ಮಲಬಾರ್‌ ಗೋಲ್ಡ್ ನಿಂದ ಶಿಕ್ಷಕರ ದಿನಾಚರಣೆ, ಸನ್ಮಾನ

ಉಡುಪಿ,ಸೆ.5 : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಶಿಕ್ಷಕರ
ದಿನಾಚರಣೆಯನ್ನು ಗುರುವಾರ ಸಂಸ್ಥೆಯ ಉಡುಪಿ ಮಳಿಗೆಯಲ್ಲಿ ಆಯೋಜಿಸಲಾಗಿತ್ತು . ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ರೀಮತಿ ಶ್ಯಾಮಲ ಕುಂದರ್ ಮಾತನಾಡಿ,ವ್ಯಕ್ತಿತ್ವ ರೂಪಿಸುವ ಶಿಕ್ಷಕರನ್ನು ಗುರುತಿಸುವ ಮಲಬಾರ್ ಗೋಲ್ಡ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಜಿಲ್ಲೆಯ ಶಿಕ್ಷಕರಾದ ನೀಲಾವರ ಸುರೇಂದ್ರ ಅಡಿಗ,ಅಧ್ಯಕ್ಷರು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್, ಶ್ರೀಮತಿ ಕುಲ್ಸುಮ್ ಅಬೂಬಕ್ಕರ್ ಪ್ರಾಂಶುಪಾಲರು ಸಾಲಿಹತ್ ಅರೇಬಿಕ್ ಕಾಲೇಜು ಹೂಡೆ, ಡಾ.ರಮ್ಯಾ ಐತಾಳ್ ಪ್ರಾಧ್ಯಾಪಕರು ಸರಕಾರಿ ಪದವಿ ಪೂರ್ವ ಕಾಲೇಜು ಅಜ್ಜರಕಾಡು, ಡಾ.ಕಾಂತಿ ಹರೀಶ್ ಪ್ರಾಂಶುಪಾಲರು, ಸಂಸ್ಥಾಪಕಿ ವಿಜೇತ ವಿಶೇಷ ಶಾಲೆ ಕಾರ್ಕಳ ಅವರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬಡಗುಬೆಟ್ಟು ಕೋ.ಸೊಸೈಟಿಯ ಮಹಾ ಪ್ರಭಾಂಧಕಾರದ ಇಂದ್ರಾಳಿ ಜಯಕರ ಶೆಟ್ಟಿ, ನಗರ ಸಭೆ ಸದಸ್ಯೆ ಮಾನಸ ಚಿದಾನಂದ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾರ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೆ.5 ರಿಂದ ಸೆ.30 ರವರೆಗೆ ಎಲ್ಲ ಶಿಕ್ಷಕರಿಗೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಪ್ರತಿ 25,000ರೂ ಮೌಲ್ಯದ ಖರೀದಿ ಮೇಲೆ 1000ರೂ. ರಿಯಾಯಿತಿ ನೀಡಲಾಗುವುದು ಎಂದು ಉಡುಪಿ ಮಳಿಗೆಯ ಮುಖ್ಯಸ್ಥ ಹಫೀಝ್ ರೆಹಮಾನ್ ತಿಳಿಸಿದ್ದಾರೆ. ಮಾರ್ಕೆಟಿಂಗ್ ಹೆಡ್ ರಾಘವೇಂದ್ರ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!