ಶಿರ್ವ ಫಾ.ಮಹೇಶ್ ಆತ್ಮಹತ್ಯೆ ಪ್ರಕರಣ: ಪಂ.ಅಧ್ಯಕ್ಷ ಡೇವಿಡ್ ಡಿಸೋಜಾ ಬಂಧನ

ಉಡುಪಿ:(ಉಡುಪಿ ಟೈಮ್ಸ್ ವರದಿ) ಶಿರ್ವ ಚರ್ಚ್‌ನ ಸಹಾಯಕ ಧರ್ಮಗುರು ಫಾ.ಮಹೇಶ್ ಡಿಸೋಜಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಡೇವಿಡ್ ಡಿಸೋಜಾನ ಪತ್ನಿ ಜೊತೆ ನಿರಂತರ ಫೋನ್ ಸಂಭಾಷಣೆ, ಮೊಬೈಲ್ ಚಾಟಿಂಗ್ ನಡೆಸುತ್ತಿದ್ದನ್ನು ಪತ್ನಿಯ ಮೊಬೈಲ್ ನೋಡಿ ತಿಳಿದ ಡೇವಿಡ್ ಫೋನ್ ನಲ್ಲಿ ಫಾ.ಮಹೇಶ್ ರಿಗೆ ಬೆದರಿಕೆ ಹಾಕಿದ್ದ. ಇದು ವಿಧಿವಿಜ್ಞಾನ ಪ್ರಯೋಗಾಲಯದ ಲ್ಲಿ ದೃಢಪಟ್ಟ ಆರೋಪದಡಿ ತನಿಖಾಧಿಕಾರಿ ಕಾಪು ವೃತ್ತ ನೀರಿಕ್ಷಕ ಮಹೇಶ ಪ್ರಸಾದ್ ಆರೋಪಿ ಡೇವಿಡ್ ಡಿಸೋಜಾನನ್ನು ಬಂಧಿಸಿದ್ದಾರೆ.

ಶಿರ್ವ ಚರ್ಚ್‌ಗೆ ಹೋಗಿ ಧರ್ಮಗುರುಗಳಿಗೆ ಬೆದರಿಸಿ, ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಆರೋಪದಡಿ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ನನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!