ಸೌತೆಕಾಯಿ ಬೀಜದ ಸಾರು
ಬೇಕಾಗುವ ಸಾಮಗ್ರಿ
1 ಕಪ್ ಮಂಗಳೂರು ಸೌತೆಕಾಯಿ ಒಳಗಿನ ಬೀಜ
ಇಂಗು
ಕಾಯಿ ಹಾಲು
ಹಸಿಮೆಣಸು
ಮಜ್ಜಿಗೆ
ಉಪ್ಪು
ಒಗ್ಗರಣೆ
ಮಾಡುವ ವಿಧಾನ
ಮೊದಲಿಗೆ ಮಿಕ್ಸಿ ಜಾರಿಗೆ ಸೌತೆಕಾಯಿ ಬೀಜ (ಸರಿಯಾಗಿ ಹಣ್ಣಾದ ಸೌತೆಕಾಯಿ ಉಪಯೋಗಿಸಿ ಇಲ್ಲವಾದಲ್ಲಿ ಬೀಜ ಕಹಿ ಆಗಬಹುದು ) ಇಂಗು ಹಸಿಮೆಣಸು ಹಾಕಿ ಸ್ವಲ್ಪ ಮಜ್ಜಿಗೆಯಲ್ಲಿ ರುಬ್ಬಿಕೊಳ್ಳಿ ನಂತರ ಅದನ್ನ ಸೋಸಿಕೊಳ್ಳಿ ,೧ ತೆಂಗಿನ ಹೋಳು ತುರಿದು ನೀರು ಸೇರಿಸಿ ಹಾಲು ತೆಗೆದುಕೊಳ್ಳಿ
ಒಲೆ ಮೇಲೆ ತುಪ್ಪದ ಒಗ್ಗರಣೆ ಇಡಿ ಅದಕ್ಕೆ ಜೀರಿಗೆ, ಮಜ್ಜಿಗೆ ಮೆಣಸು (ಇದ್ದಲ್ಲಿ ) ಹಾಗು ಕರಿಬೇವು ಸೊಪ್ಪು ಹಾಕಿ ನಂತರ ಮಿಶ್ರಣವನ್ನ ಈ ಬಾಣಲೆಗೆ ಹಾಕಿ ಸ್ವಲ್ಪ ಬಿಸಿ ಮಾಡಿ ನಂತರ ಕಾಯಿಹಾಲನ್ನು ಸೇರಿಸಿ ಬಿಸಿ ಮಾಡಿ ರುಚಿಗೆ ತಕಷ್ಟು ಉಪ್ಪು ಸೇರಿಸಿ ಒಲೆಯಿಂದ ಕೆಳಗೆ ಇಳಿಸಿ ಊಟ ಮಾಡುವ ಕಾಲು ಗಂಟೆಯ ಮೊದಲು ಮಜ್ಜಿಗೆಯನ್ನ ಈ ಸಾರಿಗೆ ಸೇರಿಸಬೇಕು.ಇದನ್ನು ಹಾಗೆಯೇ ಕುಡಿಯಲು ಸಾದ್ಯ.. ಮಳೆಗಾಲದಲ್ಲಿ ಇಂಥಹ ಸಾರು ಹೆಚ್ಚು ರುಚಿ ಕೊಡುತ್ತದೆ . ಆರೋಗ್ಯಕ್ಕೂ ಈ ಸಾರು ಉತ್ತಮ
ಸರೋಜಾ ರಾವ್ ಪೈಕ
ಮಂಗಳೂರು