲ: ಮಂಗಳೂರಿನ ಎನ್‌ಎಮ್‌ಸಿ ಸುದ್ದಿವಾಹಿನಿಯ ಮಾಲಕ ರೋಹಿತ್ ರಾಜ್ (56) ಮಣಿಪಾಲದ ತನ್ನ ಮನೆಯಲ್ಲಿ ಸಂಶಯಾಸ್ಪದವಾಗಿ ಮೃತ ಪಟ್ಟಿದ್ದಾರೆ.
ಮಂಗಳೂರಿನಲ್ಲಿ ಪ್ರಥಮವಾಗಿ ಕೇಬಲ್ ಸುದ್ದಿವಾಹಿನಿ ಪ್ರಾರಂಭಿಸಿದ ರೋಹಿತ್ ರಾಜ್ ಮಣಿಪಾಲದ ರೋಯಲ್ ಎಂಬಾಸಿ ಪ್ಲಾಟ್ ನಲ್ಲಿ ತನ್ನ ಮೂರನೇ ಪತ್ನಿ ಜೊತೆ ವಾಸವಾಗಿದ್ದರು.
ನಿನ್ನೆ ರಾತ್ರಿ ಕಡಿಯಾಳಿಯ ಓಸನ್ ಪರ್ಲ್ ಹೋಟೆಲ್ ನಲ್ಲಿ ಹೊಸ ವರ್ಷಚಾರಣೆ ಪಾರ್ಟಿಯಲ್ಲಿ ದಂಪತಿಗಳು ಪಾಲ್ಗೊಂಡು ಮನೆಗೆ ಹೋಗಿದ್ದರು. ನಂತರ ದಂಪತಿಗಳ ನಡುವೆ ಗಲಾಟೆ ನಡೆದು ರೋಹಿತ್ ರಾಜ್ ಮನೆಯ ಫ್ಯಾನ್ ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟ ಸಂದರ್ಭ ಕುಸಿದು ಮೃತ ಪಟ್ಟಿದ್ದಾರೆ
ಈ ಹಿಂದೆ ಮಂಗಳೂರಿನಲ್ಲಿ ರೋಹಿತ್ ಲೈವ್ ಬ್ಯಾಂಡ್ ಯುವತಿಯೊರ್ವಳನ್ನು ಪ್ರೀತಿಸಿ ೨ನೇ ಮದುವೆ ಆಗಿದ್ದ, ಇದರ ಮಾಹಿತಿ ತಿಳಿದು ಮೊದಲ ಪತ್ನಿ ರೋಹಿತ್ ಗೆ ವಿಚ್ಚೇದನ ನೀಡಿದ್ದಳು, ಪ್ರತಿ ನಿತ್ಯ ಗಾಂಜಾ, ಮದ್ಯಪಾನ ವ್ಯಸನಿಯಾಗಿದ್ದ ರೋಹಿತ್ ಮೂರನೇ ಪತ್ನಿಯಾದ ಕಲ್ಕತ್ತ ಮೂಲದ ರೂಮಾ ಸಹಾನಿ ಎಂಬಾಕೆಯೊಂದಿಗೆ ಮಣಿಪಾಲದ ಪ್ಲಾಟ್ ನಲ್ಲಿ ಬಾಡಿಗೆ ವಾಸವಾಗಿದ್ದ. ಮಂಗಳವಾರ ಇಬ್ಬರೂ ಕಂಠ ಪೂರ್ತಿ ಕುಡಿದು ಮನೆಗೆ ಹೋಗಿ ಜಗಳವಾಡಿದ್ದಾರೆ ,ಕುಡಿದ ನಶೆಯಲ್ಲಿ ರೂಮಾ ಸಹಾನಿ ನಿದ್ದೆಗೆ ಜಾರಿದ ಸಂದರ್ಭ ರೋಹಿತ್ ತನ್ನ ಮನೆಯ ಅಡುಗೆ ಕೋಣೆಯ ಫ್ಯಾನ್‌ಗೆ ಹಗ್ಗ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದು, ಈ ಸಂದರ್ಭ ವಿಪರೀತ ಮದ್ಯಪಾನ ಮಾಡಿ ಅಮಲಿನಲ್ಲಿದ್ದ ಕುಸಿದು ಬಿದ್ದ ರೋಹಿತ್‌ನ ತಲೆಗೆ ಗಂಭೀರ ಗಾಯಗೊಂಡು ರಕ್ತ ಸ್ರಾವವಾಗಿ ಮೃತ ಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ನಸುಕಿನಲ್ಲಿ ಎಚ್ಚರವಾದಗ ರೋಹಿತ್ ರಕ್ತದ ಮಡುವಿನಲ್ಲಿದ್ದತನನ್ನು ಸ್ಥಳೀಯರ ಸಹಕಾರದೊಂದಿಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆದಾಗಲೇ ರೋಹಿತ್ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತನ್ನ ಮಗನ ಸಾವಿನಲ್ಲಿ ಸಂಶಯವಿದೆಂದು ರೋಹಿತ್‌ರಾಜ್ ತಂದೆ ವಿಶ್ವನಾಥ್ ಶೆಟ್ಟಿ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.