ಮಲೇರಿಯಾ ವಿರೋಧ ಮಾಸಾಚರಣೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇದೀಗ ಮಲೇರಿಯಾವು ನಿಯಂತ್ರಣದಲ್ಲಿದ್ದು , ಮಲೇರಿಯಾ ನಿರ್ಮೂಲನೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜನರ ಸಹಕಾರ ಅಗತ್ಯ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸಿಂಧೂ ರೂಪೇಶ್ ಹೇಳಿದ್ದಾರೆ.

 ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,  ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಹಾಗೂ ಉಡುಪಿ ನಗರಸಭೆ ಸಹಯೋಗದ ಹಮ್ಮಿಕೊಂಡಿದ್ದ, ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ , ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಏರ್ಪಡಿಸಿದ್ದ  ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

  ಮಲೇರಿಯಾವನ್ನು ನಿರ್ಮೂಲನೆಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು,ಈ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಕಾರ್ಯಕ್ರಮಗಳು  ಏರ್ಪಡಿಸುವಂತೆ  ತಿಳಿಸಿದರು.

ಉಡುಪಿ ನಗರ ಸಭೆಯ ಆಯುಕ್ತ  ಆನಂದ್ ಮಾತನಾಡಿ,  ಉಡುಪಿ ನಗರಸಭಾ ವ್ಯಾಪ್ತಿಯಲ್ಲ್ಲಿ ಹೆಚ್ಚಿನ ಮಲೇರಿಯಾ ಪ್ರಕರಣಗಳು ಕಾರ್ಮಿಕರಲ್ಲಿ ಕಂಡು ಬರುತಿದ್ದು ಸ್ವಚ್ಚತೆಗೆಹೆಚ್ಚಿನ ಗಮನಕೊಡುವಂತೆಆರೋಗ್ಯ ಪರಿವೀಕ್ಷಕರಿಗೆ ಸೂಚಿಸಿದ್ದು, ಸಾರ್ವಜನಿಕರೂ ಸಹ ನಗರಸಭೆಯೊಂದಿಗೆ ಸಹಕರಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಶಾಂತ್ ಭಟ್,ಚ್ಯವ್ಹನ ಡಯೊಗ್ನೋಸ್ಟಿಕ್ ಸೆಂಟರ್‌ನ ಶ್ರಿಪಿ.ಎ ಭಟ್ ,ಧನ್ವಂತರಿ ನರ್ಸಿಂಗ್  ಕಾಲೇಜಿನ   ಶಿವಪ್ರಸಾದ್, ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಸುದಿನ, ಎಂಟಮೊಲಾಜಿಸ್ಟ್   ಮುಕ್ತ, ಜಿಲ್ಲಾಆರೋಗ್ಯ ಮೇಲ್ವೀಚಾರಕರಾದ ಕೆ. ಕೃಷ್ಣಪ್ಪ, ಕಿರಿಯ ಆರೋಗ್ಯ ನಿರೀಕ್ಷಕರಾದ   ವಸಂತ್‌ಕುಮಾರ್ ಹಾಗೂ  ಪ್ರಸನ್ನ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!