ಮಹಾರಾಷ್ಟ್ರ, ಹರಿಯಾಣ ಚುನಾವಣೆ: ಸಮೀಕ್ಷೆಯಲ್ಲಿ ಬಿಜೆಪಿಗೆ ಜಯಭೇರಿ
ನವದೆಹಲಿ: ಇಂದು ನಡೆದ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಎರಡೂ ರಾಜ್ಯಗಳಲ್ಲಿ ಕೇಸರಿ ಪಕ್ಷ ಬಿಜೆಪಿ ಜಯಭೇರಿ ಬಾರಿಸಲಿರುವುದು ಖಚಿತವೆಂದು ಸಮೀಕ್ಷೆಗಳು ಹೇಳೂತ್ತಿದೆ. ಚುನಾವಣೆ ಮತದಾನದ ನಂತರ ಬಿಡುಗಡೆಯಾಗಿರುವ ಎಲ್ಲಾ ಪ್ರಮುಖ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಗೆಲುವು ಕಾಣಲಿದೆ ಎಂದು ಹೇಳಿದೆ.
ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾದಾಗ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಕ್ರಮವಾಗಿ ಶೇ.60.05 ಹಾಗೂ ಶೇ. 65ರಷ್ಟು ಮತದಾನವಾಗಿದೆ.
ಎಕ್ಸಿಟ್ ಪೋಲ್ ಗಳ ವಿವರ
ಹರಿಯಾಣ–
ಟೈಮ್ಸ್ ನೌ
ಬಿಜೆಪಿ -71
ಕಾಂಗ್ರೆಸ್ -11
ಐಎನ್‌ಎಲ್‌ಡಿ + ಅಕಾಲಿದಳ -0
ಇತರರು -8
ಇಂಡಿಯಾ ನ್ಯೂಸ್-ಪೋಲ್‌ಸ್ಟ್ರಾಟ್
ಬಿಜೆಪಿ -75-80
ಕಾಂಗ್ರೆಸ್ -9-12
ಐಎನ್‌ಎಲ್‌ಡಿ + ಅಕಾಲಿದಳ -0-1
ಇತರರು -1-3
ನ್ಯೂಸ್ ಎಕ್ಸ್-ಪೋಲ್ಸ್ಟ್ರಾಟ್
ಬಿಜೆಪಿ -75-80
ಕಾಂಗ್ರೆಸ್ -9-12
ಐಎನ್‌ಎಲ್‌ಡಿ-ಅಕಾಲಿದಳ -0-1
ಇತರರು -1-3
ಮಹಾರಾಷ್ಟ್ರ
ಟೈಮ್ಸ್ ನೌ
ಬಿಜೆಪಿ ಶಿವಸೇನೆ – 230
ಕಾಂಗ್ರೆಸ್ ಎನ್‌ಸಿಪಿ – 48
ಇತರರು – 10
ಟಿವಿ 9 ಮರಾಠಿ-ಸಿಸೆರೊ
ಬಿಜೆಪಿ-ಶಿವಸೇನೆ — 197
ಕಾಂಗ್ರೆಸ್ -ಎನ್‌ಸಿಪಿ – 75
ಇತರರು – 10
ಸಿಎನ್ಎನ್ ನ್ಯೂಸ್ 18-ಐಪಿಎಸ್ಒಎಸ್
ಬಿಜೆಪಿ ಶಿವಸೇನೆ – 243
ಕಾಂಗ್ರೆಸ್ ಎನ್‌ಸಿಪಿ – 41
ಇತರರು – 4
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ
ಬಿಜೆಪಿ-ಶಿವಸೇನೆ – 166-194
ಕಾಂಗ್ರೆಸ್ -ಎನ್‌ಸಿಪಿ – 72-90
ಇತರರು – 22-34
ಹರಿಯಾಣದಲ್ಲಿ ಒಟ್ಟಾರೆ 90 ವಿಧಾನಸಭೆ ಕ್ಷೇತ್ರಗಳಿದ್ದು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಪಟ್ಟಕ್ಕಾಗಿ ಹೋರಾಟ ನಡೆಸಿದೆ. ಇನ್ನು ಮಹಾರಾಷ್ಟ್ರದಲ್ಲಿ 288 ವಿಧಾನಸಭೆಗಳ ಪೈಕಿ ಬಿಜೆಪಿ 150 ಮೈತ್ರಿಪಕ್ಷ ಶಿವಸೇನೆ 124 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಇನ್ನು ಕಾಂಗ್ರೆಸ್ 146 ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ 117 ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ.
ಎರಡೂ ರಾಜ್ಯಗಳ ವಿಧಾನಸಭೆ ಫಲಿತಾಂಶ ಇದೇ ಅಕ್ಟೋಬರ್ 24 ರಂದು ಹೊರಬೀಳಲಿದೆ.